Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಮೊದಲ WPL ಅವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್ ಎಂದ ಆಕಾಶ್ ಚೋಪ್ರ: ಕಾರಣ ಇಲ್ಲಿದೆ!

WPL 2023: Aakash Chopra Believes RCB Can Win IPL inaugural season

ವುಮೆನ್ಸ್ ಪ್ರೀಮಿಯರ್ ಲೀಗ್(WPL) ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು ಮಾರ್ಚ್ 4ರಿಂದ ಟೂರ್ನಿ ಭರ್ಜರಿ ಆರಂಭ ಪಡೆಯಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಮಾರ್ಚ್ 5ರಂದು ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡ ತನ್ನ ಅಭಿಯಾನ ಆರಂಭಿಸಲಿದೆ.

ಸ್ಮೃತಿ ಮಂಧಾನ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದು ಎಲೀಸ್ ಪೆರ್ರಿ, ರಿಚಾ ಘೋಷ್, ಸೋಫಿ ಡಿವೈನ್ ಮೊದಲಾದ ಸ್ಟಾರ್ ಆಟಗಾರ್ತಿಯರು ಇದ್ದಾರೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳಿಗೆ ತಂಡದ ಮೇಲೆ ಸಾಕಷ್ಟು ನಿರೀಕ್ಷೆಗಳು ಇದೆ. ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದು ಈ ಚೊಚ್ಚಲ ಆವೃತ್ತಿಯ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವೇ ಚಾಂಪಿಯನ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಆಕಾಶ್ ಚೋಪ್ರ ಕಾರಣ ಕೂಡ ನೀಡಿದ್ದಾರೆ.

ಅದ್ಭುತ ತಂಡವನ್ನು ಕಟ್ಟಿದೆ ಆರ್‌ಸಿಬಿ ಎಂದ ಚೋಪ್ರ

ಅದ್ಭುತ ತಂಡವನ್ನು ಕಟ್ಟಿದೆ ಆರ್‌ಸಿಬಿ ಎಂದ ಚೋಪ್ರ

ಮೊದಲ ಆವೃತ್ತಿಯ WPL ಟೂರ್ನಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ಬಲಿಷ್ಠ ತಂಡವನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ ಆಕಾಶ್ ಚೋಪ್ರ. "ಆರ್‌ಸಿಬಿ ತಂಡದ ವಿಶೇಷತೆಯೇನೆಂದರೆ ಆ ತಂಡದಲ್ಲಿ ಸಾಕಷ್ಟು ನಾಯಕಿಯರಿದ್ದಾರೆ. ಅವರು ಸ್ಮೃತಿ ಮಂಧಾನಗಾಗಿ ಚಿತ್ತ ನೆಟ್ಟಿದ್ದರು. ಆದರೆ ಅವರಿಗೆ ಎಲೀಸ್ ಪೆರ್ರಿ, ಹೀದರ್ ನೈಟ್, ಸೋಫಿ ಡಿವೈವ್ ಮೊದಲಾದ ಆಟಗಾರ್ತಿಯರು ಸೇರಿಕೊಂಡಿದ್ದಾರೆ. ಈಗ ಅವರದ್ದು ಬಲಿಷ್ಠ ತಂಡವಾಗಿದೆ." ಎಂದಿದ್ದಾರೆ ಆಕಾಶ್ ಚೋಪ್ರ.

ಬಲಿಷ್ಠವಾಗಿದೆ ಆರ್‌ಸಿಬಿ ಎಂದ ಚೋಪ್ರ

ಬಲಿಷ್ಠವಾಗಿದೆ ಆರ್‌ಸಿಬಿ ಎಂದ ಚೋಪ್ರ

"ಇನ್ನು ಭಾರತೀಯ ಆಟಗಾರ್ತಿಯರ ಲೈನ್ ಗಮನಿಸಿದರೆ ಕೂಡ ತಂಡ ಬಲಿಷ್ಠವಾಗಿಯೇ ಕಾಣುತ್ತಿದೆ. ಸ್ಮೃತಿ ಮಂಧಾನ ಜೊತೆಗೆ ರಿಚಾ ಘೋಷ್ ಮತ್ತು ರೇಣುಕಾ ಸಿಂಗ್ ಕೂಡ ಇದ್ದಾರೆ. ಅಗ್ರ 7 ಆಟಗಾರ್ತಿಯರನ್ನು ನೋಡಿದರೆ ಬಹಳ ಬಲಿಷ್ಠ ತಂಡವಾಗಿದೆ" ಎಂದು ಆರ್‌ಸಿಬಿ ಮಹಿಳಾ ತಂಡದ ಬಗ್ಗೆ ಆಕಾಶ್ ಚೋಪ್ರ ವಿಶೇಷ ಮಾತುಗಳನ್ನಾಡಿದ್ದಾರೆ.

ಜಿಯೋ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಆಕಾಶ್ ಚೋಪ್ರ ಆರ್‌ಸಿಬಿ ಪುರುಷರ ತಂಡದ ನಾಯಕಿ ಸ್ಮೃತಿ ಮಂಧಾನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು ವಿರಾಟ್ ಕೊಹ್ಲಿ ಜೊತೆಗೆ ಹೋಲಿಕೆ ಮಾಡಿದ್ದಾರೆ. "ಸ್ಮೃತಿ ಮಂಧಾನ ಆರ್‌ಸಿಬಿ ತಂಡದ ನಾಯಕಿಯಾಗಿ ಈಗಾಗಲೇ ನೇಮಕಗೊಂದಿದ್ದು ವಿರಾಟ್ ಕೊಹ್ಲಿಯಂತೆಯೇ 18ನೇ ಸಂಖ್ಯೆಯ ಜರ್ಸಿಯೊಂದಿಗೆ ಆಡಲಿದ್ದಾರೆ" ಎಂದಿದ್ದಾರೆ ಆಕಾಶ್ ಚೋಪ್ರ.

ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತ: ಬುಮ್ರಾ ಐಪಿಎಲ್‌ನಲ್ಲಿ ಆಡೋದೆ ಅನುಮಾನ, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಅಲಭ್ಯ?

ಟ್ರೋಫಿ ಗೆಲ್ಲುವ ಅವಕಾಶ ಹೆಚ್ಚಿದೆ ಎಂದ ಆಕಾಶ್ ಚೋಪ್ರ

ಟ್ರೋಫಿ ಗೆಲ್ಲುವ ಅವಕಾಶ ಹೆಚ್ಚಿದೆ ಎಂದ ಆಕಾಶ್ ಚೋಪ್ರ

ಐಪಿಎಲ್‌ನಲ್ಲಿ ಪುರುಷರ ಆರ್‌ಸಿಬಿ ತಂಡಕ್ಕಿಂತಲೂ ಟ್ರೋಫಿ ಗೆಲ್ಲುವ ಅವಕಾಶ ಮಹಿಳಾ ತಂಡಕ್ಕೆ ಹೆಚ್ಚಿದೆ ಎಂದು ಆಕಾಶ್ ಚೋಪ್ರ ಅಭಿಪ್ರಾಯ ಪಟ್ಟಿದ್ದಾರೆ. ಅದೇ ಕಾರಣದಿಂದಾಗಿ WPL ಮೊದಲ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಟ್ರೋಫಿ ಗೆಲ್ಲುವ ಅವಕಾಶ ಹೆಚ್ಚಿದೆ ಎಂದಿದ್ದಾರೆ ಆಕಾಶ್ ಚೋಪ್ರ. "ಆರ್‌ಸಿಬಿ ಯಾವಾಗಲೂ ಕುತೂಹಲಕಾರಿಯಾದ ಫ್ರಾಂಚೈಸಿಯಾಗಿದೆ. ಅಲ್ಲಿ ಯಾವಾಗಲೂ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಕ್ರಿಸ್ ಗೇಲ್ ಅವರಂತಾ ಆಟಗಾರರು ಇದ್ದರು. ಈಗ ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಇದ್ದಾರೆ. ಇವರೆಲ್ಲಾ ಶ್ರೇಷ್ಠ ಆಟಗಾರರು" ಎಂದಿದ್ದಾರೆ ಆಕಾಶ್ ಚೋಪ್ರ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಸ್ಮೃತಿ ಮಂದಾನ (ನಾಯಕಿ), ದಿಶಾ ಕಸತ್, ರಿಚಾ ಘೋಷ್ (ವಿಕೆಟ್ ಕೀಪರ್‌), ಇಂದ್ರಾಣಿ ರಾಯ್, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಎರಿನ್ ಬರ್ನ್ಸ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀಥರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪೂನಂ ಖೇಮ್ನಾರ್, ರೇಣುಕಾ ಸಿಂಗ್, ಪ್ರೀತಿ ಬೋಸ್, ಕೋಮಲ್ ಜಂಜಾದ್

Story first published: Monday, February 27, 2023, 18:50 [IST]
Other articles published on Feb 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+