ಕಾಮೆಂಟರಿ ಬಾಕ್ಸ್‌ನಿಂದ ಗತಕಾಲಕ್ಕೆ ತೆರಳಿದ ಸಚಿನ್, ಸೆಹ್ವಾಗ್, ಗಂಗೂಲಿ!

ಲಂಡನ್, ಮೇ 31: ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ಗುರುವಾರ (ಮೇ 30) ನಡೆದ 2019ರ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಕಾಮೆಂಟರಿ ಬಾಕ್ಸ್ ವಿಶೇಷತೆಗಾಗಿ ಗಮನ ಸೆಳೆಯಿತು. ಕಾಮೆಂಟರಿ ಬಾಕ್ಸ್‌ನಲ್ಲಿ ಭಾರತ ಕ್ರಿಕೆಟ್‌ನ ಮೂರು ದಂತಕತೆಗಳಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಇದ್ದಿದ್ದು ಇದಕ್ಕೆ ಕಾರಣ.
ಪಂದ್ಯದಲ್ಲಿ ಪಾರಮ್ಯ ಮೆರೆದ ಆತಿಥೇಯ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧ 104 ರನ್ ಜಯ ಗಳಿಸಿತಾದರೂ, ಕಾಮೆಂಟರಿ ಬಾಕ್ಸ್ ನಲ್ಲಿದ್ದ, 2003ರ ಭಾರತ ವಿಶ್ವಕಪ್ ತಂಡದ ಮೂವರು ಸ್ಟಾರ್‌ಗಳು ಪ್ರೇಕ್ಷಕರ ಪ್ರಮುಖಾಕರ್ಷಣೆಯಾಗಿದ್ದರು. ಇದೇ ಪಂದ್ಯದಲ್ಲಿ ಕಾಮೆಂಟರಿ ಮೂಲಕ ಬ್ಯಾಟಿಂಗ್ ದಿಗ್ಗಜ ತೆಂಡೂಲ್ಕರ್ ಜೊಚ್ಚಲ ಬಾರಿಗೆ ವಿಶ್ವಕಪ್ ಕಾಮೆಂಟರಿ ನಡೆಸಿಕೊಟ್ಟರು.
ಹಿಂದೆ ಭಾರತ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಜೊತೆ ಆರಂಭಿಕರಾಗಿ ಇಳಿಯುತ್ತಿದ್ದ ವೀರೇಂದ್ರ ಸೆಹ್ವಾಗ್ ಮಾಡಿರುವ ಟ್ವೀಟ್ ಕೂಡ ಹೆಚ್ಚು ಗಮನ ಸೆಳೆದಿತ್ತು. ಆ ಟ್ವೀಟ್‌ನಲ್ಲಿ ಗಂಗೂಲಿ, ಸಚಿನ್, ಸೆಹ್ವಾಗ್ ಮೂವರೂ ಕಾಮೆಂಟರಿ ಬಾಕ್ಸ್‌ನಲ್ಲಿ ಕೂತಿರುವ ಫೋಟೋ ಮತ್ತು 2003ರ ವಿಶ್ವಕಪ್ ಪಂದ್ಯದ ವೇಳೆ ಮೂವರೂ ಮೈದಾನದಲ್ಲಿ ಕಾಣಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿರುವ ಸೆಹ್ವಾಗ್, 'ಮತ್ತೆ ಜೊತೆಯಾಗಿದ್ದೇವೆ' ಎಂದು ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications