ಕ್ರಿಸ್ ಗೇಲ್ 215 ಹೊಡೆಯಲು ಇಂಡಿಯಾನೇ ಕಾರಣ!
ಬೆಂಗಳೂರು ಫೆ. 25 :ಕ್ರಿಸ್ ಗೇಲ್ ಜಿಂಬಾಬ್ವೆ ವಿರುದ್ಧ ದ್ವಿಶತಕ ಸಿಡಿಸಲು ಭಾರತವೂ ಒಂದು ದೃಷ್ಟಿಯಲ್ಲಿ ಕಾರಣ. ಕ್ಯಾನ್ ಬೇರಾದಲ್ಲಿ ಗೇಲ್ ರನ್ ಹೊಳೆ ಹರಿಸಿದ ಬ್ಯಾಟ್ ಭಾರತದಲ್ಲಿ ತಯಾರಾಗಿದ್ದು. ಈ ಬ್ಯಾಟ್ ಬಳಸಿಯೇ ಗೇಲ್ ಅತಿವೇಗದ ದ್ವಿಶತಕ ಸಾಧನೆ ಮಾಡಿದ್ದಾರೆ.
ಏಕದಿನ ಇತಿಹಾಸದಲ್ಲಿ 5ನೇ ದ್ವಿಶತಕ ಸಾಧನೆ ಮಾಡಿದ ಗೈಲ್ ಇನಿಂಗ್ಸ್ ನಲ್ಲಿ 16 ಭರ್ಜರಿ ಸಿಕ್ಸರ್ ಗಳಿದ್ದವು. ಎಡಿ ಡೆವಿಲಿಯರ್ಸ್ ಮತ್ತು ರೋಹಿತ್ ಶರ್ಮಾ ಸಿಕ್ಸರ್ ದಾಖಲೆಗಳ ಸಮಕ್ಕೆ ಗೇಲ್ ನಿಂತರು.[ಟ್ವೀಟ್ : ಗೇಲ್ ಬ್ಯಾಟ್ ಎಕೆ 47 ಥರಾ ಕಾಣ್ತಾ ಇತ್ತಂತೆ !]

ಜಿಂಬಾಬ್ವೆ ಬೌಲರ್ ಗಳನ್ನು ಬೆಂಡೆತ್ತಿದ್ದ 'ಸ್ಪಾರ್ಟನ್ ' ಸ್ಫೋರ್ಟ್ಸ್ ಕ್ಲಬ್ ಸ್ಟಿಕ್ಕರ್ ಉಳ್ಳ ಬ್ಯಾಟ್ ಭಾರತದ ಜಲಂದರ್ ನಲ್ಲಿ ತಯಾರಾಗಿದ್ದು. ಈ ಬ್ಯಾಟ್ ಮೂಲಕವೇ ಅಂಗಳದ ಮೂಲೆ ಮೂಲೆಗೆ ಗೇಲ್ ಚೆಂಡನ್ನು ಅಟ್ಟಿದ್ದರು.
ಗೇಲ್ ಮತ್ತು ಸ್ಪಾರ್ಟನ್ ಕ್ಲಬ್ ನಡುವಿನ ಸಂಬಂಧ 2012ರ ಐಪಿಎಲ್ ನಿಂದಲೂ ಇದೆ. ಬೆಂಗಳೂರು ರಾಐಲ್ ಚ್ಯಾಲೆಂಜರ್ಸ್ ಪರವಾಗಿಯೂ ಗೇಲ್ ರನ್ ಹೊಳೆ ಹರಿಸಿದ್ದಾಗ ಇದೇ ಸ್ಟಿಕ್ಕರ್ ನ ಬ್ಯಾಟ್ ಬಳಸಿದ್ದರು.[ಕ್ರಿಸ್ ಗೇಲ್ ದಾಖಲೆ ನಂತರ ಡಿಆರ್ ಎಸ್ ವಿವಾದ]
ಗೇಲ್ ಅವರೊಂದಿಗೆ ಭಾರತ ತಂಡದ ನಾಯಕ ಎಂಸ್ ಧೋನಿ, ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್, ಮಿಚೆಲ್ ಜಾನ್ಸನ್ ಮತ್ತು ಸರ್ ವಿವಿಯನ್ ರಿಚರ್ಡ್ಸ್ ಸ್ಪಾರ್ಟನ್ ಕ್ರಿಕೆಟ್ ಕ್ಲಬ್ ಅಂಬಾಸಿಡರ್ ಗಳಾಗಿದ್ದಾರೆ.
ಕ್ರಿಸ್ ಗೇಲ್ ಕಳೆದ ಎರಡು ವರ್ಷಗಳಿಂದ ಹೆಚ್ಚು ಭಾರದ ಬ್ಯಾಟ್ ಗಳನ್ನೇ ಬಳಸುತ್ತಿದ್ದಾರೆ. 1,250 ರಿಂದ 1,300 ಗ್ರಾಂ ನಡುವಿನ ಬ್ಯಾಟ್ ಪಂದ್ಯದ ದಿಕ್ಕನ್ನೇ ಬದಲಾಯಿಸುತ್ತಿದೆ. ನಾವು ಸುಮಾರು 15 ಕ್ಕೂ ಅಧಿಕ ಬ್ಯಾಟ್ ಕಳಿಸಿಕೊಟ್ಟಿದ್ದೇವು. ಅದರಲ್ಲಿ ಇಷ್ಟವಾಗಿರುವ ಒಂದನ್ನು ಗೇಲ್ ಬಳಸುತ್ತಿದ್ದಾರೆ ಎಂದು ಸ್ಪಾರ್ಟನ್ ಕ್ಲಬ್ ಮ ಅಮೀತ್ ಶರ್ಮಾ ಹೇಳಿದ್ದಾರೆ. ವಿಶ್ವದಾಖಲೆ ಶತಕದ ನಂತರ ಗೇಲ್ ಟ್ವಿಟ್ಟರ್ ಮೂಲಕ ಸ್ಪಾರ್ಟನ್ ಕ್ಲಬ್ ಗೆ ಧನ್ಯವಾದ ಸಲ್ಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications