ಪಾಕಿಸ್ತಾನ ವೇಗಿಗಳ ವಿರುದ್ಧ ಕಿವೀಸ್ ರಣಾರ್ಭಟ: ಅಭ್ಯಾಸ ಪಂದ್ಯದಲ್ಲಿ ಪಾಕ್‌ಗೆ ಶಾಕ್!!
ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರನ್ ಈ ಹೈಸ್ಕೋರಿಂಗ್ ಪಂದ್ಯದಲ್ಲಿ ಎರಡು ತಂಡಗಳು ಕೂಡ ರನ್ ಮಳೆಯನ್ನೇ ಹರಿಸಿದೆ. ಬೃಹತ್ ಮೊತ್ತದ ಗುರಿಯನ್ನು ನೀಡಿದ್ದರೂ ನ್ಯೂಜಿಲೆಂಡ್ ತಂಡ ಭರ್ಜರಿಯಾಗಿ ಗೆದ್ದುಬೀಗಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ರಿಜ್ವಾನ್ ಶತಕ ಹಾಗೂ ಬಾಬರ್ ಅಜಂ ಅವರ 80 ರನ್‌ಗಳ ಕೊಡುಗೆಯ ಕಾರಣದಿಂದಾಗಿ ಬರೊಬ್ಬರಿ 345 ರನ್‌ಗಳನ್ನು ಕಲೆಹಾಕಿತ್ತು. ಆದರೆ ಈ ಮಿತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಇನ್ನೂ 6.2 ಓವರ್‌ಗಳು ಬಾಕಿಯಿರುವಂತೆಯೇ ಗೆದ್ದು ಬೀಗಿದೆ. ಈ ಮೂಲಕ ಕಿವೀಸ್ ಪಡೆ ಭರ್ಜರಿ ಸಿದ್ಧತೆ ಮಾಡಿಕೊಂಡಂತಾಗಿದೆ.

ಈ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಆಸರೆಯಾಗಿದ್ದು ನಾಯಕ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಹಾಗೂ ಸೌದ್ ಶಕೀಲ್. ಬಾಬರ್ ಭರ್ಜರಿ 80 ರನ್‌ಗಳ ಕೊಡುಗೆ ನೀಡಿದರೆ ರಿಜ್ವಾನ್ 103 ರನ್‌ಗಳನ್ನು ಗಳಿಸಿ ನಿವೃತ್ತಿ ಪಡೆದುಕೊಂಡರು. ಇನ್ನು ಸೌದ್ ಶಕೀಲ್ 75 ರನ್‌ಗಳ ಕೊಡುಗೆ ನೀಡಿದ್ದಾರೆ. ಹೀಗಾಗಿ ನಿಗದಿತ 50 ಓವರ್‌ಗಳಲ್ಲಿ ಪಾಕ್ ತಂಡ 5 ವಿಕೆಟ್‌ಗಳನ್ನು ಕಳೆದುಕೊಂಡು 345 ರನ್‌ಗಳನ್ನು ಕಲೆಹಾಕಿತ್ತು.
ಇದನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಮೊದಲ ವಿಕೆಟನ್ನು ಕೇವಲ 4 ರನ್‌ಗಳಿಗೆ ಕಳೆದುಕೊಂಡಿತು. ಆದರೆ ಆರಂಭಿಕನಾಗಿ ಕಣಕ್ಕಿಳಿದ ರಚಿನ್ ರವೀಂದ್ರ ಹಾಗೂ ಕೇನ್ ವಿಲಿಯಮ್ಸನ್ ಅಮೋಘ ಪ್ರದರ್ಶನ ನೀಡಿದರು. ರಚಿನ್ ರವೀಂದ್ರ ಪಾಕಿಸ್ತಾನದ ಪ್ರಮುಖ ವೇಗಿಗಳ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದು ಭರ್ಜರಿ 97 ರನ್‌ಗಳನ್ನು ಗಳಿಸುವ ಮೂಲಕ ಅಬ್ಬರಿಸಿದ್ದಾರೆ. ಇದಕ್ಕಾಗಿ ಅವರು ಬಳಸಿದ್ದು 72 ಎಸೆತಗಳನ್ನು. ಮತ್ತೊಂದೆಡೆ ಸುದೀರ್ಘ ಕಾಲದ ಬಳಿಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಕೇನ್ ವಿಲಿಯಮ್ಸನ್, 54 ರನ್‌ಗಳನ್ನು ಗಲಳಿಸುವ ಮೂಲಕ ಅದ್ಭುತ ಪುನರಾಗಮನ ಮಾಡಿದ್ದಾರೆ.
ಇನ್ನು ಕಿವೀಸ್ ಪಡೆಯ ಈ ರನ್ ಬೆನ್ನಟ್ಟುವಿಕೆಯನ್ನು ಗಮನಸೆಳೆದಿದ್ದು ಡ್ಯಾರೆಲ್ ಮಿಚೆಲ್ ಹಾಗೂ ಮಾರ್ಕ್ ಚಾಪ್ಮನ್ ಆಟ. ಈ ಇಬ್ಬರು ಕೂಡ ಅರ್ಧ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಹೀಗಾಘಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ನೀಡಿದ 346 ರನ್‌ಗಳ ಗುರಿಯನ್ನು ಕೇವಲ 43.4 ಓವರ್‌ಗಳಲ್ಲಿ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ.
ನ್ಯೂಜಿಲೆಂಡ್ ಸ್ಕ್ವಾಡ್: ವಿಲ್ ಯಂಗ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಮಾರ್ಕ್ ಚಾಪ್ಮನ್, ಇಶ್ ಸೋಧಿ, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್
ಪಾಕಿಸ್ತಾನ ಸ್ಕ್ವಾಡ್: ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಜಮ್ (ನಾಯಕ), ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಅಘಾ ಸಲ್ಮಾನ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್, ಹಸನ್ ಅಲಿ, ಉಸಾಮಾ ಮಿರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications