ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳು ರೋಚಕವಾಗಿ ಸೆಣೆಸಾಟ ನಡೆಸುತ್ತಿದೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಶ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದು ಬೃಹತ್ ಮೊತ್ತಕ್ಕೆ ಕಾರಣವಾದರು. ಮೊದಲ ವಿಕೆಟ್‌ಗೆ ಭರ್ಜರಿ 259 ರನ್‌ಗಳ ದಾಖಲೆಯ ಜೊತೆಯಾಟ ನೀಡಿದ ಈ ಜೋಡಿ ಆಸ್ಟ್ರೇಲಿಯಾ ತಂಡವನ್ನು 400+ ರನ್‌ಗಳತ್ತ ಹೆಜ್ಜೆಯಿಟ್ಟಿರುವುದು ಸ್ಪಷ್ಟವಾಗಿತ್ತು. ಆದರೆ ಈ ಜೋಡಿಯ ಬಳಿಕ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬಾರದ ಕಾರಣ 367 ರನ್‌ಗಳಿಗೆ ಆಸ್ಟ್ರೇಲಿಯಾ ತಂಡ ಇನ್ನಿಂಗ್ಸ್ ಅಂತ್ಯಗೊಳಿಸಿತು.
ಆಸ್ಟ್ರೇಲಿಯಾದ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಶ್ ಇಬ್ಬರು ಕೂಡ ಬೃಹತ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಪಂದ್ಯದ ಆರಂಭದಲ್ಲಿ ಜೀವದಾನ ಪಡೆದ ವಾರ್ನರ್ ಈ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು. 124 ಎಸೆತಗಳನ್ನು ಎದುರಿಸಿದ ವಾರ್ನರ್ 163 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ಅವರಿಗೆ ಅಮೋಘವಾಗಿ ಸಾಥ್ ನೀಡಿದ ಮಾರ್ಶ್ 108 ಎಸೆತಗಳಲ್ಲಿ 121 ರನ್‌ಗಳನ್ನು ಬಾರಿಸಿದರು.

ತಂಡದ ಮೊತ್ತ 259 ರನ್‌ಗಳಾಗಿದ್ದಾಗ ಮಿಚಲ್ ಮಾರ್ಶ್ ಔಟ್ ಆಗುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಅದಾದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ ಎಸೆತದಲ್ಲಿಉಏ ಔಟ್ ಆಗುವ ಮೂಲಕ ಪಾಕ್ ತಂಡಕ್ಕೆ ಮತ್ತೊಂದು ಮೇಲುಗೈ ದೊರೆಯಿತು. ಅದಾದ ಬಳಿಕ ಪಾಕಿಸ್ತಾನದ ಬೌಲರ್‌ಗಳು ಆಸ್ಟ್ರೇಲಿಯಾದ ವಿರುದ್ಧ ಉತ್ತಮವಾಗಿ ಮೇಲುಗೈ ಸಾಧಿಸಿದರು. ಡೇವಿಡ್ ವಾರ್ನರ್ 163 ರನ್‌ಗಳಿಗೆ ವಿಕೆಟ್ ಕಳೆದುಕೊಂಡ ನಂತರ ಪಾಕಿಸ್ತಾನ ತಂಡದ ಬೌಲಿಂಗ್ ವಿಭಾಗ ಮೇಲುಗೈ ಸಾಧಿಸಿತು.
ಆದರೆ ಅದಾದಗಲೇ ಆಸ್ಟ್ರೇಲಿಯಾ ತಂಡ ಮುನ್ನೂರರ ಗಡಿ ದಾಟಿತ್ತು. ಆದರೆ ಪಟ್ಟು ಬಿಡದ ಪಾಕಿಸ್ತಾದ ಬೌಲರ್‌ಗಳು ಬಳಿಕ ಸಂಪೂರ್ಣಾಗಿ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಆಸ್ಟ್ರೇಲಿಯಾ ತಂಡವನ್ನು ಪಾಕಿಸ್ತಾನ 367 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ.
ಪಾಕಿಸ್ತಾನದ ಪರವಾಗಿ ಶಾಹೀನ್ ಶಾ ಅಫ್ರಿದಿ ಐದು ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದ್ದಾರೆ. ಮತ್ತೊಂದೆಡೆ ಆರಂಭದಲ್ಲಿ ಅತ್ಯಂತ ದುಬಾರಿಯಾದ ಹ್ಯಾರಿಸ್ ರೌಫ್ ಕೂಡ ಕೊನೆಯ ಹಂತದಲ್ಲಿ ಅದ್ಭುತ ನಿಯಂತ್ರಣ ಸಾಧಿಸಿದ್ದು ಮೂರು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಒಂದು ವಿಕೆಟ್ ಉಸಮ ಮಿರ್ ಪಾಲಾಗಿದೆ.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಶಾನ್ ಅಬಾಟ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್
ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹಾರಿಸ್ ರೌಫ್
ಬೆಂಚ್: ಅಘಾ ಸಲ್ಮಾನ್, ಫಖರ್ ಜಮಾನ್, ಮೊಹಮ್ಮದ್ ವಾಸಿಂ ಜೂನಿಯರ್, ಶಾದಾಬ್ ಖಾನ್