For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ದಾಖಲೆ: ಮೆಕಲಮ್ ರಿಂದ ಅತಿ ವೇಗದ ಅರ್ಧಶತಕ

By Mahesh

ವೆಲ್ಲಿಂಗ್ಟನ್, ಫೆ.20: ವಿಶ್ವಕಪ್ 2015 ಟೂರ್ನಿಯ 9ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಬ್ರೆಂಡನ್ ಮೆಕಲಮ್ ಹಾಗೂ ಟಿಮ್ ಸೌಥಿ ದುಃಸ್ವಪ್ನವಾಗಿ ಕಾಡಿದ್ದಲ್ಲದೆ ವಿಶ್ವಕಪ್ ದಾಖಲೆಗಳನ್ನು ಮೆಟ್ಟಿ ನಿಂತಿದ್ದಾರೆ.

ಟಿಮ್ ಸೌಥಿ 7 ವಿಕೆಟ್ ಕಿತ್ತು ವಿಶ್ವದಾಖಲೆ ಸಮಕ್ಕೆ ನಿಂತರೆ, ನಾಯಕ ಬ್ರೆಂಡನ್ ಮೆಕಲಮ್ ತ್ವರಿತ ಗತಿಯಲ್ಲಿ ಅರ್ಧಶತಕ ಸಿಡಿಸಿ ಹೊಸ ವಿಶ್ವಕಪ್ ದಾಖಲೆ ಬರೆದಿದ್ದಾರೆ.

| ವಿಶ್ವಕಪ್ ವಿಶೇಷ ಪುಟ

ಐಸಿಸಿ ವಿಶ್ವಕಪ್ 2015 ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಉತ್ತಮ ಬೌಲಿಂಗ್ ಪ್ರದರ್ಶಿಸಿತು. ಇಂಗ್ಲೆಂಡ್ ತಂಡ 123 ರನ್ನಿಗೆ ಆಲೌಟ್ ಆಯಿತು. ಅಲ್ಪ ಮೊತ್ತ ಚೇಸ್ ಮಾಡಿದ ಕಿವೀಸ್ ತಂಡಕ್ಕೆ ನಾಯಕ ಬ್ರೆಂಡನ್ ಮೆಕಲಮ್ ಭರ್ಜರಿ ಆರಂಭ ಒದಗಿಸಿದರು. ಮೆಕಲಮ್ 25 ಎಸೆತಗಳಲ್ಲಿ 77 ರನ್ (8 ಬೌಂಡರಿ, 7 ಸಿಕ್ಸರ್) ಚೆಚ್ಚಿ ಔಟಾದರು.[ವಿಶ್ವದಾಖಲೆ ಸಮಕ್ಕೆ ನಿಂತ ಕಿವೀಸ್ ವೇಗಿ ಟಿಮ್ ಸೌಥಿ]

World Cup Record: Brendon McCullum hits fastest fifty

ತ್ವರಿತ ಗತಿಯಲ್ಲಿ 50: 18 ಎಸೆತಗಳಲ್ಲಿ 50 ರನ್ ಗಡಿ ದಾಟಿದ ಮೆಕಲಮ್ ತಮ್ಮದೇ ಹಳೆ ವಿಶ್ವಕಪ್ ದಾಖಲೆ ಮುರಿದರು, ಈ ಹಿಂದೆ ಕೆನಡಾ ವಿರುದ್ಧ 2007ರ ವಿಶ್ವಕಪ್ ನಲ್ಲಿ 20 ಎಸೆತಗಳಲ್ಲಿ 50 ರನ್ ಚೆಚ್ಚಿದ್ದರು.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಬ್ರೆಂಡನ್ ಮೆಕಲಮ್ ಅರ್ಧ ಶತಕ ಮೂರನೇ ತ್ವರಿತಗತಿ 50 ಎನಿಸಿದೆ. ವಿಶ್ವ ದಾಖಲೆ ವೀರ ಎಬಿ ಡಿವಿಲೆಯರ್ಸ್ (16 ಎಸೆತ), ಜಯಸೂರ್ಯ (17) ಇಬ್ಬರು ಬ್ರೆಂಡನ್ ಗಿಂತ ಮುಂದಿದ್ದಾರೆ. [ಎಬಿಡಿ ಏಕದಿನ ಕ್ರಿಕೆಟ್ ದಾಖಲೆ, ಟ್ವೀಟ್ ಸೆಲ್ಯೂಟ್]

ಇಂಗ್ಲೆಂಡಿನ ಜೇಮ್ಸ್ ಆಂಡರ್ಸನ್ ಬೌಲಿಂಗ್ ನಲ್ಲಿ ಸಿಂಗಲ್ ತೆಗೆದುಕೊಂಡು ರನ್ ಗಳಿಕೆ ಆರಂಭಿಸಿದ ಬ್ರೆಂಡನ್ ಮೆಕಲಮ್ ನಂತರ 74 ರನ್ ಬೌಂಡರಿ ಗೆರೆ ದಾಟಿಸಿ ಪಡೆದುಕೊಂಡಿದ್ದು ಪ್ರೇಕ್ಷಕರಿಗೆ ರಸದೌತಣ ನೀಡಿತು. ಬ್ರೆಂಡನ್ ಇನ್ನಿಂಗ್ಸ್ ನಲ್ಲಿ ಕೇವಲ 3 ಸಿಂಗಲ್ಸ್ ಇತ್ತು.

ಫಿನ್ ಬೌಲಿಂಗ್ ನಲ್ಲಿ ಸತತ 4 ಸಿಕ್ಸರ್ ಸಿಡಿಸುವ ಮೂಲಕ ವೆಲ್ ಕಮ್ ಹೇಳಿದ ಮೆಕಲಮ್ ಫಿನ್ ಅವರ ಬೌಲಿಂಗ್ ನಲ್ಲಿ 10 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್, 2 ಡಾಟ್ ಬಾಲ್ ಇತ್ತು.

ಒಟ್ಟಾರೆ 243ನೇ ಪಂದ್ಯದಲ್ಲಿ 29ನೇ ಏಕದಿನ ಅರ್ಧಶತಕ ಬಾರಿಸಿದ ಮೆಕಲಮ್ ಸ್ಟೈಕ್ ರೇಟ್ 387.50 (25 ಎಸೆತಗಳಲ್ಲಿ 77 ರನ್). ಆದರೆ, ಅತಿ ಹೆಚ್ಚಿನ ಸ್ಟ್ರೈಕ್ ರೇಟ್ ಇನ್ನೂ ಜೇಮ್ಸ್ ಫ್ರಾಂಕ್ಲಿನ್ ಹೆಸರಿನಲ್ಲಿದೆ. 2011ರಲ್ಲಿ ಕೆನಡಾ ವಿರುದ್ಧ ಫ್ರಾಂಕ್ಲಿನ್ 387.50(31 ನಾಟೌಟ್ 8 ಎಸೆತ) ನಂತೆ ಸ್ಕೋರ್ ಮಾಡಿದ್ದರು.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+