2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಿದೆ. ಈಗಾಗಲೇ ನಾಲ್ಕು ಪಂದ್ಯಗಳು ಆಯೋಜನೆಯಾಗಿದ್ದು ಎಲ್ಲಾ ತಂಡಗಳು ಕೂಡ ಭರ್ಜರಿ ಆರಂಭ ಪಡೆಯುವತ್ತ ಚಿತ್ತ ನೆಟ್ಟಿದೆ. ನಾಲ್ಕನೇ ಪಂದ್ಯ ಶನಿವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದು ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಶ್ರೀಲಂಕಾ ತಂಡ ಮೊದಲ ವಿಕೆಟನ್ನು 10 ರನ್‌ಗಳಿಗೆ ಪಡೆದುಕೊಂಡಿದ್ದರೂ ನಂತರ ಕ್ವಿಂಟನ್ ಡಿಕಾಕ್ ಹಾಗೂ ರಾಸ್ಸಿ ವಾನ್ ಡರ್ ಡುಸೆನ್ ಭರ್ಜರಿ ಶತಕ ಸಿಡಿಸಿದ್ದು 204 ರನ್‌ಗಳ ಜೊತೆಯಾಟ ಮಾಯತ್ರವಲ್ಲದೆ ಇಬ್ಬರು ಕೂಡ ವೈಯಕ್ತಿಕ ಶತಕ ಸಿಡಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಐಡೆನ್ ಮಾರ್ಕ್ರಮ್ ಮತ್ತೊಂದು ಅಮೋಘ ಇನ್ನಿಂಗ್ಸ್ ಆಡಿದ್ದು ಸ್ಪೋಟಕ ಶತಕ ಸಿಡಿಸಿದರು.

ಈ ಪಂದ್ಯದಲ್ಲಿ ಮಾರ್ಕ್ರಮ್ ಕೇವಲ 49 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಐಸಿಸಿ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ವೇಗದ ಶತಕವನ್ನು ದಾಖಲಿಸಿದ ಸಾಧನೆ ಮಾಡಿದ್ದಾರೆ. 12 ವರ್ಷಗಳ ಹಿಂದೆ 2011ರಲ್ಲಿ ಐರ್ಲೆಂಡ್‌ನ ಕೆವಿನ್ ಓಬ್ರಿಯಾನ್ ಅವರ ದಾಖಲೆ ಮುರಿದು ಹೊಸ ದಾಖಲೆ ಬರೆದಿದ್ದಾರೆ. ಹಾಗಾದರೆ ವಿಶ್ವಕಪ್ ಇತಿಹಾಸದಲಲ್ಇ ದಾಖಲಾದ ನಾಲ್ಕು ಅತ್ಯಂತ ವೇಗದ ಶತಕಗಳು ಯಾವುದು? ಯಾರು ಸಿಡಿಸಿದ್ದಾರೆ? ಮುಂದೆ ಓದಿ..
ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸುವ ಮೂಲಕ ಈ ದಾಖಲೆಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಮೂಲಕ ಅವರು ಈ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ತಂಡ ಬೃಹತ್ ಮೊತ್ತವನ್ನು ಗಳಿಸಲು ಕಾರಣವಾಗಿದ್ದಾರೆ. ಈ ಸಾಧನೆಯನ್ನು ತಮ್ಮ ಹೆಸರಿಗೆ ದಾಖಲಿಸಲು ಮಾರ್ಕ್ರಾಮ್ ಕೇವಲ 49 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದಾರೆ.
ಐರ್ಲೆಂಡ್ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟರ್ ಕೆವಿನ್ ಒ'ಬ್ರಿಯಾನ್ ಐಸಿಸಿ ಕ್ರಿಕೆಟ್ ವಿಶ್ವಕಪ್ 2011ರಲ್ಲಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಇಂಗ್ಲೆಂಡ್‌ನಂಥಾ ಪ್ರಬಲ ತಂಡದ ವಿರುದ್ಧ ಕೇವಲ 50 ಎಸೆತಗಳಲ್ಲಿ ಶತಕವನ್ನು ಸಿಡಿಸಿ ಕ್ರಿಕೆಟ್ ಜಗತ್ತಿನಲ್ಲಿ ರಾತ್ರೋರಾತ್ರಿ ಸ್ಟಾರ್ ಆದರು ಐರ್ಲೆಂಡ್ ತಂಡದ ಈ ಸ್ಪೋಟಕ ಆಟಗಾರ.
ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದಲೇ ಬಹಳ ಪ್ರಸಿದ್ಧರಾಗಿದ್ದಾರೆ. ಆಸ್ಟ್ರೇಲಿಯಾದ ಆತಿರ್ಥಯದಲ್ಲಿಯೇ ನಡೆದ 2015 ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅವರು ಬ್ಯಾಟಿಂಗ್‌ನ್ಲಲಿ ತನ್ನ ನಿಜವಾದ ಸಾಮರ್ಥ್ಯವನ್ನು ಬಹಿರಂಗಪಡಿಸಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೇವಲ 51 ಎಸೆತಗಳಲ್ಲಿ ಮ್ಯಾಕ್ಸ್‌ವೆಲ್ ಶತಕವನ್ನು ಸಿಡಿಸಿ ಆಸ್ಟ್ರೇಲಿಯಾ ತ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟರ್ ಮತ್ತು ನಾಯಕ ಎಬಿ ಡಿವಿಲಿಯರ್ಸ್ ಮೈದಾನದ ಎಲ್ಲಾ ದಿಕ್ಕಿಗೂ ಬಾರಿಸಿ ರನ್‌ಗಳಿಸುವುದಕ್ಕೆ ಹೆಸರಾಗಿರುವ ಆಟಗಾರ. ಇದೇ ಕಾರಣಕ್ಕೆ ಅವರನ್ನು ಅಭಿಮಾನಿಗಳು 'ಮಿಸ್ಟರ್ 360' ಎಂದೂ ಕರೆಯುತ್ತಾರೆ. 2015 ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಎಬಿಡಿ ಕೇವಲ 52 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಅತಿ ವೇಗವಾಗಿ ಶತಕ ಸಿಡಿಸಿದ ಆಟಗಾರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.