ನೆದರ್ಲೆಂಡ್ಸ್ vs ಅಫ್ಘಾನಿಸ್ತಾನ: ಡಚ್ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಅಫ್ಘನ್ನರು
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿರುವ ಅಫ್ಘಾನಿಸ್ತಾನ ತಂಡ ನೆದರ್ಲೆಂಡ್ಸ್ ವಿರುದ್ಧ ಸೆಣೆಸಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಮೊದಲಿಗೆ ಬೌಲಿಂಗ್ ನಡೆಸುವ ಸವಾಲು ಪಡೆದುಕೊಂಡಿರುವ ಅಫ್ಘನ್ನರು ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಅಲ್ಪ ಮೊತ್ತಕ್ಕೆ ನೆದರ್ಲೆಂಡ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಏಕಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ 179 ರನ್‌ಗಳಿಗೆ ಆಲೌಟ್ ಆಗಿದ್ದು ಅಫ್ಘಾನಿಸ್ತಾನಕ್ಕೆ ಸುಲಭ ಸವಾಲು ನೀಡಿದೆ.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್ ಆರಂಭಿಕ ವಿಕೆಟನ್ನು ಬೇಗನೆ ಕಳೆದುಕೊಂಡಿತ್ತು. ಆದರೆ ಎರಡನೇ ವಿಕೆಟ್‌ಗೆ ಮ್ಯಾಕ್ಸ್ ಒಡೌಡ್ ಹಾಗೂ ಕಾಲಿನ್ ಅಕರ್ಮನ್ 70 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಬಲ ನೀಡಿದರು. ಒಡೌಡ್ 42 ರನ್‌ಗಳ ಕೊಡುಗೆ ನಿಡಿದರೆ ಅಕರ್ಮನ್ 29ರನ್‌ಗಳಿಸಿದರು. ನಂತರ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಏಕಾಂಗಿ ಹೋರಾಟ ನಡೆಸಿದರಾದರೂ ಅವರಿಗೆ ಮತ್ತೊಂದು ತುದಿಯಲ್ಲಿ ಯಾವುದೇ ಬೆಂಬಲ ದೊರೆಯಲಿಲ್ಲ.

ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 58 ರನ್‌ಗಳನ್ನು ಗಳಿಸಿ ಅಫ್ಘನ್ ಬೌಲಿಂಗ್ ದಾಳಿಗೆ ಹೋರಾಟದ ಪ್ರದರ್ಶನ ನೀಡಿದರು. ಹೀಗಾಗಿ ನೆದರ್ಲೆಂಡ್ಸ್ ತಂಡ ಈ ಪಂದ್ಯದಲ್ಲಿ 46.3 ಓವರ್‌ಗಳಲ್ಲಿ 179 ರನ್‌ಗಳನ್ನು ಮಾತ್ರವೇ ಗಳಿಸಿ ಆಲೌಟ್ ಆಯಿತು.
ಇನ್ನು ಈ ಪಂದ್ಯದಲ್ಲಿ ಅಪ್ಘಾನಿಸ್ತಾನ ತಂಡದ ಪರವಾಗಿ ನಬಿ ಮೂರು ವಿಕೆಟ್ ಕಿತ್ತು ಅಬ್ಬರಿಸಿದರೆ ನೂರ್ ಅಹ್ಮದ್ ಎರಡು ಹಾಗೂ ಮುಜೀಬ್ ಉರ್ ರಹ್ಮಾನ್ ಒಂದು ವಿಕೆಟ್ ಪಡೆದರು. ನಾಲ್ವರು ಆಟಗಾರರು ರನೌಟ್ ಆಗಿ ಫೆವಿಲಿಯನ್ ಸೇರಿಕೊಂಡರು.
ನೆದರ್ಲೆಂಡ್ಸ್ ಆಡುವ ಬಳಗ: ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್‌ಮನ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಬಾಸ್ ಡಿ ಲೀಡೆ, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್
ಬೆಂಚ್: ವಿಕ್ರಮಜಿತ್ ಸಿಂಗ್, ಶರೀಜ್ ಅಹ್ಮದ್, ತೇಜಾ ನಿಡಮನೂರು, ರಯಾನ್ ಕ್ಲೈನ್
ಅಫ್ಘಾನಿಸ್ತಾನ ಆಡುವ ಬಳಗ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ನೂರ್ ಅಹ್ಮದ್
ಬೆಂಚ್: ನವೀನ್-ಉಲ್-ಹಕ್, ರಿಯಾಜ್ ಹಸನ್, ಅಬ್ದುಲ್ ರೆಹಮಾನ್, ನಜೀಬುಲ್ಲಾ ಜದ್ರಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications