Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಗುಜರಾತ್ ಜೈಂಟ್ಸ್ ನಾಯಕಿಯಾಗಿ ಬೆತ್ ಮೂನಿ ನೇಮಕ; ಭಾರತೀಯ ಆಲ್‌ರೌಂಡರ್ ಉಪನಾಯಕಿ

WPL 2023: Beth Mooney Appointed As The Captain Of Gujarat Gaints

ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್(WPL) ಪಂದ್ಯಾವಳಿಗೆ ಮಾರ್ಚ್ 4ರಿಂದ ಅದ್ಧೂರಿಯಾಗಿ ಚಾಲನೆ ಸಿಗಲಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ. ಇದೀಗ ಗುಜರಾತ್ ಜೈಂಟ್ಸ್ ತಂಡ ನಾಯಕಿಯನ್ನು ನೇಮಕ ಮಾಡಿದೆ.

ಆಸ್ಟ್ರೇಲಿಯಾ ಮಹಿಳಾ ತಂಡದ ಬೆತ್ ಮೂನಿ ಅವರನ್ನು 2023ರ ಮಹಿಳಾ ಪ್ರೀಮಿಯರ್ ಲೀಗ್‌ನ ಗುಜರಾತ್ ಜೈಂಟ್ಸ್ ತಂಡದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಜನವರಿ 23ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಬೆತ್ ಮೂನಿ ಅವರನ್ನು 2 ಕೋಟಿ ರೂಪಾಯಿಗೆ ಖರೀದಿಸಲಾಗಿತ್ತು.

ಗುಜರಾತ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ತನ್ನ ಮಾಜಿ ಸಹ ಆಟಗಾರ್ತಿ ರಾಚೆಲ್ ಹೇನ್ಸ್ ಅವರೊಂದಿಗೆ ವಿಕೆಟ್ ಕೀಪರ್- ಬ್ಯಾಟರ್ ಬೆತ್ ಮೂನಿ ಮತ್ತೆ ಒಂದಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಇನ್ನು ಭಾರತ ಮಹಿಳಾ ತಂಡದ ಆಫ್ ಸ್ಪಿನ್ನರ್ ಮತ್ತು ಆಲ್‌ರೌಂಡರ್ ಸ್ನೇಹ್ ರಾಣಾ ಅವರನ್ನು ಉಪನಾಯಕಿ ನೇಮಕ ಮಾಡಲಾಗಿದೆ. ಸ್ನೇಹ್ ರಾಣಾ ಅವರನ್ನು 75 ಲಕ್ಷ ರೂಪಾಯಿಗಳಿಗೆ ಗುಜರಾತ್ ಜೈಂಟ್ಸ್ ಖರೀದಿಸಿದೆ.

ಬೆತ್ ಮೂನಿ 2023ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. ಫೆಬ್ರವರಿ 26ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಎಡಗೈ ಬ್ಯಾಟರ್ ಅಜೇಯ 74 ರನ್ ಗಳಿಸಿ ಆಸ್ಟ್ರೇಲಿಯಾ ತಂಡ ಒಟ್ಟಾರೆ ಆರನೇ ಮಹಿಳಾ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಲು ನೆರವಾಗಿದ್ದರು.

WPL 2023: Beth Mooney Appointed As The Captain Of Gujarat Gaints

"2023ರ ಐತಿಹಾಸಿಕ ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಗೌತಮ್ ಅದಾನಿ ಮಾಲೀಕತ್ವದ ಗುಜರಾತ್ ಜೈಂಟ್ಸ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ನೀಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ," ಎಂದು ಬೆತ್ ಮೂನಿ ತಿಳಿಸಿದ್ದಾರೆ.

"ಗುಜರಾತ್ ಜೈಂಟ್ಸ್ ತಂಡವು ಲೀಗ್‌ನಲ್ಲಿ ಆಡಲು ಉತ್ಸುಕವಾಗಿದೆ ಮತ್ತು ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಋತುವಿನಲ್ಲಿ ಕ್ರಿಕೆಟ್‌ನ ಮನರಂಜನೆ ಮತ್ತು ಪರಿಣಾಮಕಾರಿ ಬ್ರ್ಯಾಂಡ್ ಅನ್ನು ಹೊರಹಾಕಲು ಸಜ್ಜಾಗಿದೆ. ಸ್ನೇಹ್ ರಾಣಾ ನನ್ನ ಉಪನಾಯಕಿ ಆಗಿರುವುದು ಮತ್ತು ಮೆಂಟರ್ ಮಿಥಾಲಿ ರಾಜ್, ಮುಖ್ಯ ಕೋಚ್ ರಾಚೆಲ್ ಹೇನ್ಸ್ ತಂಡದ ಭಾಗವಾಗಿರುವುದು ಅದ್ಭುತವಾಗಿದೆ," ಎಂದು ಬೆತ್ ಮೂನಿ ಹೇಳಿದ್ದಾರೆ.

ಗಮನಾರ್ಹ ಅಂಶವೆಂದರೆ, 29 ವರ್ಷದ ಬೆತ್ ಮೂನಿ ಅವರು 2018 ಮತ್ತು 2020ರಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ಟಿ20 ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿದ್ದರು. 2022ರ ಏಕದಿನ ವಿಶ್ವಕಪ್ ಮತ್ತು ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಅಲ್ಲದೆ, ಮಹಿಳಾ ಬಿಗ್ ಬ್ಯಾಷ್ ಲೀಗ್ ಅನ್ನು ಎರಡು ಬಾರಿ ಬ್ರಿಸ್ಬೇನ್ ಹೀಟ್ ಮತ್ತು ಒಮ್ಮೆ ಪರ್ತ್ ಸ್ಕಾರ್ಚರ್ಸ್ ಭಾಗವಾಗಿ ಮೂರು ಬಾರಿ ಗೆದ್ದಿದ್ದಾರೆ.

ಇದೇ ವೇಳೆ, ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಋತುವಿನಲ್ಲಿ ಬೆತ್ ಮೂನಿಗೆ ಗುಜರಾತ್ ಜೈಂಟ್ಸ್ ತಂಡದ ನಾಯಕತ್ವ ನೀಡಿರುವುದು ಜಾಣ ನಡೆಯಾಗಿದೆ.

Story first published: Monday, February 27, 2023, 21:56 [IST]
Other articles published on Feb 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+