For Quick Alerts
ALLOW NOTIFICATIONS  
For Daily Alerts
 

WTC 2021-23: ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಪ್ರಥಮ ಟೆಸ್ಟ್ ಗೆದ್ದ ನಂತರ ಅಂಕಪಟ್ಟಿ ಹೇಗಿದೆ?

World Test championship 2021-23 points table after England vs New Zealand 1st test

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆಬಿದ್ದ ನಂತರ ಸಾಕಷ್ಟು ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಆರಂಭವಾಗಿದ್ದು, ನ್ಯೂಜಿಲೆಂಡ್‌ ಕೂಡ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದು, 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದೆ.

ಇತ್ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಜೂನ್ 2ರಂದು ಆರಂಭವಾಗಿ ಜೂನ್ 5ರಂದು ಮುಕ್ತಾಯಗೊಂಡಿದೆ. ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಪಡೆದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಇಂಗ್ಲೆಂಡ್ 5 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸುವುದರ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಇಂಗ್ಲೆಂಡ್ ಪಡೆಯ ಬೌಲಿಂಗ್ ದಾಳಿಗೆ ತತ್ತರಿಸಿ ಮೊದಲನೇ ಇನ್ನಿಂಗ್ಸ್‌ನಲ್ಲಿ 132 ರನ್‌ಗಳಿಗೆ ಆಲ್ ಔಟ್ ಆಯಿತು. ಇದಕ್ಕೆ ಪ್ರತಿಯಾಗಿ ಉತ್ತಮ ಬೌಲಿಂಗ್ ದಾಳಿ ನಡೆಸಿದ ನ್ಯೂಜಿಲೆಂಡ್ ಇಂಗ್ಲೆಂಡ್ ತಂಡವನ್ನು ಮೊದಲನೇ ಇನ್ನಿಂಗ್ಸ್‌ನಲ್ಲಿ 141 ರನ್‌ಗಳಿಗೆ ಕಟ್ಟಿ ಹಾಕಿತು ಹಾಗೂ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 285 ರನ್‌ ಕಲೆಹಾಕಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ತಂಡಕ್ಕೆ 277 ರನ್‌ಗಳ ಗುರಿಯನ್ನು ನೀಡಿತ್ತು. ಇತ್ತ ಈ ಗುರಿಯನ್ನು ಜೋ ರೂಟ್ ಅವರ ಅಮೋಘ ಶತಕದ ನೆರವಿನಿಂದ ಯಶಸ್ವಿಯಾಗಿ ಮುಟ್ಟಿದ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 279 ರನ್ ಬಾರಿಸಿತು. ಪಂದ್ಯದಲ್ಲಿ ತಂಡಕ್ಕೆ ಆಸರೆಯಾದ ಮಾಜಿ ನಾಯಕ ಜೋ ರೂಟ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಈ ಪಂದ್ಯ ಮುಕ್ತಾಯಗೊಂಡ ನಂತರ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿ ಹೇಗಿದೆ ಎಂಬುದರ ಕುರಿತಾದ ವಿವರ ಮುಂದೆ ಇದೆ ಓದಿ.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ 2021-23ರ ಅಂಕಪಟ್ಟಿ

ಪ್ರಥಮ ಸ್ಥಾನ: ಆಸ್ಟ್ರೇಲಿಯಾ - ಗೆಲುವಿನ ಶೇಕಡಾಂಶ 75% - 75 ಅಂಕಗಳು

ದ್ವಿತೀಯ ಸ್ಥಾನ: ದಕ್ಷಿಣ ಆಫ್ರಿಕಾ - 71.43% - 60 ಅಂಕಗಳು

ತೃತೀಯ ಸ್ಥಾನ: ಭಾರತ - 58.33% - 77 ಅಂಕಗಳು

ನಾಲ್ಕನೇ ಸ್ಥಾನ: ಶ್ರೀಲಂಕಾ - 55.56% - 40 ಅಂಕಗಳು

ಐದನೇ ಸ್ಥಾನ: ಪಾಕಿಸ್ತಾನ - 52.38% - 44 ಅಂಕಗಳು

ಆರನೇ ಸ್ಥಾನ: ವೆಸ್ಟ್ ಇಂಡೀಸ್ - 35.71% - 30 ಅಂಕಗಳು

ಏಳನೇ ಸ್ಥಾನ: ನ್ಯೂಜಿಲೆಂಡ್‌ - 33.33% - 28 ಅಂಕಗಳು

ಎಂಟನೇ ಸ್ಥಾನ: ಇಂಗ್ಲೆಂಡ್ - 19.23% - 30 ಅಂಕಗಳು

ಒಂಭತ್ತನೇ ಸ್ಥಾನ: ಬಾಂಗ್ಲಾದೇಶ - 16.67% - 16 ಅಂಕಗಳು

( ತಂಡಗಳಿಗೆ ಅವುಗಳು ಪಡೆದುಕೊಂಡಿರುವ ಗೆಲುವಿನ ಶೇಕಡಾಂಶದ ಆಧಾರದ ಮೇಲೆ ಅಂಕಪಟ್ಟಿಯಲ್ಲಿ ಸ್ಥಾನಗಳನ್ನು ನೀಡಲಾಗಿದೆ )

Story first published: Tuesday, June 7, 2022, 10:06 [IST]
Other articles published on Jun 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+