ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞತೆ ಸಲ್ಲಿಸಿದ ಕ್ರಿಕೆಟ್ ದಿಗ್ಗಜ ತೆಂಡೂಲ್ಕರ್

ನವದೆಹಲಿ, ಜೂನ್ 12: ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ನಡೆಯುತ್ತಿರುವಾಗಲೇ ಕ್ರಿಕೆಟ್ ಪ್ರಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಮೋದಿಗೆ ಥ್ಯಾಂಕ್ಸ್ ಹೇಳಿ ಸಚಿನ್ ಟ್ವೀಟ್ ಮಾಡಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಅವರಿಗೆ ಪ್ರಧಾನಿ ಮೋದಿ ಶನಿವಾರ (ಜೂನ್ 8) ಭಾರತದ ಆಟಗಾರರ ಹಸ್ತಾಕ್ಷರವಿರುವ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದರು. ಈ ಚಿತ್ರವನ್ನು ಪ್ರಧಾನಿಯ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು.
ಟ್ವೀಟ್‌ನನಲ್ಲಿ, 'ಕ್ರಿಕೆಟ್‌ನೊಂದಿಗೆ ಬಾಂಧವ್ಯ ಬೆಸುಗೆ ಹಾಕುತ್ತಿದ್ದೇವೆ. ನನ್ನ ಸ್ನೇಹಿತ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಮ್ ಮೊಹಮ್ಮದ್‌ಗೆ ಕ್ರಿಕೆಟ್ ಎಂದರೆ ಅಚ್ಚುಮೆಚ್ಚು. ಹೀಗಾಗಿ ನಾನವರಿಗೆ ಟೀಮ್ ಇಂಡಿಯಾ ಆಟಗಾರರ ಸಹಿಯಿರುವ ಬ್ಯಾಟನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ' ಎಂದು ಬರೆಯಲಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿನ್, 'ವಿಶ್ವಕಪ್ ಹೊತ್ತಿನಲ್ಲೇ ಕ್ರಿಕೆಟನ್ನು ಪ್ರಚಾರ ಮಾಡುತ್ತಿರುವುದಕ್ಕಾಗಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಇದು ಕ್ರೆಕೆಟ್ ರಾಜತಂತ್ರಕ್ಕೆ ಉತ್ತಮ ಉದಾಹರಣೆ' ಎಂಬ ಸಾಲುಗಳೊಂದಿಗೆ ರೀಟ್ವೀಟ್ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications