ಭಾರತಕ್ಕೆ ಕೊನೇಯ ಅವಕಾಶ: ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಡಲೇಬೇಕಾದ 3 ಅಂಶಗಳಿವು!!
ಅಕ್ಟೋಬರ್ 5ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು ಅದರ ಭಾಗವಾಗಿ ಈಗಾಗಲೇ ಅಭ್ಯಾಸ ಪಂದ್ಯಗಳು ಶುರುವಾಗಿದೆ. ಸ್ವತಃ ಐಸಿಸಿ ಎಲ್ಲಾ ತಂಡಗಳಿಗೂ ಮೆಗಾ ಟೂರ್ನಿಗೂ ಮುನ್ನ ಎರಡೆರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಶುಕ್ರವಾರ ಮೂರು ಅಭ್ಯಾಸ ಪಂದ್ಯಗಳು ಆಯೋಜೆನಯಾಗಿದ್ದರೆ ಭಾನುವಾರ ಭಾರತದ ಅಭ್ಯಾಸ ಪಂದ್ಯ ಸೇರಿದಂತೆ ಎರಡು ಅಭ್ಯಾಸ ಪಂದ್ಯಗಳು ಆಯೋಜನೆಯಾಗಲಿದೆ.
ಶನುವಾರ ನಡೆಯಲಿರುವ ಭಾರತದ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಎದುರಾಳಿಯಾಗಿ ಕಣಕ್ಕಿಳಿಯಲಿದೆ. ಈ ಬಾರಿಯ ವಿಶ್ವಕಪ್ ಟೂರ್ನಿ ಗೆಲ್ಲಬಹುದಾದ ಎರಡು ನೆಚ್ಚಿನ ತಮಡಗಳು ಈ ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ. ಅದಾದ ಬಳಿಕ ಭಾರತ ಎರಡನೇ ಅಭ್ಯಾಸ ಪಂದ್ಯವನ್ನು ನೆದರ್ಲೆಂಡ್ಸ್ ತಂಡದ ವಿರುದ್ಧ ಮುಂದಿನ ಮಂಗಳವಾರ ನಡೆಸಲಿದೆ.

ಈ ಎರಡು ಅಭ್ಯಾಸ ಪಂದ್ಯಗಳಲ್ಲಿ ವಿಶ್ವಕಪ್‌ನ ದೃಷ್ಟಿಯಿಂದ ಭಾರತ ತಂಡ ಮಾಡಬೇಕಿರುವ ಮೂರು ಪ್ರಮುಖ ನಿರ್ಧಾರಗಳು ಯಾವುದು ಎನ್ನುವುದನ್ನು ನೋಡೋಣ. ಮುಂದೆ ಓದಿ..
ಅಭ್ಯಾಸಕ್ಕಾಗಿ ಆಡಬೇಕು, ಗೆಲುವಿಗಾಗಿ ಅಲ್ಲ!
ಭಾರತ ಅಭ್ಯಾಸ ಪಂದ್ಯಗಳನ್ನು ಗೆಲ್ಲದಿದ್ದರೂ ಪರವಾಗಿಲ್ಲ. ಆದರೆ ಈ ಪಂದ್ಯಗಳಲ್ಲಿ ಸಾಧ್ಯವಾದಷ್ಟು ಅಭ್ಯಾಸ ಮಾಡುವ ಗುರಿಯನ್ನು ಹೊಂದಿರಬೇಕು. 2021ರ ಟಿ20 ವಿಶ್ವಕಪ್‌ಗೆ ಮುನ್ನ ನಡೆದ ಅಭ್ಯಾಸ ಪಂದ್ಯದ ಸಂದರ್ಭದಲ್ಲಿ ಭಾರತ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಆದರೆ ಅಂತಿಮವಾಗಿ ಭಾರತ ಸೂಪರ್ 12ರ ಸುತ್ತಿನಿಂದ ಹೊರಬಿದ್ದಿತ್ತು. ಆದರೆ ಆಸ್ಟ್ರೇಲಿಯಾ ವಿಶ್ವಕಪ್ ಟೂರ್ನಿಯನ್ನು ಗೆದ್ದುಬೀಗಿತ್ತು.
ಜಡೇಜಾ ಬ್ಯಾಟಿಂಗ್ ಮೇಲೆ ಗಮನ
ಕ್ರಿಕೆಟ್‌ನಲ್ಲಿ ಫಾರ್ಮ್ ಮರಳಿ ಕಂಡುಕೊಳ್ಳಲು ಉತ್ತಮ ಮಾರ್ಗವೆಂದರೆ ಸಾಧ್ಯವಾದಷ್ಟು ಎಸೆತಗಳನ್ನು ಎದುರಿಸುವುದು ಎಂದು ಅನೇಕ ಬ್ಯಾಟರ್‌ಗಳು ತಮ್ಮ ಅನುಭವದ ಮಾತುಗಳನ್ನು ಹೇಳಿಕೊಂಡಿದ್ದಾರೆ. ಪ್ರಸ್ತುತ ಬ್ಯಾಟಿಂಗ್‌ನಲ್ಲಿ ಮಂಕಾದಂತೆ ಕಾಣಿಡುತ್ತಿರುವ ರವೀಂದ್ರ ಜಡೇಜಾ ಅವರನ್ನು ಈ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದಲ್ಲಿ ಕಳುಹಿಸಬೇಕು. ಅವರು ಎರಡು ಪಂದ್ಯಗಳಲ್ಲಿ 150-165 ಎಸೆತಗಳನ್ನು ಆಡಿ ದೊಡ್ಡ ಸ್ಕೋರ್ ಮಾಡಿದರೆ ಅದು ಅವರಿಗೆ ವಿಶ್ವಕಪ್ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ. ಭಾರತ ಅಭ್ಯಾಸ ಪಂದ್ಯಗಳಲ್ಲಿ ಅವರನ್ನು ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಮಾತ್ರವೇ ಆಡಿಸಬೇಕು.
ಇಶಾನ್, ಐಯ್ಯರ್, ಮತ್ತು ಸೂರ್ಯಕುಮಾರ್‌ಗೆ 3 ಪಂದ್ಯಗಳಲ್ಲೂ ಅವಕಾಶ
ಭಾರತ ತನ್ನ ಮಧ್ಯಮ ಕ್ರಮಾಂಕವನ್ನು ಅಂತಿಮಗೊಳಿಸಲು ಹೆಚ್ಚು ಅವಕಾಶವಿಲ್ಲ. ಈ ಅಭ್ಯಾಸ ಪಂದ್ಯಗಳನ್ನು ಅದಕ್ಕಾಗಿ ಬಳಸಿಕೊಳ್ಳಬೇಕಿದೆ. ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶಗಳನ್ನು ಪಡೆಯಬೇಕು. ಇಲ್ಲಿ ನೀಡುವ ಪ್ರದರ್ಶನದ ಆಧಾರದ ಮೇಲೆ, ತಂಡದ ಮ್ಯಾನೇಜ್‌ಮೆಂಟ್ ಮುಖ್ಯ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಯಾರು ಬ್ಯಾಟ್ ಮಾಡಬೇಕು ಎನ್ನುವುದನ್ನು ನಿರ್ಧರಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications