ಎಬಿಡಿ ಏಕದಿನ ಕ್ರಿಕೆಟ್ ದಾಖಲೆ, ಟ್ವೀಟ್ ಸೆಲ್ಯೂಟ್
ಜೋಹಾನ್ಸ್ ಬರ್ಗ್, ಜ.19: ಏಕದಿನ ಕ್ರಿಕೆಟ್ ನಲ್ಲಿ ಅತಿವೇಗದ ಶತಕ, ಅರ್ಧ ಶತಕ ಗಳಿಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ ಡೆವಿಲಿಯರ್ಸ್ ಇನ್ನೂ ಅನೇಕ ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.
ಅತಿ ವೇಗದ ಶತಕ ಸರದಾರರ ಪಟ್ಟಿಯನ್ನು ಇಲ್ಲಿ ನೋಡಿ ಮುಂದಕ್ಕೆ ಓದಿ |
ಎಬಿ ಡಿವಿಲಿಯರ್ಸ್ ದಾಖಲೆಗಳು
* ಅತಿ ವೇಗದ ಶತಕ: 31ಎಸೆತ (ಇದಕ್ಕೂ ಮುನ್ನ 36 ಎಸೆತಗಳಲ್ಲಿ ನ್ಯೂಜಿಲೆಂಡ್ ನ ಕೋರಿ ಆಂಡರ್ಸನ್)
* ಅತಿ ವೇಗದ ಅರ್ಧಶತಕ: 16 ಎಸೆತಗಳಲ್ಲಿ (17 ಎಸೆತಗಳಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ)
* 100 ರನ್ ಕೇವಲ 40ನಿಮಿಷಗಳಲ್ಲಿ
* 50 ರನ್ ಕೇವಲ 19 ನಿಮಿಷಗಳಲ್ಲಿ
* ಅತಿ ಹೆಚ್ಚು ಸಿಕ್ಸರ್ ಸಿಡಿತ 16 (ರೋಹಿತ್ ಶರ್ಮ ಜೊತೆ ಸಮಪಾಲು)
* ಅತಿ ಹೆಚ್ಚು ಸ್ಟ್ರೈಕ್ ರೇಟ್ (50+ರನ್ ಹೊಡೆದವರ ಪೈಕಿ) 338.63
* 300+ ಸ್ಟ್ರೈಕ್ ರೇಟ್ ದಾಟಿದ ಮೊದಲ ಕ್ರಿಕೆಟರ್.
* ಎಬಿಡಿ ರನ್ಸ್: 421146466.2211666461411.44.64666166646622.W
ದಕ್ಷಿಣ ಆಫ್ರಿಕಾದ ಸಾಧನೆ
* ಟೀಂ ಸ್ಕೋರ್: 439/2
* ಟಾಪ್ 3 ಬ್ಯಾಟ್ಸ್ ಮನ್ ಶತಕ(ಹಶೀಂ ಆಮ್ಲಾ 153 ನಾಟೌಟ್, ರಿಲೇ ರೊಸೋ 128, ಎಬಿಡಿ 149)
ತ್ವರಿತ ಗತಿಯಲ್ಲಿ ಶತಕ ಬಾರಿಸಿದ ಎಬಿಡಿ ಅವರಿಗೆ ಎಲ್ಲೆಡೆಯಿಂದ ಹರಿದಿದೆ ಪ್ರಶಂಸೆಯ ಸುರಿಮಳೆ ಹರಿದು ಬಂದಿದೆ. ಟ್ವಿಟ್ಟರ್ ನಲ್ಲಿ ಬಂದಿರುವ ಕೆಲ ಸಂದೇಶಗಳು ಇಲ್ಲಿವೆ ನೋಡಿ....

ಎಲ್ಲೆಡೆಯಿಂದ ಹರಿದಿದೆ ಪ್ರಶಂಸೆಯ ಸುರಿಮಳೆ
ತ್ವರಿತ ಗತಿಯಲ್ಲಿ ಶತಕ ಬಾರಿಸಿದ ಎಬಿಡಿ ಅವರಿಗೆ ಎಲ್ಲೆಡೆಯಿಂದ ಹರಿದಿದೆ ಪ್ರಶಂಸೆಯ ಸುರಿಮಳೆ ಹರಿದು ಬಂದಿದೆ. ಟ್ವಿಟ್ಟರ್ ನಲ್ಲಿ #ABDevilliers ಟಾಪ್ ಟ್ರೆಂಡಿಂಗ್ ನಲ್ಲಿದೆ.
ಬುಕ್ ಕ್ರಿಕೆಟ್ ನಲ್ಲೂ ದಾಖಲೆ ಮುರಿಯೋಕಾಗಲ್ಲ
ಬುಕ್ ಕ್ರಿಕೆಟ್ ನಲ್ಲೂ ದಾಖಲೆ ಮುರಿಯೋಕಾಗಲ್ಲ ಬಿಡಿ, ಎಬಿಡಿ ದಾಖಲೆ ಸೂಪರ್
ವಿಂಡೀಸ್ ದೈತ್ಯ ಗೇಲ್ ಕೂಡಾ ತಲೆಬಾಗಿದರು
ವಿಂಡೀಸ್ ದೈತ್ಯ ಗೇಲ್ ಕೂಡಾ ಎಬಿಡಿಗೆ ತಲೆಬಾಗಿ ಶುಭ ಕೋರಿದ್ದು ಹೀಗೆ
ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಝಲಕ
ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಝಲಕ ನೋಡಿ ಪ್ರೇಕ್ಷಕ ಪುಳಕ
ಎಬಿಡಿ ಆಟದ ಬಗ್ಗೆ ಹಶೀಂ ಆಮ್ಲಾ ಹೇಳಿಕೆ
ಒಂದು ಓವರ್ ನೋಡುತ್ತೇನೆ ಆಮೇಲೆ ಬಾರಿಸುತ್ತೇನೆ ಎಂದ ಎಬಿಡಿ ಎದುರಿಸಿದ ಮೊದಲ ಆರು ಎಸೆತಗಳಲ್ಲೇ 24ರನ್ ಚೆಚ್ಚಿದ ಮೇಲೆ ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ
ಎಲ್ಲೆಡೆಯಿಂದ ಹರಿದಿದೆ ಪ್ರಶಂಸೆಯ ಸುರಿಮಳೆ
ನಂಬಲು ಸಾಧ್ಯವಿಲ್ಲದಂಥ ಅಮೋಘ ಬ್ಯಾಟಿಂಗ್ ಪ್ರದರ್ಶನ : ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ
ವಿಶ್ವದಾಖಲೆ ಬರೆದ ಎಬಿಡಿ ಮನೇಲಿ ಮಾಡಿದ್ದೇನು?
ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಪಿಂಕ್ ಡೇ ಆಚರಿಸಿ, ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದ ಎಬಿಡಿ ಮನೆಗೆ ತೆರಳಿ ಮಾಡಿದ್ದೇನು? ಇಲ್ಲಿದೆ ಉತ್ತರ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications