ಭಾರತದ ಸೋಲಿಗೆ ಧೋನಿ ಕೊಟ್ಟ 5 ಕಾರಣಗಳು
ಮುಂಬೈ, ಏಪ್ರಿಲ್ 01: ಸೋಲಿರಲಿ, ಗೆಲುವಿರಲಿ ಪಂದ್ಯದ ನಂತರ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ನೀಡುವ ಕಾರಣಗಳು ತಪ್ಪದೇ ಕೇಳಬೇಕು. ಇತರೆ ಎಲ್ಲಾ ನಾಯಕರಿಗೂ ಇದು ಪಾಠವಾಗಬೇಕಿದೆ. ಮೈದಾನದ ಒಳಗೂ ಹೊರಗೂ ಧೋನಿ ಮಾಡುವ ತಂತ್ರಗಾರಿಕೆ ಬಗ್ಗೆ ಭಾರಿ ಚರ್ಚೆ ನಡೆಯುತ್ತದೆ.
ಮುಂಬೈನ ವಾಂಖೇಡೆ ಮೈದಾನದಲ್ಲಿ ಮಾರ್ಚ್ 31 ರಂದು ವಿಂಡೀಸ್ ವಿರುದ್ಧ ಪರಾಭವಗೊಂಡ ಬಳಿಕ ಸುದ್ದಿಗೋಷ್ಠಿ ನಡೆಸುತ್ತಿದ್ದ ಧೋನಿಗೆ ಪತ್ರಕರ್ತರೊಬ್ಬರು ಈ ಸೋಲಿನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳುತ್ತೀರಾ? ಎಂದು ಪ್ರಶ್ನೆ ಮಾಡಿದ್ದಕ್ಕೆ ನೀಡಿದ ಉತ್ತರ ಎಲ್ಲರಿಗೂ ತಿಳಿದಿರಬಹುದು.[ಶರ್ಟ್ ಕಳಚಿ ಡ್ಯಾನ್ಸ್ ಮಾಡಿದ ಗೇಲ್, ಬ್ರಾವೋ]

ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾವನ್ನು 7 ವಿಕೆಟ್ ಗಳಿಂದ ಸೋಲಿಸಿದ ವೆಸ್ಟ್ ಇಂಡೀಸ್ ಬಹುಕಾಲದ ನಂತರ ಐಸಿಸಿ ಟೂರ್ನಿಯ ಫೈನಲ್ ತಲುಪಿದೆ. ಈ ನಡುವೆ ಪಂದ್ಯದ ನಂತರ ಧೋನಿ ನೀಡಿದ ಐದು ಪ್ರಮುಖ ಕಾರಣಗಳು ಇಲ್ಲಿವೆ.[ಬಾಂಗ್ಲಾ ಕ್ರಿಕೆಟಿಗ ಭಾರತದ ಸೋಲಿನ ಬಗ್ಗೆ ಹೇಳಿದ್ದೇನು?]
ಧೋನಿ ನೀಡಿದ ಐದು ಪ್ರಮುಖ ಕಾರಣಗಳು ಇಲ್ಲಿವೆ:
* ಟಾಸ್ ಸೋತಿದ್ದು ಪ್ರಮುಖ ಕಾರಣ. ಟಾಸ್ ಸೋತು ಮೊದಲು ಬ್ಯಾಟಿಂಗ್ ಆಡಬೇಕಾಯಿತು.
* ಪಂದ್ಯ ಅರ್ಧಗಂಟೆ ಮುಂಚಿತವಾಗಿ ಆರಂಭಗೊಂಡಿತು(7 PM IST), ಎಲ್ಲಾ ಲೀಗ್ ಪಂದ್ಯಗಳು 7.30 PM ಗೆ ಶುರುವಾಗುತ್ತಿತ್ತು.
* ಮೈದಾನದ ಆರ್ದ್ರತೆ, ತೇವಾಂಶದಿಂದ ಸ್ಪಿನ್ನರ್ ಗಳಿಗೆ ಬಾಲ್ ಸರಿಯಾಗಿ ಹಿಡಿಯಲು ಆಗುತ್ತಿರಲಿಲ್ಲ.
* 2 ನೋಬಾಲ್ ಎಸೆತ (ಸಿಮನ್ಸ್ ಗೆ ಎರಡು ಬಾರಿ 18 ಹಾಗೂ 50 ರನ್ ಆಗಿದ್ದಾಗ) ಜೀವದಾನ) ರವಿಚಂದ್ರನ್ ಅಶ್ವಿನ್ ಹಾಗೂ ಹಾರ್ದಿಕ್ ಪಾಂಡ್ಯ ನೋ ಬಾಲ್ ಮಾಡಿದರು.[ಅಭಿಮಾನಿಗೆ 'ನಾಯಿ' ಎಂದ ಹರ್ಭಜನ್ ಸಿಂಗ್]
* ಇನ್ನೂ 30 ರನ್ ಹೆಚ್ಚಿಗೆ ಬಾರಿಸಿದ್ದರೆ ಸರಿ ಹೋಗುತ್ತಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications