ಭಪ್ಪರೆ ಯುವಿ, ಭಲೇ ರೋಹಿತ್, ಸ್ಪಿನ್ ಕರಾಮತ್ತು
ಕೋಲ್ಕತಾ, ಮಾರ್ಚ್, 11: ಅದ್ಭುತ ಫಾರ್ಮ್ ನಲ್ಲಿರುವ ರೋಹಿತ್ ಶರ್ಮಾ ಮತ್ತೆ ಅಬ್ಬರಿಸಿದ್ದಾರೆ. ಈಡನ್ ಗಾರ್ಡನ್ಸ್ ಮೈದಾನದಲ್ಲೇ ರೋಹಿತ್ ಶರ್ಮ (98 ರನ್, 57 ಎಸೆತ, 9 ಬೌಂಡರಿ, 7 ಸಿಕ್ಸರ್) ಆಟದ ನೆರವಿನಿಂದ ಭಾರತ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ 45 ರನ್ ಗೆಲುವು ಸಾಧಿಸಿ ಬೀಗಿದೆ.
ಟಾಸ್ ಇಲ್ಲದೆ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಗೆ ಇಳಿಯಿತು. ಕೇವಲ 2 ರನ್‌ನಿಂದ ಶತಕ ವಂಚಿತರಾದ ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಕೊನೆಯವರೆಗೂ ಅಜೇಯರಾಗಿ ಉಳಿದರು.[ಪಾಕಿಸ್ತಾನ ಕೋಲ್ಕತಾಗೆ ಬಂದ್ರೆ ಈಡನ್‌ಗೆ 'ಗುದ್ದಲಿ' ಪೂಜೆ!]
ರೋಹಿತ್ ಆಟದ ನೆರವಿನಿಂದ ಭಾರತ 6 ವಿಕೆಟ್‌ಗೆ 185 ರನ್ ಪೇರಿಸಿತು. ಚೇಸಿಂಗ್ ಗೆ ಇಳಿದ ಪ್ರತಿಯಾಗಿ ವೆಸ್ಟ್ ಇಂಡೀಸ್ ತಂಡ 19.2 ಓವರ್‌ಗಳಲ್ಲಿ 140 ರನ್‌ಗೆ ಆಲೌಟ್ ಆಯಿತು.
ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಯುವಿ ಜುಗಲ್ ಬಂದಿ
9ನೇ ಓವರ್‌ನಲ್ಲಿ 56 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ವೇಳೆ ರೋಹಿತ್‌ಗೆ ಜತೆಯಾದ ಯುವರಾಜ್ ಸಿಂಗ್ (31 ರನ್, 20 ಎಸೆತ, 3 ಬೌಂಡರಿ, 1 ಸಿಕ್ಸರ್) ಜೋಡಿ 7.4 ಓವರ್‌ಗಳಲ್ಲಿ 89 ರನ್ ಸಿಡಿಸಿತು.

ಧವನ್-ರಹಾನೆ
ಆರಂಭಿಕರಾಗಿ ರೋಹಿತ್ ಹಾಗೂ ಶಿಖರ್ ಧವನ್ (31) ಕಣಕ್ಕಿಳಿದರು. ವಿರಾಟ್ ಕೊಹ್ಲಿ ಬದಲು ಕ್ರೀಸ್‌ಗಿಳಿದ ಅಜಿಂಕ್ಯ ರಹಾನೆ ಕೇವಲ 7 ರನ್ ಗಳಿಸಿ ನಿರ್ಗಮಿಸಿದರು.

ಗೇಲ್ ವಿಫಲ
ಟಿ-20ಯ ಕ್ರಿಕೆಟ್ ಗಾಡ್ ಕ್ರಿಸ್ ಗೇಲ್ 11 ಎಸೆತ ಗಳಲ್ಲಿ 20 ರನ್ ಗಳಿಸಲಷ್ಟೆ ಶಕ್ಯರಾದರು. ಭಾರತ ಪರ ಶಮಿ, ನೇಗಿ, ರವೀಂದ್ರ ಜಡೇಜಾ ಹಾಗೂ ಹರ್ಭಜನ್ ಸಿಂಗ್ ತಲಾ 2 ವಿಕೆಟ್ ಉರುಳಿಸಿದರು.

ಪಾಕ್ ವಿರುದ್ಧ ಪಂದ್ಯ
ಭಾರತ ಮತ್ತು ಪಾಕಿಸ್ತಾನದ ನಡುವಣ ಪಂದ್ಯ ಕೋಲ್ಕತಾದಲ್ಲಿಯೇ ಮಾರ್ಚ್ 19 ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications