For Quick Alerts
ALLOW NOTIFICATIONS  
For Daily Alerts
 

ಫ್ರೆಂಡ್‌ಶಿಪ್ ಕಾರಣಕ್ಕೆ ಆತ ಇನ್ನೂ ತಂಡದಲ್ಲಿದ್ದಾನೆ: ದಾನಿಶ್ ಕನೆರಿಯಾ ಸ್ಪೋಟಕ ಹೇಳಿಕೆ

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ. ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಬಳಿಕ ಪಾಕಿಸ್ತಾನ ತಂಡ ಸತತವಾಗಿ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋಲು ಅನುಭವಿಸಿದ ಬಳಿಕವಂತೂ ಪಾಕಿಸ್ತಾನ ತಂಡ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ತಂಡದ ಮಾಜಿ ಕ್ರಿಕೆಟಿಗರು ಬಾಬರ್ ಅಜಂ ಅವರ ನಾಯಕತ್ವಕ್ಕೆ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಮುಂದಿಟ್ಟು ಟೀಕೆಗಳನ್ನು ಮಾಡುತ್ತಿದ್ದಾರೆ.

ಇಂಥಾ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೆರಿಯಾ ತಂಡದ ವೇಗದ ಬೌಲರ್ ಹಸನ್ ಅಲಿ ಬಗ್ಗೆ ಗಂಭೀರ ಹೇಳಿಕೆಯೊಂದನ್ನು ನೀಡಿದ್ದಾರೆ. ಕೇವಲ ಗೆಳೆತನದ ಕಾರಣಕ್ಕಾಗಿ ಹಸನ್ ಅಲಿ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ದಾನಿಶ್ ಕನೆರಿಯಾ ಹೇಳಿಕೆ ನೀಡಿದ್ದು ಸಂಚಲನವುಂಟು ಮಾಡಿದೆ.

World Cup: Danish Kaneria said Hasan Ali is only in Pakistan team because of friendships

ಆಜ್‌ತಕ್ ಜೊತೆಗೆ ಮಾತನಾಡಿದ ದಾನಿಶ್ ಕನೆರಿಯಾ ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಮಾನದಂಡದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಪಾಕ್ ತಂಡದ ಆಯ್ಕೆ ಸ್ನೇಹ ಹಾಗೂ ವೈಯಕ್ತಿಕ ಸಂಬಂಧದ ಆಧಾರದಲ್ಲಿ ನಡೆಯುತ್ತದೆ ಎಂದು ಹೇಳಿಕೆಯನ್ನು ನೀಡಿದ್ದಾರೆ ಪಾಕ್ ತಂಡದ ಮಾಜಿ ಕ್ರಿಕೆಟಿಗ. ಪಾಕಿಸ್ತಾನ ಶುಕ್ರವಾರ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಆರನೇ ಪಂದ್ಯವನ್ನು ಆಡುತ್ತಿದ್ದು ಈ ಪಂದ್ಯಕ್ಕೂ ಮುನ್ನ ಕನೆರಿಯಾ ಈ ಹೇಳಿಕೆ ನೀಡಿದ್ದಾರೆ.

"ತಂಡವನ್ನು ಘೋಷಣೆ ಮಾಡಿದಾಗಲೇ ಇದು ಸೂಕ್ತವಾದ ಸಂಯೋಜನೆಯನ್ನು ಹೊಂದಿಲ್ಲದ ತಂಡ ಎಂದು ನನಗೆ ಅನಿಸಿತ್ತು. ಇಲ್ಲಿ ತಂಡದ ಆಯ್ಕೆಯನ್ನು ಗೆಳೆತನ ಮತ್ತು ವೈಯಕ್ತಿಕ ಸಂಬಂಧದ ಆಧಾರದಲ್ಲಿ ನಡೆಸಲಾಗುತ್ತದೆ. ಈ ತಂಡ ವಿಶ್ವಕಪ್‌ನಲ್ಲಿ ಪರದಾಡಲಿದೆ ಎಂದು ನನಗೆ ಅನಿಸಿತ್ತು. ಅವರು ರಣತಂತ್ರವನ್ನು ಹೊರತುಪಡಿಸಿ ಉಳಿದೆಲ್ಲದರ ಬಗ್ಗೆಯೂ ಮಾತನಾಡುತ್ತಾರೆ. ಸ್ಪಿನ್ ಮತ್ತು ಬ್ಯಾಟಿಂಗ್‌ಗೆ ನೆರವುಇ ನೀಡುವ ಭಾರತದ ಪಿಚ್‌ಗಳನ್ನು ಅವರು ಅರ್ಥ ಮಾಡುಕೊಳ್ಳುವ ಅಗತ್ಯ ಬಹಳ ಇದೆ. ತಂಡದ ಆಯ್ಕೆಯಲ್ಲಿ ಸಂಪೂರ್ಣ ಎಡವಿದೆ" ಎಂದಿದ್ದಾರೆ ದಾನಿಶ್ ಕನೆರಿಯಾ.

"ನಸೀಮ್ ಶಾ ಅಲಭ್ಯತೆಯಲ್ಲಿ ಪಾಕಿಸ್ತಾನ ತಂಡ ಹೊಸ ಚೆಂಡನ್ನು ಹಸನ್ ಅಲಿಗೆ ನೀಡುತ್ತಿದೆ. ಹಸನ್ ಅಲಿ ಕೇವಲ ಫ್ರೆಂಡ್‌ಶಿಪ್‌ನ ಕಾರಣಕ್ಕಾಗಿ ತಂಡದಲ್ಲಿದ್ದಾರೆ. ಇನ್ನು ಉಸಮ ಮಿರ್ ಮುಸ್ತಾನ್ ಸುಲ್ತಾನ್ ತಂಡದ ಪರವಾಗಿ ಆಡುವ ಆಟಗಾರ ಮತ್ತು ಮುಷ್ತಾಕ್ ಅಹ್ಮದ್ ಇನ್ಜಮಾಮ್ ಉಲ್ ಹಕ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ದೇಶಕ್ಕಾಗಿ ಅಲ್ಲದೆ ಕೆಲವೊಬ್ಬರ ವೈಯಕ್ತಿಕ ಕಾರಣಕ್ಕಾಗಿ ತಂಡವನ್ನು ಆಯ್ಕೆ ಮಾಡಿದಾಗ ಇಂಥಾ ಫಲಿತಾಂಶಗಳೇ ಬರುತ್ತದೆ" ಎಂದಿದ್ದಾರೆ ಪಾಕಿಸ್ತಾನ ತಂಡದ ಮಾಜಿ ಆಟಗಾರ ದಾನಿಶ್ ಕನೆರಿಯಾ.

2023ರ ವಿಶ್ವಕಪ್‌ಗೆ ಇಮಾದ್ ವಾಸಿಮ್ ಅವರನ್ನು ಮತ್ತೊಬ್ಬ ಸ್ಪಿನ್ನರ್ ಆಗಿ ಏಕೆ ಆಯ್ಕೆ ಮಾಡಲಿಲ್ಲ ಎಂದು ಕನೇರಿಯಾ ಪ್ರಶ್ನಿಸಿದ್ದಾರೆ. ಸ್ಪಿನ್ನರ್‌ಗಳಾದ ಶದಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಈ ವಿಶ್ವಕಪ್‌ನಲ್ಲಿ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ.

Story first published: Thursday, October 26, 2023, 16:31 [IST]
Other articles published on Oct 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+