ಪಾಕಿಸ್ತಾನಕ್ಕೆ ಎಂಟ್ರಿ ಕೊಟ್ಟ ಡು ಪ್ಲೆಸಿಸ್ ನೇತೃತ್ವದ ವಿಶ್ವ XI

Posted By:

ಲಾಹೋರ್, ಸೆ. 11: ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಮತ್ತೆ ಆರಂಭಗೊಳ್ಳುತ್ತಿದೆ. ಭದ್ರತಾ ದೃಷ್ಟಿಯಿಂದ ವಿಶ್ವದ ಅನೇಕ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಹೆದರುತ್ತಿರುವ ಸಂದರ್ಭದಲ್ಲಿ ವಿಶ್ವ XI ತಂಡದ ಜತೆ ಪಾಕಿಸ್ತಾನ ಟಿ20 ಸರಣಿಯಾಡಲು ಸಜ್ಜಾಗಿದೆ.

ಆಸೀಸ್ ವಿರುದ್ಧದ ಅಭ್ಯಾಸ ಪಂದ್ಯ, ಐಪಿಎಲ್ ಸ್ಟಾರ್ ಗಳಿಗೆ ಚಾನ್ಸ್

ವಿಶ್ವ ಎಲೆವೆನ್ ಗೆ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ನಾಯಕರಾಗಿದ್ದು, ತಮ್ಮ ತಂಡದ ಸದಸ್ಯರ ಜತೆಗೆ ಸೋಮವಾರ ಮುಂಜಾನೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

 Faf du Plessis-led World XI arrives in Pakistan amid unprecedented security

ಈ ನಡುವೆ ಪಾಕಿಸ್ತಾನ ತಂಡಕ್ಕೆ ಹಿನ್ನಡೆಯುಂಟಾಗಿದ್ದು, ಪ್ರಮುಖ ವೇಗಿ ಮೊಹಮ್ಮದ್ ಅಮೀರ್ ಅವರು ಟ್ವೆಂಟಿ20 ಸರಣಿಯಿಂದ ಹಿಂದೆ ಸರಿಯುವ ಸಾಧ್ಯತೆಯಿದೆ. ಮುಂದಿನ ವಾರದಂದು ಲಂಡನ್ನಿನಲ್ಲಿರುವ ಅಮೀರ್ ಅವರ ಪತ್ನಿ ಮಗುವಿಗೆ ಜನ್ಮ ನೀಡಲಿರುವುದರಿಂದ ಅಮೀರ್ ಅವರು ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ಜೂನ್ ನಲ್ಲಿ ಓವಲ್ ನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಅಮೀರ್, ಪಾಕಿಸ್ತಾನದ ಪ್ರಮುಖ ವೇಗಿಯಾಗಿದ್ದಾರೆ.

ಲಾಹೋರಿನ ಗಡಾಫಿ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 12, 13 ಹಾಗೂ 15ರಂದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲಿದ್ದು, ಈ ಪಂದ್ಯದ ಉಸ್ತುವಾರಿ ನೋಡಿಕೊಳ್ಳುವಂತೆ ರಿಚಿ ರಿಚರ್ಡ್ಸನ್ ಅವರನ್ನು ಮ್ಯಾಚ್ ರೆಫ್ರಿಯಾಗಿ ಐಸಿಸಿ ನೇಮಿಸಿದೆ.

 Faf du Plessis-led World XI arrives in Pakistan amid unprecedented security

ಈ ಸರಣಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸುಮಾರು 3 ಮಿಲಿಯನ್ ಯುಎಸ್ ಡಾಲರ್ ಖರ್ಚು ಮಾಡುತ್ತಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ನ ಒಟ್ಟು 14 ಆಟಗಾರರಿಗೆ ಸಂಭಾವನೆಗಾಗಿ 1,00,000 ಯುಎಸ್ ಡಾಲರ್ ವ್ಯಯಿಸುತ್ತಿದೆ.

ವಿಶ್ವ XI ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಹಶೀಂ ಆಮ್ಲಾ, ಕಾಲಿನ್ ಮಿಲ್ಲರ್, ಇಮ್ರಾನ್ ತಾಹೀರ್, ಮಾರ್ನೆ ಮಾರ್ಕೆಲ್(ಎಲ್ಲರೂ ದಕ್ಷಿಣ ಆಫ್ರಿಕಾದವರು), ಟಿಮ್ ಪೈನ್, ಬೆನ್ ಕಟ್ಟಿಂಗ್ (ಆಸ್ಟ್ರೇಲಿಯಾ), ತಮೀಮ್ ಇಕ್ಬಾಲ್ (ಬಾಂಗ್ಲಾದೇಶ), ಥಿಸ್ಸಾರಾ ಪೆರೆರಾ(ಶ್ರೀಲಂಕಾ), ಗ್ರಾಂಟ್ ಎಲಿಯಟ್ (ನ್ಯೂಜಿಲೆಂಡ್), ಪಾಲ್ ಕಾಲಿಂಗ್ ವುಡ್ (ಇಂಗ್ಲೆಂಡ್), ಡರೆನ್ ಸಾಮಿ ಹಾಗೂ ಸ್ಯಾಮುಯಲ್ ಬದ್ರಿ (ವೆಸ್ಟ್ ಇಂಡೀಸ್)

Story first published: Monday, September 11, 2017, 13:48 [IST]
Other articles published on Sep 11, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ