For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಸೆಮಿಫೈನಲ್‌ಗೆ ಪ್ರವೇಶಿಸಬೇಕಿದ್ದರೆ ಆ ತಂಡವನ್ನು ಮಣಿಸಲೇಬೇಕು: ದಿನೇಶ್ ಕಾರ್ತಿಕ್

ಪಾಕಿಸ್ತಾನ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮ ಆರಂಭವನ್ನು ಪಡೆದರೂ ಬಳಿಕ ಹಿನ್ನಡೆ ಕಂಡಿದೆ. ಮೊದಲ ಎರಡು ಪಂದ್ಯಗಳನ್ನು ಗೆದ್ದ ಪಾಕಿಸ್ತಾನ ತಂಡ ಬಳಿಕ ಎರಡು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿದೆ. ಹೀಗಾಗಿ ಪಾಕಿಸ್ತಾನ ತಂಡ ಈಗ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯದ ಹಿರಿಯ ಆಟಗಾರ, ಕಾಮೆಂಟೇಟರ್ ದಿನೇಶ್ ಕಾರ್ತಿಜ್ ಪ್ರತಿಕ್ರಿಯೆ ನೀಡಿದ್ದು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನ ತಂಡ ಸೆಮಿಫೈನಲ್‌ಗೆ ಪ್ರವೇಶಿಸುವ ಸ್ಪರ್ಧೆಯಲ್ಲಿ ಮುಂದುವರಿಯಬೇಕಿದ್ದರೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲೇನೇಕು ಎಂದಿದ್ದಾರೆ ಟೀಮ್ ಇಂಡಿಯಾದ ಅನುಭವಿ ಕ್ರಿಕೆಟಿಗ ದಿನೇಶ್ ಕಾರ್ತಿಕ್. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಅನುಭವಿಸುವ ಮೂಲಕ ಪಾಕ್ ತಂಡ ಈಗ ಸಂಕಷ್ಟಕ್ಕೆ ಸಿಲುಕಿದೆ.

World Cup: Dinesh Karthik said Pakistan have to beat Afghanistan if they want to reach semi-final

"ಪಾಕಿಸ್ತಾನ ತಂಡ ಮುಂದಿನ ಪಂದ್ಯದಲ್ಲಿ ಆತ್ಮವಿಶ್ವಾಸದಿಂದ ಇರುವ ಅಫ್ಘಾನಿಸ್ತಾನದ ವಿರುದ್ಧ ಆಡಲಿದೆ. ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದರೆ ನಂತರದ ಪಂದ್ಯದಲ್ಲಿ ಸೋಲು ಅನುಭವಿಸಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನ 2 ಉತ್ತಮ ಗೆಲುವು ಸಾಧಿಸಿದರೂ ನಂತರ ಎರಡು ಸೋಲು ಅನುಭವಿಸಿದ್ದು ಹಿನ್ನಡೆಯುಂಟಾಗಿದೆ. ಪಾಕಿಸ್ತಾನ ತಂಡ ಸೆಮಿಫೈನಲ್‌ನಲ್ಲಿ ಆಡುವ ಮಹತ್ವಾಕಾಂಕ್ಷೆ ಹೊಂದಿದ್ದರೆ ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಬೇಕು" ಎಂದಿದ್ದಾರೆ ದಿನೇಶ್ ಕಾರ್ತಿಕ್.

ಆಸ್ಟ್ರೇಲಿಯಾದ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಶ್ ಇಬ್ಬರು ಕೂಡ ಬೃಹತ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಪಂದ್ಯದ ಆರಂಭದಲ್ಲಿ ಜೀವದಾನ ಪಡೆದ ವಾರ್ನರ್ ಈ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು. 124 ಎಸೆತಗಳನ್ನು ಎದುರಿಸಿದ ವಾರ್ನರ್ 163 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ಅವರಿಗೆ ಅಮೋಘವಾಗಿ ಸಾಥ್ ನೀಡಿದ ಮಾರ್ಶ್ 108 ಎಸೆತಗಳಲ್ಲಿ 121 ರನ್‌ಗಳನ್ನು ಬಾರಿಸಿದರು.

ತಂಡದ ಮೊತ್ತ 259 ರನ್‌ಗಳಾಗಿದ್ದಾಗ ಮಿಚಲ್ ಮಾರ್ಶ್ ಔಟ್ ಆಗುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಅದಾದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ ಎಸೆತದಲ್ಲಿಉಏ ಔಟ್ ಆಗುವ ಮೂಲಕ ಪಾಕ್ ತಂಡಕ್ಕೆ ಮತ್ತೊಂದು ಮೇಲುಗೈ ದೊರೆಯಿತು. ಅದಾದ ಬಳಿಕ ಪಾಕಿಸ್ತಾನದ ಬೌಲರ್‌ಗಳು ಆಸ್ಟ್ರೇಲಿಯಾದ ವಿರುದ್ಧ ಉತ್ತಮವಾಗಿ ಮೇಲುಗೈ ಸಾಧಿಸಿದರು. ಡೇವಿಡ್ ವಾರ್ನರ್ 163 ರನ್‌ಗಳಿಗೆ ವಿಕೆಟ್ ಕಳೆದುಕೊಂಡ ನಂತರ ಪಾಕಿಸ್ತಾನ ತಂಡದ ಬೌಲಿಂಗ್ ವಿಭಾಗ ಮೇಲುಗೈ ಸಾಧಿಸಿತು.

ಆಸ್ಟ್ರೇಲಿಯಾ ನೀಡಿದ 368 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ಅದ್ಭುತ ಆರಂಭವನ್ನು ಪಡೆದುಕೊಂಡಿತು. ಮೊದಲ ವಿಕೆಟ್‌ಗೆ 134ನ್‌ಗಳ ಭರ್ಜರಿ ಆರಂಭವನ್ನು ಪಡೆದ ಪಾಕಿಸ್ತಾನ ದಿಟ್ಟವಾಗಿ ರನ್ ಬೆನ್ನಟ್ಟುವ ಮುನ್ಸೂಚನೆ ನೀಡಿತ್ತು. ಆದರೆ ಮಧ್ಯಮ ಕ್ರಮಾಂಕದಿಂದ ನಿರೀಕ್ಷಿರ ಬೆಂಬಲ ದೊರೆಯದ ಕಾರಣ 305 ರನ್‌ಗಳಿಗೆ ಪಾಕ್ ಆಲೌಟ್ ಆಗುವ ಮೂಲಕ ಸೋಲು ಅನುಭವಿಸಿದೆ

Story first published: Saturday, October 21, 2023, 13:41 [IST]
Other articles published on Oct 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+