

ನವದೆಹಲಿ, ಏಪ್ರಿಲ್ 7: ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅದ್ಭುತ ಬೌಲಿಂಗ್‌ಗಾಗಿ ಎರಡು ಸಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಭಜ್ಜಿ ಈಗ ಟೀಮ್ ಇಂಡಿಯಾ ಪರ ಆಡುವ ಇಂಜಿತವನ್ನು ವ್ಯಕ್ತಪಡಿಸುತ್ತಿದ್ದಾರೆ.
ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ' (ಫಲಿತಾಂಶಗಳು, ಪಾಯಿಂಟ್ ಟೇಬಲ್, ಕುತೂಹಲಕಾರಿ ಅಂಶಗಳು ಇಲ್ಲಿವೆ!)
'ಒಂದು ವೇಳೆ ಅವಕಾಶ ಲಭಿಸುವುದಾದರೆ ನಾನು ಭಾರತ ತಂಡದ ಪರ ಆಡಲು ಬಯಸುತ್ತಿದ್ದೇನೆ. ಆಟಕ್ಕೂ ಮುನ್ನ ನಾನು ತಯಾರಿ ನಡೆಸುತ್ತೇನೆ. ಉತ್ತಮ ಪ್ರದರ್ಶನಕ್ಕಾಗಿ ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡುತ್ತೇನೆ. ಇದೇ ಈ ಐಪಿಎಲ್‌ನಲ್ಲಿ ಈ ಫಲಿತಾಂಶಕ್ಕೆ ಕಾರಣ' ಎಂದು ಹರ್ಭಜನ್ ಹೇಳಿಕೊಂಡಿದ್ದಾರೆ.
ಚೆನ್ನೈನಲ್ಲಿ ಶನಿವಾರ (ಏಪ್ರಿಲ್ 6) ನಡೆದಿದ್ದ ಐಪಿಎಲ್ 18ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧವೂ ಭಜ್ಜಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. 17 ರನ್ನಿಗೆ 2 ವಿಕೆಟ್‌ಗಳು ಹರ್ಭಜನ್‌ಗೆ ಬಲಿಯಾಗಿದ್ದವು. ಈ ಪಂದ್ಯದಲ್ಲಿ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದರು. ಐಪಿಎಲ್ ಉದ್ಘಾಟನಾ ಪಂದ್ಯದಲ್ಲೂ ಆರ್ಸಿಬಿ ವಿರುದ್ಧ ಹರ್ಭಜನ್ ಪಂದ್ಯಶ್ರೇಷ್ಠರೆನಿಸಿದ್ದರು.
ಹರ್ಭಜನ್ ಅವರನ್ನು ಕಳೆದ ಮೂರು ವರ್ಷಗಳಿಂದಲೂ ಟೀಮ್ ಇಂಡಿಯಾದಿಂದ ಹೊರಗಿಡಲಾಗಿದೆ. ಹೀಗಾಗಿಯೇ ಅವಕಾಶ ನೀಡಿದರೆ ತಾನು ಆಡುವುದಾಗಿ ಭಜ್ಜಿ ಹೇಳಿಕೊಂಡಿದ್ದಾರೆ. 'ಕ್ರಿಕೆಟ್‌ನಲ್ಲಿ ಅನುಭವ ತುಂಬಾ ಮುಖ್ಯವಾದುದು. ಅವಕಾಶ ನೀಡಿದರೆ ನಾನು ಸರಿಯಾದ ತರಬೇತಿಯಲ್ಲಿ ತೊಡಗಿಕೊಳ್ಳುತ್ತೇನೆ' ಎಂದು ಸಿಂಗ್ ತಿಳಿಸಿದ್ದಾರೆ.
2019ರ ಐಸಿಸಿ ವಿಶ್ವಕಪ್ ಕ್ರಿಕೆಟ್ ಮೇ 30ರಿಂದ ಆರಂಭಗೊಳ್ಳುವುದರಲ್ಲಿದೆ. ಹೀಗಾಗಿ ಈ ಸಾರಿ ಸ್ಥಾನ ಸಿಗುವ ಸಾಧ್ಯತೆಯಿಲ್ಲ ಎಂಬುದು ಹರ್ಭಜನ್‌ಗೂ ಅರಿವಿದೆ. ಆದರೆ ಮುಂದಿನ ವರ್ಷ ಟಿ20 ವಿಶ್ವಕಪ್ ವೇಳೆ ತಂಡ ಪ್ರತಿನಿಧಿಸುವ ಆಸೆಯನ್ನು ಭಜ್ಜಿ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಸಿಂಗ್‌ಗೀಗ 38ರ ಹರೆಯ.