For Quick Alerts
ALLOW NOTIFICATIONS  
For Daily Alerts
 

ಬೌಲರ್‌ಗಳು ನಿರೀಕ್ಷೆ ಸುಳ್ಳಾಗಿಸಿದರು: ನೆದರ್ಲೆಂಡ್ಸ್ ವಿರುದ್ಧ ಸೂಪರ್ ಓವರ್‌ನಲ್ಲಿ ಸೋತ ವಿಂಡೀಸ್ ನಾಯಕನ ಹೇಳಿಕೆ

ವಿಶ್ವಕಪ್ ಟೂರ್ನಿಯ ಕ್ವಾಲಿಫಯರ್ ಹಂತದಲ್ಲಿ ನೆದರ್ಲೆಂಡ್ಸ್ ವಿರುದ್ಧ ವೆಸ್ಟ್ ಇಂಡೀಸ್ ತಂಡ ಸೂಪರ್ ಓವರ್‌ನಲ್ಲಿ ಸೋಲು ಅನುಭವಿಸಿದೆ. ಬ್ಯಾಟಿಂಗ್‌ನಲ್ಲಿ ಬೃಹತ್ ಮೊತ್ತವನ್ನು ಪೇರಿಸಿದ ಹೊರತಾಗಿಯೂ ನೆದರ್ಲೆಂಡ್ಸ್ ತಂಡ ಈ ಮೊತ್ತವನ್ನು ಬೆನ್ನಟ್ಟಿದ್ದು ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅದಾದ ಬಳಿಕ ಸೂಪರ್ ಓವರ್‌ನ್ಲಲಿ ದಾಖಲೆಯ ಮೊತ್ತ ಪೇರಿಸಿದ ನೆದರ್ಲೆಂಡ್ಸ್ ತಂಡ ಸ್ಮರಣಿಯ ಗೆಲುವು ಸಾಧಿಸಿದೆ.

ಈ ಆಘಾತಕಾರಿ ಸೋಲಿನ ಬಳಿಕ ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಹೋಪ್ ಪ್ರತಿಕ್ರಿಯೆ ನೀಡಿದ್ದು ತಂಡದ ಬೌಲಿಂಗ್ ವಿಭಾಗದ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬೌಲರ್‌ಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ ಎಂಬ ಭರವಸೆ ಹೊಂದಿದ್ದೆ ಆದರೆ ಅದು ಸುಳ್ಳಾಯಿತು ಎಂದಿದ್ದಾರೆ ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಹೋಪ್.

World Cup Qualifiers: West Indies Captain Shai Hope reaction after losing against Netherlands

"ನಾವೇ ನಮ್ಮನ್ನು ಕೆಳಗುಳಿಯುವಂತೆ ಮಾಡಿದೆವು. 375 ರನ್‌ಗಳನ್ನು ಗಳಿಸಿದ ಹೊರತಾಗಿಯೂ ಸೋಲು ಕಂಡವು ಎಂಬುದನ್ನು ಯೋಚಿಸಲು ಸಾಧ್ಯವಿಲ್ಲ. ಇಷ್ಟು ರನ್‌ಗಳು ಗೆಲುವಿಗೆ ಸಾಕು ಎಂದೇ ನಾನು ಭಾವಿಸಿದ್ದೆ. ಬೌಲರ್‌ಗಳು ಇನ್ನುಳಿದ ಕೆಲಸವನ್ನು ಮಾಡಲಿದ್ದಾರೆ ಎಂದು ನಂಬಿದ್ದೆ. ಆದರೆ ದುರದೃಷ್ಟವಶಾತ್ ನಾವು ಸೋಲು ಕಂಡಿದ್ದೇವೆ. ಈಗ ಚಿತ್ರಣ ನಮ್ಮ ಮುಂದಿದ್ದು ನಾವು ಉತ್ತಮವಾದ ಪ್ರದರ್ಶನ ನೀಡಬೇಕಿದೆ" ಎಂದಿದ್ದಾರೆ ಶಾಯ್ ಹೋಪ್.

ಇನ್ನು ನೆದರ್ಲ್ಯಾಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ಪ್ರತಿಕ್ರಿಯಿಸಿದ್ದು ಇದಕ್ಕಿಂತ ಉತ್ತಮ ಕ್ರಿಕೆಟ್ ಆಟವನ್ನು ಅನುಭವಿಸಲು ಸಾಧ್ಯವಿಲ್ಲ ಎಂದಿದ್ದು ಲೋಗನ್ ವ್ಯಾನ್ ಬೀಕ್ ಮತ್ತು ತೇಜ ನಿಡಮನೂರು ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು ಎಂದು ಪ್ರಶಂಸಿದಿದ್ದಾರೆ. ನಿಡಮನೂರು 76 ಎಸೆತಗಳಲ್ಲಿ 111 ರನ್ ಗಳಿಸುವ ಮೂಲಕ ನೆದರ್ಲೆಂಡ್ಸ್ 9 ವಿಕೆಟ್‌ಗೆ 364 ರನ್ ಗಳಿಸಿ ಪಂದ್ಯವನ್ನು ಟೈ ಮಾಡಲು ಕಾರಣವಾದರು.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಅದ್ಭುತ ಆರಂಭವನ್ನು ಪಡೆದುಕೊಂಡಿದ್ದು ಮೊದಲ ವಿಕೆಟ್‌ಗೆ 101 ರನ್‌ಗಳ ಜೊತೆಯಾಟ ಪಡೆಯಿತು. ಆರಂಭಿಕರಾದ ಬ್ರೆಂಡನ್ ಕಿಂಗ್ ಹಾಗೂ ಜಾನ್ಸನ್ ಚಾರ್ಲ್ಸ್ ಇಬ್ಬರು ಕೂಡ ಅರ್ಧ ಶತಕದ ಕೊಡುಗೆ ನೀಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಶಾಯ್ ಹೋಪ್ 47 ರನ್‌ಗಳ ಕೊಡುಗೆ ನೀಡಿದರೆ ಪೂರನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಅಮೋಘ ಶತಕ ಸಿಡಿಸಿದರು.

65 ಎಸೆತಗಳನ್ನು ಎದುರಿಸಿದ ನಿಕೋಲಸ್ ಪೂರನ್ 9 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದ್ದು 104 ರನ್‌ಗಳ ಕೊಡುಗೆ ನೀಡಿ ಅಜೇಯವಾಗುಳಿದರು. ಇವರಿಗೆ ಅಂತಿಮ ಹಂತದಲ್ಲಿ ಕೊಮೋ ಪೌಲ್ ಅದ್ಭುತವಾಗಿ ಸಾಥ್ ನಿಡಿದ್ದು 25 ಎಸೆತಗಳಲ್ಲಿ 46 ರನ್‌ಗಳ ಕೊಡುಗೆ ನೀಡಿದರು. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಈ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದಕೊಂಡು 374 ರನ್‌ಗಳಿಸಿತು.

ಈ ಮೊತ್ತವನ್ನು ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡಕ್ಕೆ ಕೂಡ ಉತ್ತಮ ಆರಂಭ ದೊರೆಯಿತು. ಆದರೆ ಪಂದ್ಯಕ್ಕೆ ತಿರುವು ನೀಡಿದ್ದು ತೇಜ ನಿಡಮನೂರು ಅವರ ಬ್ಯಾಟಿಂಗ್. 76 ಎಸೆತಗಳನ್ನು ಎದುರಿಸಿದ ತೇಜ ನಿಡಮನೂರು ಭರ್ಜರಿ 111 ರನ್‌ಗಳನ್ನು ಗಳಿಸಿದರು. ಇವರಿಗೆ ಸಾಥ್ ನಿಡಿದ ನಾಯಕ ಸ್ಕಾಟ್ ಎಡ್ವರ್ಡ್ 67 ರನ್‌ಗಳಿಸಿದರು. ಆದರೆ ಈ ಮೊತ್ತವನ್ನು ಬೆನ್ನಟ್ಟಿ ಗೆಲುವಿನ ಗುರಿ ದಾಟಲು ವಿಫಲವಾದರೂ ನೆದರ್ಲೆಂಡ್ಸ್ ತಂಡ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

Story first published: Monday, June 26, 2023, 23:37 [IST]
Other articles published on Jun 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+