For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ರೀವೈಂಡ್‌: ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ್ದ ಕಪಿಲ್‌ ದೇವ್‌

World Cup flashbacks: When India used Kapil Dev as an opener in 1992

ಬೆಂಗಳೂರು, ಮೇ 06: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಆತಿಥ್ಯದಲ್ಲಿ ನಡೆದ 1992ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಕಳಪೆ ಆರಂಭ ಕಂಡಿತ್ತು. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ 9 ರನ್‌ಗಳಿಂದ ಸೋತು ಕಂಗಾಲಾಗಿತ್ತು.

ತಂಡದ ಸೋಲಿಗೆ ಪ್ರಮುಖ ಕಾರಣವೆಂದರೆ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳ ಆಮೆಗತಿಯ ಬ್ಯಾಟಿಂಗ್‌. ಅದರಲ್ಲೂ ಅನುಭವಿ ಆಟಗಾರ ರವಿ ಶಾಸ್ತ್ರಿ ಒಂದೊಂದು ರನ್‌ ಹೆಕ್ಕಲು ತಿಣುಕಾಡುತ್ತಿದದ್ದು ತಂಡದ ಮೇಲೆ ಭಾರಿ ಪರಿಣಾಮ ಬೀರುತ್ತಿತ್ತು. 237 ರನ್‌ಗಳ ಗುರಿ ಬೆನ್ನತ್ತಿದ್ದಾಗ 57 ರನ್‌ಗಳನ್ನು ಗಳಿಸಲು ಶಾಸ್ತ್ರಿ 112 ಎಸೆತಗಳನ್ನು ತೆಗೆದುಕೊಂಡ ಕಾರಣ ಟೀಮ್‌ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೆಚ್ಚಾಗಿತ್ತು.

ಇದಕ್ಕೂ ಮುನ್ನ ವಿಶ್ವಕಪ್‌ಗಾಗಿ ನಡೆಸಲಾದ ಪೂರ್ವ ಸಿದ್ದತೆಯ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಯಲ್ಲೂ ಶಾಸ್ತ್ರಿ ಆಮೆಗತಿಯಲ್ಲೇ ಬ್ಯಾಟಿಂಗ್‌ ನಡೆಸಿದ್ದರು. ಇದಕ್ಕೆ ಕೂಡಲೇ ಪರಿಹಾರ ಕಂಡುಕೊಳ್ಳಲು ವಿಭಿನ್ನ ಆಲೋಚನೆ ಮಾಡುವ ಅನಿವಾರ್ಯತೆ ಎದುರಾಗಿತ್ತು.

ಭಾರತ ತಂಡದ ಅಂದಿನ ಮ್ಯಾನೇಜರ್‌ ಅಬ್ಬಾಸ್‌ ಅಲಿ ಬೇಗ್‌ ಮತ್ತು ನಾಯಕ ಮೊಹಮ್ಮದ್‌ ಅಝರುದ್ದೀನ್‌ ಬಳಿಕ ಎಲ್ಲರಿಗೂ ಅಚ್ಚರಿ ತರುವಂತಹ ಐಡಿಯಾ ಮಾಡಿದ್ದರು. ಅದೇನೆಂದರೆ ತಮ್ಮ ನಾಲ್ಕನೇ ಹಾಗೂ ವೃತ್ತಿ ಬದುಕಿನ ಕೊನೆಯ ವಿಶ್ವಕಪ್‌ ಆಡುತ್ತಿದ್ದ ಆಲ್‌ರೌಂಡರ್‌ ಕಪಿಲ್‌ ದೇವ್‌ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಸುವುದು.

ಅಂತೆಯೇ ಪಿಂಚ್‌ ಹಿಟ್ಟರ್‌ ಕಪಿಲ್‌ ದೇವ್‌ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೃಷ್ಣಾಮಚಾರಿ ಶ್ರೀಕಾಂತ್‌ ಅವರೊಟ್ಟಿಗೆ ಆರಂಭಿಕರಾಗಿ ಕಣಕ್ಕಿಳಿದರು. ಆದರೆ, ಕಪಿಲ್‌ ದೇವ್‌ ಅವರ ಬ್ಯಾಟಿಂಗ್‌ ವೀಕ್ಷಿಸಲು ಕಾದು ಕುಳಿತಿದ್ದ ಅಭಿಮಾನಿಗಳಿದೆ ನಿರಾಸೆ ಎದುರಾಯಿತು. ಮಳೆಯಿಂದಾಗಿ ಕೇವಲ 2 ಎಸೆತಗಳನ್ನು ಕಂಡ ಪಂದ್ಯ ರದ್ದಾಗಿ ಇತ್ತಂಡಗಳು ಅಂಕಗಳನ್ನು ಹಂಚಿಕೊಂಡವು. ಶ್ರೀಲಂಕಾ ಎದುರು ಅಂಕ ಹಂಚಿಕೊಳ್ಳುವಂತಾದದ್ದು ಭಾರತ ತಂಡಕ್ಕೆ ಭಾರಿ ಹೊಡೆತವನ್ನೇ ನೀಡಿತ್ತು.

ಬಳಿಕ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಕಪಿಲ್‌ ಅವರನ್ನು ಮರಳಿ ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಯಿತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಪಿಲ್‌ 26 ಎಸೆತಗಳಲ್ಲಿ 35 ರನ್‌ ಸಿಡಿಸಿ ಗಮನ ಸೆಳೆದಿದ್ದರು. ಹೀಗಾಗಿ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಮರಳಿ ಆರಂಭಕಾರನಾಗಿ ಕಣಕ್ಕಿಳಿಯುವ ಅವಕಾಶ ಪಡೆದುಕೊಂಡರು. ಆದರೆ, 14 ಎಸೆತಗಳಲ್ಲಿ 1 ಸಿಕ್ಸರ್‌ ಒಳಗೊಂಡ 10 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತರಾದರು. ಬಳಿಕ ಟೂರ್ನಿಯ ಉಳಿದೆಲ್ಲಾ ಪಂದ್ಯಗಳಲ್ಲಿ ಕಪಿಲ್‌ ಮಧ್ಯಮ ಕ್ರಮಾಂಕದಲ್ಲೇ ಆಡಿದರು.

1992ರ ವಿಶ್ವಕಪ್‌ನಲ್ಲಿ ಎಲ್ಲಾ ತಂಡಗಳು ಹಲವು ಪ್ರಯೋಗಗಳನ್ನು ಮಾಡಿದವು. ಭಾರತ ತಂಡ ಕೂಡ ಪಿಂಚ್‌ ಹಿಟ್ಟರ್‌ ಕಪಿಲ್ ಅವರಿಂದ ಇನಿಂಗ್ಸ್‌ ಆರಂಭಿಸಿತಾದರೂ ಫಲಿತಾಂಶ ಹೇಳಿಕೊಲ್ಳುವ ಮಟ್ಟಿಗೆ ಸಫಲವಾಗಲಿಲ್ಲ. 1993ರಲ್ಲೂ ಕಪಿಲ್‌ ಆರಂಭಿಕರಾಗಿ ಒಂದು ಪಂದ್ಯವನ್ನಾಡಿದ್ದರು. ವೆಸ್ಟ್‌ ಇಂಡೀಸ್‌ ವಿರುದ್ಧದ ಹೀರೊ ಕಪ್‌ ಸರಣಿಯಲ್ಲಿ ಓಪನಿಂಗ್‌ ಮಾಡಿದ ಕಪಿಲ್‌ ಕೇವಲ ಒಂದು ರನ್‌ ಗಳಿಸಿ ಕರ್ಟ್ಲೀ ಆಂಬ್ರೋಸ್‌ಗೆ ವಿಕೆಟ್‌ ಒಪ್ಪಿಸಿದರು.

Story first published: Monday, May 6, 2019, 12:14 [IST]
Other articles published on May 6, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+