For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ವೇಳಾಪಟ್ಟಿ: ಕಡೆಗೂ ಪಾಕ್ ಮನವಿಗೆ ಸೊಪ್ಪು ಹಾಕಲೇ ಇಲ್ಲ ಐಸಿಸಿ

ಐಸಿಸಿ ವಿಶ್ವಕಪ್ ಟೂರ್ನಿಗೆ ವೇಳಾಪಟ್ಟಿಯನ್ನು ಟೂರ್ನಿಯ ಆರಂಭಕ್ಕೆ ನೂರು ದಿನಗಳು ಬಾಕಿಯಿರುವಾಗ ಬಿಡುಗಡೆಗೊಳಿಸಿದೆ. ಸಾಮಾನ್ಯವಾಗಿ ವಿಶ್ವಕಪ್‌ನಂಥಾ ಟೂರ್ನಿಯ ವೇಳಾಪಟ್ಟಿ ಒಂದು ವರ್ಷಗಳ ಅಂತರವಿರುವಾಗಲೇ ಬಿಡುಗಡೆಯಾಗುತ್ತದೆ. ಆದರೆ ಈ ಬಾರಿಯ ವಿರ್ಶವಕಪ್ ಭಾರತದಲ್ಲಿ ನಡೆಯುತ್ತಿರುವ ಕಾರಣ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಪದೇ ಪದೇ ಟೂರ್ನಿಯಲ್ಲಿ ಭಾಗವಹಿಸುವ ವಿಚಾರವಾಗಿ ನಂತರ ತಾಣಗಳ ವಿಚಾರವಾಗಿ ಖ್ಯಾತೆಗಳನ್ನು ತೆಗೆಯುತ್ತಲೇ ಇದ್ದ ಕಾರಣ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಐಸಿಸಿ ಇಷ್ಟು ಕಾಲ ತೆಗೆದುಕೊಂಡಿತು.

ಕಡೆಯ ಹಂತದವರೆಗೂ ಪಾಕಿಸ್ತಾನದ ಈ ಖ್ಯಾತೆ ಮುಂದುವರಿದಿದ್ದು ತಾನು ಆಡುವ ಎರಡು ತಾಣಗಳ ಸ್ಥಳವನ್ನು ಬದಲಾಯಿಸುವಂತೆ ಪಾಕಿಸ್ತಾನ ಬೇಡಿಕೆ ಮುಂದಿಟ್ಟಿತ್ತು. ಈ ವಿಚಾರವಾಗಿ ವಿಶ್ವಕಪ್ ಆಯೋಜನೆ ಮಾಡುವ ಬಿಸಿಸಿಐ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಖಡಕ್ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು ಪಿಸಿಬಿಯ ಮನವಿಯನ್ನು ತಿರಸ್ಕರಿಸಿದ್ದು ತಾತ್ಕಾಲಿಕ ವೇಳಾಪಟ್ಟಿಯಲ್ಲಿದ್ದಂತೆಯೇ ಪಾಕಿಸ್ತಾನದ ವೇಳಾಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆಗೊಳಿಸಿದೆ.

Pakistans request to relocate two matches is denied by ICC

ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಮಾಡಿರುವ ಮನವಿಯ ಕುರಿತಾಗಿ ಐಸಿಸಿ ಹಾಗೂ ಬಿಸಿಸಿಐ ಜೂನ್ 20ರಂದು ಸಭೆ ನಡೆಸಿತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಮನವಿಯನ್ನು ತಿರಸ್ಕರಿಸುವ ನಿರ್ಧಾರಕ್ಕೆ ಬಂದಿತ್ತು. ಹೀಗಾಗಿ ಈಗಾಗಲೇ ನಿರ್ಧರಿಸಿದಂತೆಯೇ ವೇಳಾಪಟ್ಟಿ ಅಧಿಕೃತಗೊಳಿಸಲಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಯೋಜನೆಯಾಗಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಹಾಗೂ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಅಫ್ಘಾನಿಸ್ಥಾನ ವಿರುದ್ಧದ ಪಂದ್ಯವನ್ನು ಅದಲು ಬದಲು ಮಾಡುವಂತೆ ಪಾಕಿಸ್ಥಾನ ಮನವಿ ಮಾಡಿತ್ತು. ಚೆನ್ನೈನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಅಫ್ಘಾನಿಸ್ತಾನದ ಬಲಿಷ್ಠ ಸ್ಪಿನ್ ಬೌಲರ್‌ಗಳ ಎದುರು ಪಾಕ್ ತಮಡ ಸಂಕಷ್ಟವನ್ನು ಅನುಭವಿಸುವ ನಿರೀಕ್ಷೆಯ ಕಾರಣದಿಂದಾಗಿ ಈ ಮನವಿಯನ್ನು ಪಾಕಿಸ್ತಾನ ಮಾಡಿದೆ ಎನ್ನಲಾಗಿದೆ. ಆದರೆ ಪಾಕಿಸ್ತಾನದ ಈ ಮನವಿಯಲ್ಲಿ ಸಕಾರಣವಿಲ್ಲದ ಕಾರಣ ಅದನ್ನು ಐಸಿಸಿ ತಿರಸ್ಕರಿಸಿದೆ.

ಇದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಹ್ಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧದ ಪಂದ್ಯಕ್ಕೆ ಅಕ್ಷೇಪಿಸಿತ್ತು. ಅಹ್ಮದಾಬಾದ್ ಬದಲಿಗೆ ಬೇರೆ ಸ್ಥಳದಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಆಯೋಜಿಸುವಂತೆ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ಕೂಡ ಬಿಸಿಸಿಐ ಹಾಗೂ ಐಸಿಸಿ ತಿರಸ್ಕರಿಸಿದೆ.

ಈ ಬಾರಿಯ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು 8 ತಂಡಗಳು ಈಗಾಗಲೇ ಅರ್ಹತೆ ಪಡೆದುಕೊಂಡಿದೆ. ಉಳಿದ ಎರಡು ತಂಡಗಳು ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನಲ್ಲಿ ಫೈನಲ್‌ಗೆ ಪ್ರವೇಶಿಸಿ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.

ಒಟ್ಟು 10 ತಾಣಗಳಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ ನಡೆಯಲಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಕೂಡ ವಿಶ್ವಕಪ್ ಆಯೋಜನೆ ಮಾಡುವ 10 ತಂಡಗಳ ಪೈಕಿ ಒಂದಾಗಿದೆ. ಎಲ್ಲಾ ಹತ್ತು ತಾಣಗಳ ಪೈಕಿ ಹೈದರಾಬಾದ್‌ನಲ್ಲಿ ಮೂರ ಪಂದ್ಯಗಳು ನಡೆಯಲಿದ್ದು ಉಳಿದ 9 ತಾಣಗಳು ಕೂಡ ತಲಾ ಐದು ಪಂದ್ಯಗಳಿಗೆ ಆತಿಥ್ಯವನ್ನು ವಹಿಸಲಿದೆ. ಹೀಗಾಗಿ ಬೆಂಗಳೂರಿನಲ್ಲಿಯೂ ಈ ಬಾರಿಯ ವಿಶ್ವಕಪ್‌ನ ಐದು ಪಂದ್ಯಗಳು ಆಯೋಜನೆಯಾಗಲಿದ್ದು ಭಾರತದ ಒಂದು ಪಂದ್ಯ ಕೂಡ ಇದೆ.

ಇನ್ನು ಮತ್ತೊಂದೆಡೆ ಐಸಿಸಿ ವಿಶ್ವಕಪ್‌ನ ಅರ್ಹತಾ ಪಂದ್ಯಗಳು ಪ್ರಸ್ತುತ ಜಿಂಬಾಬ್ವೆಯಲ್ಲಿ ನಡೆಯುತ್ತಿವೆ. ಈ ಟೂರ್ನಿಯಲ್ಲಿ ಭಾಗವಹಿಸಿರುವ ತಂಡಗಳ ಪೈಕಿ ಯುನೈಟೆಡ್ ಸ್ಟೇಟ್ಸ್, ಐರ್ಲೆಂಡ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಈಗಾಗಲೇ ಹೊರಬಿದ್ದಿವೆ. ಉಳಿದಂತೆ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಜಿಂಬಾಬ್ವೆ, ನೆದರ್ಲೆಂಡ್ಸ್, ಶ್ರೀಲಂಕಾ ಮತ್ತು ಒಮಾನ್ ತಂಡಗಳು ಸ್ಪರ್ಧೆಯಲ್ಲಿ ಉಳಿದುಕೊಂಡಿದೆ.

ಭಾರತದ ನೆಲದಲ್ಲಿ ನಡೆಯಲಿರುವ ಮೆಗಾ ಈವೆಂಟ್‌ನಲ್ಲಿ ಉಳಿದ ಎರಡು ಸ್ಥಾನಗಳಿಗಾಗಿ ಇವುಗಳು ಹೋರಾಡುತ್ತಿದ್ದು ಈ ಆರು ತಂಡಗಳ ಪೈಕಿ ಮುಖ್ಯ ಟೂರ್ನಿಗೆ ಅರ್ಹತೆ ಪಡೆಯುವ ಆ ಎರಡು ತಂಡಗಳು ಯಾವುದು ಎಂಬುದು ಕೂಡ ಕುತೂಹಲ ಮೂಡಿಸಿದೆ.

Story first published: Tuesday, June 27, 2023, 21:59 [IST]
Other articles published on Jun 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+