Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌: ಅತ್ಯದ್ಭುತ ರನ್‌ ಔಟ್‌ಗೆ ಗಮನ ಸೆಳೆದ ಕಾಟ್ರೆಲ್- ವೈರಲ್ ವಿಡಿಯೋ

World cup: Sheldon Cottrell pulls off one of great World Cup runouts

ಟೌನ್‌ಟನ್, ಜೂನ್ 18: ವಿಕೆಟ್ ಲಭಿಸಿದ ಕೂಡಲೇ ಸೆಲ್ಯೂಟ್ ಹೊಡೆದು ಸಂಭ್ರಮಾಚರಿಸುವ ವೆಸ್ಟ್ ಇಂಡೀಸ್ ಮಧ್ಯಮ ವೇಗಿ ಶೆಲ್ಡನ್ ಕಾಟ್ರೆಲ್ ಅತ್ಯಧ್ಬುತ ರನ್‌ ಔಟ್‌ಗಾಗಿ ಗಮನ ಸೆಳೆದಿದ್ದಾರೆ. ಸೋಮವಾರ (ಜೂನ್ 17) ನಡೆದ ವೆಸ್ಟ್ ಇಂಡೀಸ್ vs ಬಾಂಗ್ಲಾದೇಶ ವಿಶ್ವಕಪ್ ಪಂದ್ಯದಲ್ಲಿ ಕಾಟ್ರೆಲ್ ರನ್‌ ಔಟ್ ಮಾಡಿ ಮಿಂಚಿದರು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಟೌನ್‌ಟನ್‌ನ ಕೂಪರ್ ಅಸೋಸಿಯೇಟ್ಸ್ ಕೌಂಟಿ ಗ್ರೌಂಟ್‌ನಲ್ಲಿ ನಡೆದ ವೆಸ್ಟ್ ಇಂಡೀಸ್-ಬಾಂಗ್ಲಾದೇಶ ಪಂದ್ಯದಲ್ಲಿ ಬಾಂಗ್ಲಾ ಇನ್ನಿಂಗ್ಸ್‌ನ 18ನೇ (17.2) ಓವರ್‌ನಲ್ಲಿ ಕಾಟ್ರೆಲ್ ಅಪರೂಪ ರೀತಿಯಲ್ಲಿ ಆರಂಭಿಕ ಆಟಗಾರ ತಮೀಮ್ ಇಕ್ಬಲ್ ಅವರನ್ನು ಓಟ್ ಮಾಡಿದರು.

ತನ್ನ 3.2ನೇ ಓವರ್ ಆಗಿ ಲೆಂತ್ ಬಾಲ್ ಎಸೆದ ಕಾಟ್ರೆಲ್ ಕೈಗೆ, ತಮೀಮ್ ಇಕ್ಬಾಲ್ ಬ್ಯಾಟ್ ತಾಗಿ ಬಂದ ಚೆಂಡು ಕೂತಿತ್ತು. ತಮೀಮ್ ರನ್ ಕದಿಯಲು ಕ್ರೀಸ್‌ ಬಿಟ್ಟು ಕೊಂಚ ಮುಂದೆ ಬಂದಿದ್ದನ್ನು ಗಮನಿಸಿದ ಕಾಟ್ರೆಲ್ ಮಿಂಚಿನ ವೇಗದಲ್ಲಿ ಚೆಂಡನ್ನು ವಿಕೆಟ್ ನತ್ತ ಎಸೆದರು. ಚೆಂಡು ಬೇಲ್ಸ್ ಎಗರಿಸಿತ್ತು.

ಸೂಕ್ಷ್ಮ ರೀತಿಯಲ್ಲಿ ಔಟ್ ಆದ ತಮೀಮ್ ಅರ್ಧಶತಕದ ಅಂಚಿನಲ್ಲಿ (48 ರನ್) ನಿರ್ಗಮಿಸಬೇಕಾಯ್ತು. ಒಟ್ಟು 10 ಓವರ್‌ ಎಸೆದ ಕಾಟ್ರೆಲ್‌ಗೆ ಈ ರನ್ ಔಟ್ ಬಿಟ್ಟರೆ ಒಂದೂ ವಿಕೆಟ್ ಲಭಿಸಲಿಲ್ಲ. ಪಂದ್ಯವನ್ನು ಬಾಂಗ್ಲಾ ಭರ್ಜರಿ 7 ವಿಕೆಟ್‌ಗಳಿಂದ ಗೆದ್ದಿತು. ಶಕೀಬ್ ಅಲ್ ಹಸ್ (124 ರನ್), ತಮೀಮ್, ಲಿಟನ್ ದಾಸ್ (ಅಜೇಯ 94) ರನ್ ಕೊಡುಗೆಯಿಂದ ಬಾಂಗ್ಲಾ 322 ರನ್ ಗುರಿ ತಲುಪಿ ಗೆಲುವಾಚರಿಸಿತು.

Story first published: Tuesday, June 18, 2019, 15:47 [IST]
Other articles published on Jun 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+