For Quick Alerts
ALLOW NOTIFICATIONS  
For Daily Alerts
 

World Cup Qualifiers: ಮೊದಲ ದಿನ ಗೆಲುವಿನ ನಗೆ ಬೀರಿದ ಜಿಂಬಾಬ್ವೆ, ವೆಸ್ಟ್ ಇಂಡೀಸ್

ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಕ್ವಾಲಿಫಯರ್ ಪಂದ್ಯಗಳು ಆರಂಭವಾಗಿದ್ದು ಅರ್ಹತಾ ಸುತ್ತಿನಲ್ಲಿರುವ ತಂಡಗಳು ಪ್ರಮುಖ ಘಟ್ಟದಲ್ಲಿ ಸ್ಥಾನವನ್ನು ಪಡೆದುಕೊಳ್ಳಲು ಹೋರಾಟ ಆರಂಭಿಸಿದೆ. ಜಿಂಬಾಬ್ವೆಯ ಆತಿಥ್ಯದಲ್ಲಿ ನಡೆಯುತ್ತಿರುವ ಈ ಅರ್ಹತಾ ಸುತ್ತಿನ ಮೊದಲ ದಿನದಾಟದಲ್ಲಿ ಜಿಂಬಾಬ್ವೆ ಹಾಗೂ ನೇಪಾಳ ಮುಖಾಮುಖಿಯಾಗಿದ್ದರೆ ಮತ್ತೊಂದು ಪಂದ್ಯದಲ್ಲಿ ಯುಎಸ್‌ಎ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದೆ.

ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಜಿಂಬಾಬ್ವೆ ಹಾಗೂ ನೇಪಾಳ ತಂಡಗಳ ನಡುವಿನ ಪಂದ್ಯದಲ್ಲಿ ಆತಿಥೆಯ ಜಿಂಬಾಬ್ವೆ ಭರ್ಜರುಯಾಗಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ ತಂಡದ ನಿರ್ಧಾರವನ್ನು ತಪ್ಪು ಎಂಬ ರೀತಿಯಲ್ಲಿ ನೇಪಾಳ ಬ್ಯಾಟಿಂಗ್ ಮಾಡಿತು. ಅಗ್ರ ಕ್ರಮಾಂಕದ ಆಟಗಾರರ ಅಮೋಘ ಪ್ರದರ್ಶನದಿಂದಾಗಿ ನಿಗದಿತ 50 ಓವರ್‌ಗಳಲ್ಲಿ ನೇಪಾಳ 290ರನ್‌ಗಳನ್ನು ಕಲೆಹಾಕಿತು. ಅದರಲ್ಲೂ ಕುಶಾಲ್ ಭೂರ್ಟೆಲ್ 99 ರನ್‌ಗಳಿಸಿ ಔಟಾಗುವ ಮೂಲಕ ಅದ್ಭುತ ಶತಕವನ್ನು ಗಳಿಸುವ ಅವಕಾಶದಿಂದ ವಂಚಿತವಾದರು.

World Cup Qualifiers: Zimbabwe and West Indies Win Opening day of World Cup Qualifiers

ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡದ ಪರವಾಗಿ ಇಬ್ಬರು ಆಟಗಾರರು ಶತಕ ಸಿಡಿಸಿ ಅಬ್ಬರಿಸಿದ್ದಾರೆ. ನಾಯಕ ಕ್ರೇಗ್ ಇರ್ವಿನ್ ಹಾಗೂ ಸೀನ್ ವಿಲಿಯಮ್ಸ್ ಶತಕ ಸಿಡಿಸಿ ಅಬ್ಬರಿಸಿದರು. ಹೀಗಾಗಿ ನೇಪಾಳ ತಂಡ ನೀಡಿದ 291 ರನ್‌ಗಳ ಮೊತ್ತವನ್ನು 35 ಎಸೆತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿತು.

ಮತ್ತೊಂದೆಡೆ ಯುಎಸ್‌ಎ ವಿರುದ್ಧ ಮೊದಲಿಗೆ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡಿಸ್ ತಂಡ ಮಧ್ಯಮ ಕ್ರಮಾಂಕದ ಆಟಗಾರರ ಅದ್ಭುತ ಪ್ರದರ್ಶನದಿಂದಾಗಿ 297ರನ್‌ಗಳಿಸಿ ಆಲೌಟ್ ಆಯಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಯುಎಸ್‌ಎ ತಂಡ ನಿಗದಿತ 50 ಓವರ್‌ಗಳಲ್ಲಿ 258 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಈ ಮೂಲಕ ವೆಸ್ಟ್ ಇಂಡೀಸ್ ಈ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ವೆಸ್ಟ್ ಇಂಡೀಸ್ ಆಡುವ ಬಳಗ: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಶಾಯ್ ಹೋಪ್ (ನಾಯಕ & ವಿಕೆಟ್ ಕೀಪರ್), ನಿಕೋಲಸ್ ಪೂರನ್, ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್, ರೋಸ್ಟನ್ ಚೇಸ್, ಕೀಮೋ ಪಾಲ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್

ಯುಎಸ್‌ಎ ಆಡುವ ಬಳಗ: ಸ್ಟೀವನ್ ಟೇಲರ್, ಸುಶಾಂತ್ ಮೊದಾನಿ, ಮೊನಾಂಕ್ ಪಟೇಲ್ (ನಾಯಕ & ವಿಕೆಟ್ ಕೀಪರ್), ಆರನ್ ಜೋನ್ಸ್, ಸೈತೇಜ ಮುಕ್ಕಮಲ್ಲ, ಗಜಾನಂದ್ ಸಿಂಗ್, ಶಯಾನ್ ಜಹಾಂಗೀರ್, ಜಸ್ದೀಪ್ ಸಿಂಗ್, ನೋಸ್ತುಶ್ ಕೆಂಜಿಗೆ, ಕೈಲ್ ಫಿಲಿಪ್, ಸೌರಭ್ ನೇತ್ರವಾಲ್ಕರ್

Story first published: Sunday, June 18, 2023, 23:54 [IST]
Other articles published on Jun 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+