Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ-20: ಸೆಮಿಫೈನಲ್ ತಲುಪಿದ ತಂಡಗಳ ವಿನ್ನಿಂಗ್ ಸರಾಸರಿ

ನವದೆಹಲಿ, ಮಾರ್ಚ್. 29: ವಿಶ್ವ ಕಪ್ ಟಿ-20 ಉಪಾಂತ್ಯಕ್ಕೆ ವೇದಿಕೆ ಸಜ್ಜಾಗಿದೆ. ಅಜೇಯವಾಗಿರುವ ನ್ಯೂಜಿಲೆಂಡ್, ವೆಸ್ಟ್‌ ಇಂಡೀಸ್, ಭಾರತ ಮತ್ತು ಇಂಗ್ಲೆಂಡ್ ತಂಡಗಳಲ್ಲಿ ಒಂದು ಚಾಂಪಿಯನ್ ಆಗುವುದು ನಿಶ್ಚಿತ. ಹಾಗಾದರೆ ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಯಾವ ತಂಡ ಹೆಚ್ಚಿನ ವಿನ್ನಿಂಗ್ ಅವಕಾಶಗಳನ್ನು ಹೊಂದಿದೆ ಎಂಬುದನ್ನು ನೋಡಬೇಕಾಗುತ್ತದೆ.

ಮೊದಲ ಸೆಮಿಫೈನಲ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದ್ದು ನ್ಯೂಜಿಲೆಂಡ್ ಫೆವರೆಟ್. ಇತ್ತ ವಿಶ್ವಕಪ್ ಸಮರದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮೂರು ಸಾರಿ ಮುಖಾಮುಖಿಯಾಗಿದ್ದು ವಿಂಡೀಸರು ಎರಡು ಪಂದ್ಯ ಗೆದ್ದ ಸಾಧನೆ ಮಾಡಿದ್ದಾರೆ.[ಭಾರತ-ವಿಂಡೀಸ್ ಕದನ ಆರಂಭಕ್ಕೂ ಮುನ್ನ ಓದಿರಿ!]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

cricket

ಆದರೆ ತಜ್ಞರು ಅಭಿಪ್ರಾಯ ಪಡುವಂತೆ ನ್ಯೂಜಿಲೆಂಡ್ ಮತ್ತು ಭಾರತ ಫೈನಲ್ ತಲುಪಲಿವೆ. ಟಿ20 ಯ ದಾಖಲೆಗಳ ಲೆಕ್ಕದಲ್ಲಿ ಕಿವೀಸ್ ಎಲ್ಲರಿಗಿಂತ ಮುಂದಿದೆ. ಟೀಂ ಇಂಡಿಯಾ ಅವರಿಗಿಂತ ಕೊಂಚ ಹಿಂದಿದೆ.

ಆಡಿರುವ 17 ಪಂದ್ಯಗಳಲ್ಲಿ ಕಿವೀಸ್ 12ನ್ನು ಜಯಿಸಿದೆ. ಅವರ ಗೆಲುವಿನ ಸರಾಸರಿ ಶೇ. 70.59. ಧೋನಿ ಪಡೆ 20 ಪಂದ್ಯಗಳಲ್ಲಿ 14 ನ್ನು ಜಯಿಸಿದೆ. 70 ವಿನ್ನಿಂಗ್ ಸರಾಸರಿ ಇದೆ.[ಮಾತು ಉಳಿಸಿಕೊಂಡ ಬಿಗ್ ಬಿ, ಆಫರ್ ರಿಜೆಕ್ಟ್ ಮಾಡಿದ ಗೇಲ್!]

ಇಂಗ್ಲೆಂಡ್ ಶೇ. 69.23 ಮತ್ತು ವೆಸ್ಟ್ ಇಂಡೀಸ್ ಶೇ. 58.33 ಸಂಪಾದನೆ ಮಾಡಿಕೊಂಡಿವೆ. ಲೆಕ್ಕಾಚಾರಗಳು ಏನೇ ಇದ್ದರೂ ಸೆಮಿಫೈನಲ್ ಎಲ್ಲರಿಗೂ ನಿರ್ಣಾಯಕವಾಗಿರುತ್ತದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಇರುವುದಿಲ್ಲ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+