For Quick Alerts
ALLOW NOTIFICATIONS  
For Daily Alerts
 

ನೆದರ್ಲೆಂಡ್ಸ್ vs ಶ್ರೀಲಂಕಾ: ಪಂದ್ಯದ ಸಮಯ, ಪಿಚ್ ರಿಪೋರ್ಟ್, ಸಂಭಾವ್ಯ ಆಡುವ ಬಳಗ

ಸೆಪ್ಟೆಂಬರ್ 21 ಶನಿವಾರದಂದು ಡಬಲ್ ಹೆಡರ್ ಪಂದ್ಯಗಳು ನಡೆಯಲಿದೆ. ಮೊದಲಿಗೆ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಭಾರತೀಉ ಕಾಲಮಾನ ಬೆಳಿಗ್ಗೆ 10:30ಕ್ಕೆ ಈ ಪಂದ್ಯ ಆರಂಭವಾಗಲಿದೆ.

ಇನ್ನು ಶ್ರೀಲಂಕಾ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಆರಂಭವನ್ನು ಪಡೆದುಕೊಂಡಿದ್ದು ಮೊದಲ ಮೂರು ಪಂದ್ಯಗಳ ಪೈಕಿ ಮೂರರಲ್ಲಿಯೂ ಸೋಲು ಅನುಭವಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಲಂಕಾ ಪಡೆ. ಹೀಗಾಗಿ ಈ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಇದು ಅತ್ಯುತ್ತಮ ಅವಕಾಶವೆನಿಸಿಕೊಂಡಿದೆ.

World cup, match 19th: Netherlands vs Sri Lanka; Probable XIs Pitch Report and Live details

ಮತ್ತೊಂದೆಡೆ ನೆದರ್ಲೆಂಡ್ಸ್ ತಂಡ ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದರೂ ತಮ್ಮ ಮೂರನೇ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಸಾಧಿಸಿದ ಗೆಲುವು ವಿಶೇಷ ಆತ್ಮವಿಶ್ವಾಸ ತುಂಬಿದೆ. ಶಿಸ್ತಿನ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದ ನೆದರ್ಲೆಂಡ್ಸ್ ತಂಡ ಮತ್ತೊಮ್ಮೆ ಅಂಥಾದ್ದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ಪಂದ್ಯ ಸಮಯ ಹಾಗೂ ನೇರಪ್ರಸಾರದ ಮಾಹಿತಿ
ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ತಂಡಗಳ ವಿರುದ್ಧದ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 10:30ಕ್ಕೆ ಆರಂಭವಾಗಲಿದ್ದು ಬೆಳಿಗ್ಗೆ 10:00 ಗಂಟೆಗೆ ಟಾಸ್ ನಡೆಯಲಿದೆ. ಇನ್ನು ಈ ಪಂದ್ಯದ ನೇರಪ್ರಸಾರ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಇರಲಿದೆ. ಇನ್ನು ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಇತ್ತಂಡಹಗಳ ಸಂಪೂರ್ಣ ಸ್ಕ್ವಾಡ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರ, ಕುಸಲ್ ಮೆಂಡಿಸ್ (ನಾಯಕ & ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಲಹಿರು ಕುಮಾರ, ದಿಲ್ಶನ್ ಮಧುಶಂಕ, ದುಶನ್ ಹೇಮಂತ, ಮಥೀಶ ಪತಿರಣ, ಕಸುನ್ ರಜಿತ, ದಿಮುತ್ ಕರುಣಾರತ್ನ

ನೆದರ್ಲೆಂಡ್ಸ್: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್‌ಮನ್, ಬಾಸ್ ಡಿ ಲೀಡ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್(ವಿಕೆಟ್ ಕೀಪರ್/ನಾಯಕ), ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್, ವೆಸ್ಲಿ ಬ್ಯಾರೆಸಿ, ರಿಯಾನ್ ಕ್ಲೈನ್, ಶರೀಜ್ ಅಹ್ಮದ್, ಸಾಕಿಬ್ ಜುಲ್ಫಿಕರ್

ಪಿಚ್ ರಿಪೋರ್ಟ್
ಏಕಾನ ಕ್ರೀಡಾಂಗಣದ ಪಿಚ್ ಐಪಿಎಲ್ ಸಂದರ್ಭದಲ್ಲಿ ನಿಧಾನಗತಿಯ ಪಿಚ್ ಆಗಿದ್ದು ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ದೊರೆಯುತ್ತಿತ್ತು. ಆದರೆ ವಿಶ್ವಕಪ್‌ಗಾಗಿ ಸಿದ್ದಪಡಿಸಲಾದ ನೂತನ ಪಿಚ್ ತೀವ್ರ ಪೈಪೋಟಿಯ ಪಿಚ್ ಆಗಿದೆ. ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯದ ಸ್ಪಿನ್ನರ್‌ಗಳು ತಮ್ಮ ಪ್ರಾಬಲ್ಯ ಮೆರೆದಿದ್ದರಿಂದ ಶ್ರೀಲಂಕಾ ಇಲ್ಲಿ ಪರದಾಟ ನಡೆಸುತ್ತಾ ಕೇವಲ 209 ರನ್ ಗಳಿಸಲು ಮಾತ್ರವೇ ಸಾಧ್ಯವಾಯಿತಿ. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನಿಡಿದ್ದು 14 ಓವರ್‌ಗಳು ಬಾಕಿ ಇರುವಂತೆಯೇ ಗುರಿ ತಲುಪಿದೆ.

ಸಂಭಾವ್ಯ ಆಡುವ ಬಳಗ:
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್ (ನಾಯಕ & ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಲಹಿರು ಕುಮಾರ, ದಿಲ್ಶಾನ್ ಮಧುಶಂಕ

ನೆದರ್ಲೆಂಡ್ಸ್: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡ್, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆ್ ಕೀಪರ್), ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್

Story first published: Friday, October 20, 2023, 19:56 [IST]
Other articles published on Oct 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+