For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ಮುಂದೆ ನಡೆಯದ ಅಫ್ಘನ್ನರ ಆಟ: ಸತತ ನಾಲ್ಕನೇ ಪಂದ್ಯ ಗೆದ್ದು ಮುನ್ನುಗ್ಗಿದ ಕಿವೀಸ್

ವಿಶ್ವಕಪ್ ಟೂರ್ನಿಯಲ್ಲಿ ಇಂದು ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಕಿವೀಸ್ ಪಡೆ ಭಾರೀ ಅಂತರದ ಗೆಲುವು ಸಾಧಿಸಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸಿದ ಆತ್ಮವಿಶ್ವಾಸದಲ್ಲಿದ್ದ ಅಫ್ಘಾನಿಸ್ತಾನ ತಂಡ ಈ ಪಂದ್ಯದಲ್ಲಿ ಬೌಲಿಂಗ್ ಸಂದರ್ಭದಲ್ಲಿ ಒಂದು ಹಂತದಲ್ಲಿ ಮೇಲುಗೈ ಸಾಧಿಸಿದರೂ ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ವಿಫಲವಾಯಿತು. ಬಳಿಕ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲವಾಗಿದ್ದು ಕೇವಲ 139 ರನ್‌ಗಳಿಗೆ ಆಲೌಟ್ ಆಗುವ ಮೂಲಕ 149 ರನ್‌ಗಳ ಅಂತರದ ಭಾರೀ ಸೋಲು ಅನುಭವಿಸಿದೆ.

ನ್ಯೂಜಿಲೆಂಡ್ ತಂಡ ನೀಡಿದ 289 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಯಾವ ಹಂತದಲ್ಲಿಯೂ ಪ್ರತಿರೋಧವೊಡ್ಡುವ ಸುಳಿವೇ ನೀಡಲಿಲ್ಲ. ನ್ಯೂಜಿಲೆಂಡ್ ಬೌಲರ್‌ಗಳ ಸಂಘಟಿತ ಪ್ರದರ್ಶನ ಹಾಗೂ ಅದ್ಭುತ ಫಿಲ್ಡಿಂಗ್ ಮುಂದೆ ಅಫ್ಘಾನಿಸ್ತಾನ ಸಂಪೂರ್ಣ ಶರಣಾಗಿದೆ. ಅಫ್ಘಾನಿಸ್ತಾನ ತಂಡದ ಪರವಾಗಿ ರಹಮತ್ ಶಾ ಅವರ 36 ರನ್ ವೈಯಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ.

World cup, match 16: New Zealand won by 149 runs against Afghanistan

ಕಳೆದ ಪಂದ್ಯದಲ್ಲಿ ಮಿಂಚಿದ್ದ ರಹ್ಮನುಲ್ಲಾ ಗುರ್ಬಾಜ್ ಹಾಗೂ ಇಕ್ರಮ್ ಅಲಿಖಿಲ್ ಸೇರಿದಂತೆ ಎಲ್ಲಾ ಆಟಗಾರರು ಕೂಡ ಈ ಪಂದ್ಯದಲ್ಲಿ ವಿಫಲವಾದರು. ಹೀಗಾಗಿ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ 34.4 ಓವರ್‌ಗಳಲ್ಲಿ 139 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಹೀನಾಯವಾಗಿ ಶರಣಾಗಿದೆ.

ಇನ್ನು ಈ ಪಂದ್ಯದಲ್ಲಿ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡ ನ್ಯೂಜಿಲೆಂಡ್ ತಂಡ ಡೆವೋನ್ ಕಾನ್ವೆ ಅವರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ವಿಲ್ ಯಂಗ್ ಹಾಗೂ ರಚಿನ್ ರವೀಂದ್ರ ಅರ್ಧ ಶತಕದ ಜೊತೆಯಾಟವನ್ನಾಡುವ ಮೂಲಕ ಚೇತರಿಕೆ ನಿಡಿದರು. ಆದರೆ ತಂಡದ ಮೊತ್ತ 109 ರನ್‌ಗಳಾಗಿದ್ದಾಗ ರಚಿನ್ ರವೀಂದ್ರ ವಿಕೆಟ್ ಕಳೆದುಕೊಳ್ಳುವ ಜೊತೆಗೆ ಕಿವೀಸ್ ತಮಡ ಹಠಾತ್ ಕುಸಿತಕ್ಕೆ ಒಳಗಾಯಿತು.

ಅಜ್ಮತುಲ್ಲಾ ಅವರ ಒಂದೇ ಓವರ್‌ನಲ್ಲಿ ರಚಿನ್ ರವೀಂದ್ರ ವಿಕೆಟ್ ಪಡೆದ ಬಳಿಕ ವಿಲ್ ಯಂಗ್ ಕೂಡ ವಿಕೆಟ್ ಕಳೆದುಕೊಂಡರು. ನಂತರ ಡ್ಯಾರೆನ್ ಮಿಚೆಲ್ ಕೂಡ ವಿಕೆಟ್ ಕಳೆದುಕೊಂಡಾಗ 110 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಿಂದ ಕಿವೀಸ್ ಪಡೆಯನ್ನುಮೇಲಕ್ಕೆತ್ತಿದ್ದು ನಾಯಕ ಟಾಮ್ ಲ್ಯಾಥಮ್ ಹಾಗೂ ಗ್ಲೆನ್ ಫಿಲಿಪ್ಸ್.

ಲ್ಯಾಥಮ್ ಹಾಗೂ ಫಿಲಿಪ್ಸ್ ಜೋಡಿ 144 ರನ್‌ಗಳ ಅಮೋಘ ಜೊತೆಯಾಟವನ್ನು ಆಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಲ್ಲದೆ ಉತ್ತಮ ಮೊತ್ತದತ್ತ ಮುನ್ನಡೆಸಿದರು. 254 ರನ್‌ಗಳಿಸಿದ್ದಾಗ 71 ರನ್‌ಗಳಿಸಿದ ಗ್ಲೆನ್ ಫಿಲಿಪ್ಸ್ ನವೀನ್ ಉಲ್ ಹಕ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಈ ಜೋಡಿ ಬೇರ್ಪಟ್ಟಿತು. ನಂತರ ಅದೇ ಓವರ್‌ನಲ್ಲಿ ಟಾಮ್ ಲಾಥಮ್ ಕೂಡ ಬೌಲ್ಡ್ ಆಗಿ ವಿಕೆಟ್ ಕಳೆದುಕೊಂಡರು. ನಂತರ ಮಾರ್ಕ್ ಚಾಪ್ಮನ್ ಹಾಗೂ ಸ್ಯಾಂಟ್ನರ್ ತಂಡದ ಮೊತ್ತವನ್ನು 288 ರನ್‌ಗಳಿಗ ತಲುಪಿಸುವಲ್ಲಿ ಯಶಸ್ವಿಯಾದರು.

ನ್ಯೂಜಿಲೆಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
ಬೆಂಚ್: ಇಶ್ ಸೋಧಿ, ಜೇಮ್ಸ್ ನೀಶಮ್, ಟಿಮ್ ಸೌಥಿ

ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ
ಬೆಂಚ್: ನಜೀಬುಲ್ಲಾ ಜದ್ರಾನ್, ಅಬ್ದುಲ್ ರೆಹಮಾನ್, ರಿಯಾಜ್ ಹಸನ್, ನೂರ್ ಅಹ್ಮದ್

Story first published: Wednesday, October 18, 2023, 21:51 [IST]
Other articles published on Oct 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+