World Cup Qualifiers: ವೆಸ್ಟ್ ಇಂಡೀಸ್ vs ನೇಪಾಳ, ಟಾಸ್ ರಿಪೋರ್ಟ್, ಆಡುವ ಬಳಗ, Live ಸ್ಕೋರ್
ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಯ 9ನೇ ಪಂದ್ಯದಲ್ಲಿ ಇಂದು ವೆಸ್ಟ್ ಇಂಡೀಸ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ನೇಪಾಳ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ವೆಸ್ಟ್ ಇಂಡೀಸ್ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್ ಇದು ವೇಗದ ಬೌಲರ್‌ಗಳಿಗೆ ನೇರವು ನೀಡುವ ಸಾಧ್ಯತೆಯಿರುವ ಕಾರಣ ಆರಂಭದಲ್ಲಿ ಬೌಲಿಂಗ್ ನಡೆಸಲು ನಿರ್ಧರಿಸುತ್ತೇವೆ. ನಮ್ಮ ಯೋಜನೆಗಳನ್ನು ಇಲ್ಲಿ ಕಾರ್ಯಗತಗೊಳಸಿಬೇಕಿದೆ ಎಂದಿದ್ದಾರೆ. ಮುಂದುವರಿದು ಅವರು ವೆಸ್ಟ್ ಇಂಡೀಸ್ ತಂಡದ ಆಟವನ್ನು ನೋಡಿಕೊಂಡು ಬೆಳೆದವರು ನಾವು. ಈಗ ಅವರ ವಿರುದ್ಧ ಆಡುವ ಅವಕಾಶ ದೊರೆತಿದೆ ಎಂದಿದ್ದಾರೆ.

Live ಸ್ಕೋರ್ ಹೀಗಿದೆ
ಇನ್ನು ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಹೋಪ್ ಮಾತನಾಡಿ ನಾವು ಕೂಡ ಮೊದಲಿಗೆ ಬೌಲಿಂಗ್ ನಡೆಸಲು ಬಯಸಿದ್ದೆವು ಎಂದಿದ್ದಾರೆ. ನಾವು ಹಿಂದಿನ ಪಂದ್ಯದಲ್ಲಿ ಆಡಿದ ಬಳಗದೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದು ಈ ಪಿಚ್‌ನಲ್ಲಿ ರನ್‌ಗಳಿಸುವ ಧಾವಂತ ತೋರಿಸಬೇಕಿದೆ. ಹಾಗಂತ ಪ್ರತಿ ಎಸೆತವನ್ನು ಕೂಡ ಬೌಂಡರಿಗಟ್ಟುವ ಪ್ರಯತ್ನ ನಡೆಸಬೇಕು ಎಂದಲ್ಲ ಎಂದಿದ್ದಾರೆ.
ವೆಸ್ಟ್ ಇಂಡೀಸ್: ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ಶಾಯ್ ಹೋಪ್ (ನಾಯಕ & ವಿಕೆಟ್ ಕೀಪರ್), ನಿಕೋಲಸ್ ಪೂರನ್, ರೋಸ್ಟನ್ ಚೇಸ್, ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್, ಕೀಮೋ ಪೌಲ್, ಅಲ್ಜಾರಿ ಜೋಸೆಫ್, ಅಕೀಲ್ ಹೊಸೈನ್
ಬೆಂಚ್: ಶಮರ್ ಬ್ರೂಕ್ಸ್, ರೊಮಾರಿಯೋ ಶೆಫರ್ಡ್, ಕೀಸಿ ಕಾರ್ಟಿ, ಯಾನಿಕ್ ಕ್ಯಾರಿಯಾ
ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ಭೀಮ್ ಶಾರ್ಕಿ, ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಆರಿಫ್ ಶೇಖ್, ಗುಲ್ಸನ್ ಝಾ, ಕರಣ್ ಕೆಸಿ, ಸಂದೀಪ್ ಲಮಿಚಾನೆ, ಲಲಿತ್ ರಾಜಬನ್ಶಿ
ಬೆಂಚ್: ಸೋಂಪಾಲ್ ಕಾಮಿ, ಜ್ಞಾನೇಂದ್ರ ಮಲ್ಲಾ, ಕಿಶೋರ್ ಮಹತೋ, ಪ್ರತಿಸ್ ಜಿಸಿ, ಅರ್ಜುನ್ ಸೌದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications