ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಸೋಲಿನ ಸರಪಳಿ ಮುಂದುವರಿದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ರಣರೋಚಕ ಪಂದ್ಯದಲ್ಲಿ ಹೋರಾಟದ ಪ್ರದರ್ಶನ ನೀಡಿದರೂ ಪಾಕಿಸ್ತಾನಕ್ಕೆ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಯ ಒಂದು ಒಂದು ವಿಕೆಟ್ ಪಡೆಯಲು ವಿಫಲವಾದ ಪಾಕಿಸ್ತಾನ ತಂಡ ಗೆಲುವಿನ ಅತ್ಯಂತ ಸನಿಹಕ್ಕೆ ಬಂದು ಶರಣಾಗಿದೆ. ಈ ಮೂಲಕ ದಕ್ಷಿಣ ಆಫ್ರಿಕಾದ ಗೆಲುವಿನ ಓಟ ಮತ್ತೆ ಮುಂದುವರಿದಿದೆ.
ಪಾಕಿಸ್ತಾನ ತಂಡಕ್ಕೆ ಅತ್ಯಂತ ಮಹತ್ವ ಪಡೆದುಕೊಂಡಿದ್ದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಗೆಲ್ಲಲು 271 ರನ್‌ಗಳ ಗುರಿ ನಿಗದಿಪಡಿಸಲಾಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಸಾಧಾರಣ ಆರಂಭವನ್ನು ಪಡೆದುಕೊಂಡಿತ್ತು. ಆದರೆ ಐಡೆನ್ ಮಾರ್ಕ್ರಮ್ ಈ ಪಂದ್ಯದಲ್ಲಿ ಅತ್ಯಂತ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ತಂಡದ ಆಟಗಾರರಿಂದ ದೊಡ್ಡ ಮೊತ್ತದ ಜೊತೆಯಾಟ ನೀಡಲು ವಿಫಲವಾದರು ಕೂಡ ಮಾರ್ಕ್ರಮ್ ಅದ್ಭುತ ಪ್ರದರ್ಶನ ನಿಡಿದ್ದು 91 ರನ್‌ಗಳ ಕೊಡುಗೆ ನೀಡಿ ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದರು.

ದಕ್ಷಿಣ ಆಪ್ರಿಕಾ ತಂಡದ ಉಳಿದ ಆಟಗಾರರಿಂದ ದೊಡ್ಡ ಮೊತ್ತದ ಕೊಡುಗೆ ಬಾರದ ಕಾರಣ ಮಾರ್ಕ್ರಮ್ ವಿಕೆಟ್ ಕಳೆದುಕೊಳ್ಳುವ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಸ್ಥಿತಿ 250 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ತನ್ನ ಬೌಲಿಂಗ್ ದಾಳಿಯನ್ನು ಮತ್ತಷ್ಟು ತೀರ್ವಗೊಳಿಸಿತು.
ಹೀಗಾಗಿ 260 ರನ್‌ಗಳಾಗುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡು ಅತ್ಯಂತ ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯ ವಿಕೆಟ್‌ಗಾಗಿ ಪಾಕಿಸ್ತಾನ ತಂಡ ತನ್ನ ಸರ್ವ ಪ್ರಯತ್ನ ನಡೆಸಿದ್ದರೂ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೇಶವ್ ಮಹಾರಾಜ್ ಬೌಂಡರಿ ಬಾರಿಸಿ ಗೆಲುವಿನ ಕೇಕೆ ಹಾಕಿದರು. ಈ ಮೂಲಕ ಪಾಕಿಸ್ತಾನ ತಂಡದ ಗೆಲುವಿನ ಕನಸು ಮತ್ತೆ ಭಗ್ನವಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲಿಗೆ ಬ್ಯಾಟಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡಿತು. ಆರಂಭಿಕ ಆಟಗಾರರನ್ನು ಶೀಘ್ರದಲ್ಲಿಯೇ ಕಳೆದುಕೊಂಡ ಪಾಕ್ ಮತ್ತೆ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಬಾಬರ್ ಹಾಗೂ ರಿಜ್ವಾನ್ 48 ರನ್‌ಗಳ ಜೊತೆಯಾಟ ನೀಡಿದರು. ನಂತ ಇಫ್ತಿಕಾರ್ ಅಹ್ಮದ್ ಕೂಡ ಅವರಿಗೆ ಮತ್ತೊಂದು ಸಣ್ಣ ಜೊತೆಯಾಟದಲ್ಲಿ ನೆರವಾದರು. ಈ ಮೂಲಕ ಬಾಬರ್ ಅಜಂ ಈ ಪಂದ್ಯದಲ್ಲಿಯೂ ಅರ್ಧ ಶತಕ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು.
ಆದರೆ ಪಾಕ್ ತಂಡಕ್ಕೆ ಬಲ ತುಂಬಿದ್ದು ಸೌದ್ ಶಕೀಲ್ ಹಾಗೂ ಶದಬ್ ಖಾನ್ ಅವರ ಜೊತೆಯಾಟ. 6ನೇ ವಿಕೆಟ್‌ಗೆ ಈ ಜೋಡಿ 84 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಅದ್ಭುತವಾದ ಚೇತರಿಕೆ ನೀಡಿದರು. ಶದಬ್ ಖಾನ್ 43 ರನ್‌ಗಳ ಕೊಡುಗೆ ನೀಡಿದರೆ ಸೌದ್ ಶಕೀಲ್ 52 ರನ್‌ಗಳ ಮಹತ್ವದ ಕೊಡುಗೆ ನೀಡಿದರು. ನಂತರ ಮೊಹಮ್ಮದ್ ಸವಾಜ್ ಕೂಡ 24 ರನ್‌ಗಳ ಕೊಡುಗವೆ ನೀಡಿದ್ದಾರೆ. ಈ ಮೂಲಕ ಪಾಕಿಸ್ತಾನ ತಂಡ ಈ ಪಂದ್ಯದಲ್ಲಿ 270 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು.
ಫಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಹಾರಿಸ್ ರೌಫ್
ಬೆಂಚ್: ಉಸಾಮಾ ಮಿರ್, ಹಸನ್ ಅಲಿ, ಫಖರ್ ಜಮಾನ್, ಅಘಾ ಸಲ್ಮಾನ್
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಲುಂಗಿ ಎನ್ಗಿಡಿ
ಬೆಂಚ್: ರೀಜಾ ಹೆಂಡ್ರಿಕ್ಸ್, ಕಗಿಸೊ ರಬಾಡ, ಲಿಜಾಡ್ ವಿಲಿಯಮ್ಸ್, ಆಂಡಿಲೆ ಫೆಹ್ಲುಕ್ವಾಯೊ