Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಯುಪಿ ವಾರಿಯರ್ಸ್ ತಂಡಕ್ಕೆ ಅಲಿಸ್ಸಾ ಹೀಲಿ ನಾಯಕಿ : ದೀಪ್ತಿ ಶರ್ಮಾಗೆ ಸಿಗಲಿಲ್ಲ ಮುಂದಾಳತ್ವ

WPL 2023: Alyssa Healy Named As Captain For The Up Warriorz In The Womens Premier League 2023

ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ತಂಡದ ನಾಯಕತ್ವವನ್ನು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಅಲಿಸ್ಸಾ ಹೀಲಿಗೆ ನೀಡಲಾಗಿದೆ. ಯುಪಿ ವಾರಿಯರ್ಸ್ ಪ್ರಾಂಚೈಸಿ ಈ ನಿರ್ಧಾರದ ಮೂಲಕ ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಭಾರತದ ಆಟಗಾರ್ತಿ ದೀಪ್ತಿ ಶರ್ಮಾರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ, ಎಲ್ಲರ ನಿರೀಕ್ಷೆಯನ್ನು ಸುಳ್ಳಾಗಿಸಿರುವ ಫ್ರಾಂಚೈಸಿ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದೆ. ಲಕ್ನೋ ಫ್ರಾಂಚೈಸಿ ಮಾಲೀಕರಾದ ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಬುಧವಾರ ನಿರ್ಧಾರವನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾ ತಂಡದ ನಾಯಕಿಯಾಗಿದ್ದ ಅಲಿಸ್ಸಾ ಹೀಲಿಯವರ ಅನುಭವವನ್ನು ಪರಿಗಣಿಸಿ ಅವರನ್ನು ತಂಡಕ್ಕೆ ನಾಯಕಿಯನ್ನಾಗಿ ನೇಮಿಸಲು ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ.

ನಾಯಕಿಯಾಗಿ ನೇಮಕವಾದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, "ಮುಂಬೈನಲ್ಲಿ ನಡೆಯಲಿರುವ ಐತಿಹಾಸಿಕ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ತಂಡದ ನಾಯಕತ್ವವನ್ನು ಪಡೆಯಲು ನನಗೆ ಸಂತೋಷವಾಗುತ್ತಿದೆ. ಮಹಿಳಾ ಪ್ರೀಮಿಯರ್ ಲೀಗ್ ನಾವೆಲ್ಲರೂ ಕುತೂಹಲದಿಂದ ಕಾಯುತ್ತಿರುವ ಪಂದ್ಯಾವಳಿಯಾಗಿದೆ. ಯುಪಿ ವಾರಿಯರ್ಸ್ ಅದ್ಭುತ ತಂಡವನ್ನು ಹೊಂದಿದ್ದು, ಉತ್ತಮ ಫಲಿತಾಂಶ ನೀಡಲು ಕಾಯುತ್ತಿದ್ದೇವೆ. ಅನುಭವಿಗಳು ಮತ್ತು ಯುವ ಪಡೆ ತಂಡದಲ್ಲಿದ್ದು, ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೇವೆ. ಉತ್ತಮ ಬ್ರಾಂಡ್‌ಕ್ರಿಕೆಟ್‌ನಲ್ಲಿ ಗೆಲವು ಸಾಧಿಸುವುದು ನಮ್ಮ ಗುರಿಯಾಗಿದೆ" ಎಂದು ಹೇಳಿದ್ದಾರೆ.

WPL 2023: Alyssa Healy Named As Captain For The Up Warriorz In The Womens Premier League 2023

ಆಸ್ಟ್ರೇಲಿಯಾ ತಂಡದ ಯಶಸ್ವೀ ನಾಯಕಿ

ಶ್ರೀಲಂಕಾ ವಿರುದ್ಧ 148 ರನ್ ಗಳಿಸಿರುವ ಅಲಿಸ್ಸಾ ಹೀಲಿ ಟಿ20 ಮಾದರಿಯಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆ ಹೊಂದಿದ್ದಾರೆ. ಅವರು ಐದು ಬಾರಿ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯೆಯಾಗಿದ್ದಾರೆ. ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿಯೂ ಹೀಲಿ ಉದ್ದರು. 2018ರಲ್ಲಿ ಅವರು ಐಸಿಸಿ ಟಿ20 ವರ್ಷದ ಆಟಗಾರ್ತಿ ಪ್ರಶಸ್ತಿಯನ್ನು ಪಡೆದಿದ್ದರು.

"ಅಲಿಸ್ಸಾ ಉನ್ನತ ಮಟ್ಟದಲ್ಲಿ ಅಪಾರ ಪ್ರಮಾಣದ ಅನುಭವವನ್ನು ಹೊಂದಿದ್ದಾರೆ. ನಮ್ಮ ತಂಡದಲ್ಲಿ ನಾವು ಬಯಸುವ ಗೆಲ್ಲುವ ಅಭ್ಯಾಸವೂ ಅವರಲ್ಲಿದೆ. ಅಲಿಸ್ಸಾ ಹೀಲಿ ನಾಯಕತ್ವದಲ್ಲಿ ಯುಪಿ ವಾರಿಯರ್ಜ್ ಈ ಪ್ರಮುಖ ಪ್ರಯಾಣದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಬಹುದು ಎಂದು ನಾವು ಭಾವಿಸುತ್ತೇವೆ. ಮತ್ತು ಯುಪಿ ವಾರಿಯರ್ಜ್ ಯುಪಿಯ ಮಹಿಳೆಯರಿಗೆ ಸಂತೋಷ ಮತ್ತು ಸ್ಫೂರ್ತಿಯ ಮೂಲವಾಗಿದೆ. ತಂಡಕ್ಕೆ ಶುಭ ಹಾರೈಸುತ್ತೇನೆ ಎಂದು ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಶರ್ಮಾ ಹೇಳಿದ್ದಾರೆ.

ಮಾರ್ಚ್‌ 4ರಿಂದ ಮಹಿಳಾ ಪ್ರೀಮಿಯರ್ ಲೀಗ್‌ ಮೊದಲ ಆವೃತ್ತಿಗೆ ಚಾಲನೆ ಸಿಗಲಿದ್ದು, ಮಾರ್ಚ್ 5ರಂದು ಯುಪಿ ವಾರಿಯರ್ಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ ಟೂರ್ನಿಯ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ.

Story first published: Wednesday, February 22, 2023, 22:50 [IST]
Other articles published on Feb 22, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+