ಲಂಕೆಗೂ ಮಣ್ಣು ಮುಕ್ಕಿಸಿದ ಅಫ್ಘಾನಿಸ್ತಾನ: ಸೆಮಿಫೈನಲ್ ಸ್ಪರ್ಧೆಗೆ ಮತ್ತಷ್ಟು ಟ್ವಿಸ್ಟ್!!
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಮತ್ತೊಂದು ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯೂ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ತಂಡ ಶ್ರೀಲಂಕಾ ತಂಡವನ್ನು ಭರ್ಜರಿ 7 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಅಫ್ಘನ್ ಪಡೆ ಅಂಕಪಟ್ಟಿಯಲ್ಲಿ ಈಗ 5ನೇ ಸ್ಥಾನವನ್ನು ಪಡೆದುಕೊಂಡಿದ್ದು ಸೆಮಿಫೈನಲ್ ಸ್ಪರ್ಧೆಯಲ್ಲಿ ತಾನು ಬಲಿಷ್ಠ ಹೋರಾಟಗಾರ ಎನ್ನುವುದನ್ನು ಸಾರಿದೆ.
ಈ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 242 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ ಆರಂಭದಲ್ಲಿಯೇ ಪ್ರಮುಖ ಆಟಗಾರ ಗುರ್ಬಾಜ್ ವಿಕೆಟ್ ಕಳೆದುಕೊಂಡಿತ್ತು. ಹಾಗಿದ್ದರೂ ದೃತಿಗೆಡದ ಅಫ್ಘನ್ ಪಡೆ ಅದ್ಭುತ ಹೋರಾಟವನ್ನು ಸಂಘಟಿಸಿತು. ಎರಡನೇ ವಿಕೆಟ್‌ಗೆ ಭರ್ಜರಿ 73 ರನ್‌ಗಳ ಜೊತೆಯಾಟ ನೀಡಿದ ಬಳಿಕ ಆರಂಭಿಕ ಆಟಗಾರ ಜದ್ರಾನ್ 39 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಇನ್ನು ಮೂರನೇ ವಿಕೆಟ್‌ಗೆ ಮತ್ತೊಂದು ಅದ್ಭುತ ಜೊತೆಯಾಟ ಪಡೆಯಿತು ಅಫ್ಘಾನಿಸ್ತಾನ ತಂಡ.

ಅಫ್ಘಾನಿಸ್ತಾನ ತಂಡದ ಆಟಗಾರರಾದ ರಹ್ಮತ್ ಶಾ, ನಾಯಕ ಹಶ್ಮತುಲ್ಲಾ ಶಾಹೀದಿ ಮತ್ತು ಹಜ್ಮತುಲ್ಲಾ ಒಮರ್ಜಾಯ್ ಭರ್ಜರೊ ಅರ್ಧ ಶತಕ ಸಿಡಿಸಿ ಅಬ್ಬರಿಸಿದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ನಾಯಕ ಹಶ್ಮತುಲ್ಲಾ ಹಾಗೂ ಓಮರ್ಜಾಯ್ ಮುರಿಯದ ನಾಲ್ಕನೇ ವಿಕೆಟ್‌ಗೆ ಭರ್ಜರಿ ಶತಕದ ಜೊತೆಯಾಟ ನೀಡುವ ಮೂಲಕ ಲಂಕಾ ಪಡೆಗೆ ಯಾವುದೇ ಅವಕಾಶವಿಲ್ಲದಂತೆ ಮಾಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಅಫ್ಘಾನಿಸ್ತಾನ ತಂಡ 45.3 ಓವರ್‌ಗಳಲ್ಲಿ ಯಾವುದೇ ಕೇವಲ 3 ವಿಕೆಟ್ ಕಳೆದುಕೊಂಡು ಶ್ರೀಲಂಕಾ ನೀಡಿದ ಗುರಿಯನ್ನು ಮೀರಿ ನಿಂತಿದೆ.
ಇನ್ನು ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಮೊದಲಿಗೆ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ಆರಂಭಿಕ ವಿಕೆಟ್ ಬೇಗೆ ಕಳೆದುಕೊಂಡರೆ ಎರಡನೇ ವಿಕೆಟ್‌ಗೆ ಅರ್ಧ ಶತಕದ ಜೊತೆಯಾಟ ಲಂಕಾ ತಂಡಕ್ಕೆ ದೊರೆಯಿತು. ಫಾತುಮ್ ನಿಸ್ಸಾಂಕ 46 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರೆ ಕುಸಾಲ್ ಮೆಂಡಿಸ್ 39 ರನ್‌ಗಳನ್ನು ಗಳಿಸ ಔಟಾದರು. ಸದೀರ ಸಮರವಿಕ್ರಮ 36 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು.
ಉಳಿದಂತೆ ಆಟಗಾರರಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ಶ್ರೀಲಂಕಾ ತಂಡ ಈ ಪಂದ್ಯದಲ್ಲಿ ಕೇವಲ 49.3 ಓವರ್‌ಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿದ್ದು 241 ರನ್‌ಗಳಿಗೆ ತನ್ನ ಆಟವನ್ನು ಅಂತ್ಯಗೊಳಿಸಿದೆ.
ಇನ್ನು ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಪರವಾಗಿ ಫಜಲ್ಲಾಕ್ ಫಾರೂಕಿ 4 ವಿಕೆಟ್ ಕಬಳಿಸಿದ್ದು ಮುಜೀಬ್ ಎರಡು ವಿಕೆಟ್ ಪಡೆದುಕೊಂಡರು. ಅಜ್ಮತುಲ್ಲಾ ಹಾಗೂ ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಅಫ್ಘಾನಿಸ್ತಾನ ಆಡುವ ಬಳಗ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ಸಿ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (wk), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ
ಬೆಂಚ್: ನೂರ್ ಅಹ್ಮದ್, ರಿಯಾಜ್ ಹಸನ್, ಅಬ್ದುಲ್ ರೆಹಮಾನ್, ನಜೀಬುಲ್ಲಾ ಜದ್ರಾನ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (c & wk), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೀಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ
ಬೆಂಚ್: ಚಾಮಿಕ ಕರುಣಾರತ್ನ, ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ಕುಸಾಲ್ ಪೆರೇರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications