For Quick Alerts
ALLOW NOTIFICATIONS  
For Daily Alerts
 

Expensive Players in WPL 2023 : ಅತ್ಯಧಿಕ ಬೆಲೆಗೆ ಖರೀದಿಯಾದ 10 ದುಬಾರಿ ಆಟಗಾರ್ತಿಯರ ಪಟ್ಟಿ

WPL 2023 Auction: Here Is The Most Expensive Players List

2023ರ ಮಹಿಳಾ ಪ್ರೀಮಿಯರ್ ಲೀಗ್‌ (WPL) ಚೊಚ್ಚಲ ಪಂದ್ಯಾವಳಿಗಾಗಿ ಸೋಮವಾರ, ಫೆಬ್ರವರಿ 13ರಂದು ಮುಂಬೈನಲ್ಲಿ ಮಹಿಳಾ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆದಿದ್ದು, ಇದು ಭಾರತೀಯ ಮಹಿಳಾ ಕ್ರಿಕೆಟ್‌ಗೆ ನೆನಪಿನಲ್ಲಿಡಬಹುದಾದ ಐತಿಹಾಸಿಕ ದಿನವಾಗಿದೆ.

ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯು ಮಾರ್ಚ್ 4ರಿಂದ ಮಾರ್ಚ್ 26ರವರೆಗೆ ನಡೆಯಲಿದೆ. ಈ ಮಹಿಳಾ ಟಿ20 ಕ್ರಿಕೆಟ್ ಲೀಗ್‌ ಅನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ವಹಿಸಲಿದೆ.

ಮಹಿಳಾ ಪ್ರೀಮಿಯರ್ ಲೀಗ್ 2023ರ ಹರಾಜು ಪ್ರಕ್ರಿಯೆಯಲ್ಲಿ ಐದು ತಂಡಗಳ ಫ್ರಾಂಚೈಸಿಗಳು ಭಾಗವಹಿಸಿದ್ದರು ಮತ್ತು ಒಟ್ಟು 449 ಆಟಗಾರ್ತಿಯರು ಹರಾಜು ಪಟ್ಟಿಯ ಶಾರ್ಟ್‌ಲಿಸ್ಟ್‌ನಲ್ಲಿ ಸೇರಿದ್ದರು.

WPL 2023 Auction: Here Is The Most Expensive Players List

ಮೊದಲ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ತಂಡಗಳು ಚೊಚ್ಚಲ ಪ್ರಶಸ್ತಿಗಾಗಿ ಸೆಣಸಾಡಲಿವೆ.

ಸೋಮವಾರದ ಹರಾಜಿನಲ್ಲಿ ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರನ್ನು ದಾಖಲೆಯ 3.4 ಕೋಟಿ ರೂಪಾಯಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಖರೀದಿಸಿತು. ಇನ್ನು ಆಸ್ಟ್ರೇಲಿಯಾದ ಆಶ್ಲೀಗ್ ಗಾರ್ಡ್ನರ್ 3.20 ಕೋಟಿ ರೂ.ಗೆ ಗುಜರಾತ್ ಜೈಂಟ್ಸ್ ತಂಡಕ್ಕೆ ಖರೀದಿಯಾದರೆ, ನತಾಲೀ ಸಿವರ್ ಕೂಡ 3.20 ರೂ.ಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾರಾಟವಾದರು.

WPL 2023 Auction: Here Is The Most Expensive Players List

WPL 2023; ಟಾಪ್ 10 ದುಬಾರಿ ಆಟಗಾರ್ತಿಯರ ಪಟ್ಟಿ

ಸ್ಮೃತಿ ಮಂಧಾನ - ರಾಯಲ್ ಚಾಲೆಂಜರ್ಸ್ ಬೆಂಗಳೂರು - 3.40 ಕೋಟಿ ರೂ.

ಆಶ್ಲೀಗ್ ಗಾರ್ಡ್ನರ್ - ಗುಜರಾತ್ ಜೈಂಟ್ಸ್ - 3.20 ಕೋಟಿ ರೂ.

ನತಾಲೀ ಸಿವರ್ - ಮುಂಬೈ ಇಂಡಿಯನ್ಸ್ - 3.20 ಕೋಟಿ ರೂ.

ದೀಪ್ತಿ ಶರ್ಮಾ - ಯುಪಿ ವಾರಿಯರ್ಸ್ - 2.6 ಕೋಟಿ ರೂ.

ಜೆಮಿಮಾ ರೋಡ್ರಿಗಸ್ - ಡೆಲ್ಲಿ ಕ್ಯಾಪಿಟಲ್ಸ್ - 2.2 ಕೋಟಿ ರೂ.

ಬೆತ್ ಮೂನಿ - ಗುಜರಾತ್ ಜೈಂಟ್ಸ್ - 2 ಕೋಟಿ ರೂ.

ಶಫಾಲಿ ವರ್ಮಾ - ಡೆಲ್ಲಿ ಕ್ಯಾಪಿಟಲ್ಸ್ - 2 ಕೋಟಿ ರೂ.

ಪೂಜಾ ವಸ್ತ್ರಾಕರ್ - ಮುಂಬೈ ಇಂಡಿಯನ್ಸ್- 1.90 ಕೋಟಿ ರೂ.

ರಿಚಾ ಘೋಷ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು - 1.90 ಕೋಟಿ ರೂ.

ಸೋಫಿ ಎಕ್ಲೆಸ್ಟೋನ್ - ಯುಪಿ ವಾರಿಯರ್ಸ್ - 1.80 ಕೋಟಿ ರೂ.

Story first published: Tuesday, February 14, 2023, 15:07 [IST]
Other articles published on Feb 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+