Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Smriti Mandhana : ತಂಡ ಸೇರಿಕೊಂಡ ಆರ್‌ಸಿಬಿ ಕ್ವೀನ್ ಸ್ಮೃತಿ ಮಂಧಾನ; ಹೇಗಿತ್ತು ಎಂಟ್ರಿ?

WPL 2023: Captain Smriti Mandhana Joins RCB Womens Squad; See Queen Entry

2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್(WPL) ಪಂದ್ಯಾವಳಿಗೆ ಶನಿವಾರ, ಮಾರ್ಚ್ 4ರಂದು ಅದ್ಧೂರಿಯಾಗಿ ಚಾಲನೆ ನೀಡಲಿದ್ದು, ಉದ್ಘಾಟನಾ ಟೂರ್ನಿಯ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.

2023ರ ಮಹಿಳಾ ಪ್ರೀಮಿಯರ್ ಲೀಗ್ ಮುಂಬೈನ ಎರಡು ಸ್ಥಳಗಳಲ್ಲಿ ಒಟ್ಟು 22 ಪಂದ್ಯಗಳನ್ನು ಆಡಿಸಲಾಗುತ್ತದೆ. ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂ. ಈಗಾಗಲೇ ಎಲ್ಲಾ ಐದೂ ತಂಡಗಳು ಮುಂಬೈ ತಲುಪಿವೆ.

ಮೊದಲ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಪರ್ಧಿಸುತ್ತಿರುವ ಐದು ತಂಡಗಳೆಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್ ಜೊತೆಗೆ ಹೊಸ ತಂಡಗಳ ಜೊತೆಗೆ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಸೇರ್ಪಡೆಯಾಗಿವೆ.

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡ ಮುಂಬೈಗೆ ಬಂದಿಳಿದಿದ್ದು, ತಂಡದ ನಾಯಕಿ ಸ್ಮೃತಿ ಮಂಧಾನ ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಪಂದ್ಯಕ್ಕೂ ಮುನ್ನ ತಮ್ಮ ಹೊಸ ಫ್ರಾಂಚೈಸಿಯ ಸಹ ಆಟಗಾರರನ್ನು ಸೇರಿಕೊಂಡಿದ್ದಾರೆ.

WPL 2023: Captain Smriti Mandhana Joins RCB Womens Squad; See Queen Entry

ಸ್ಮೃತಿ ಮಂಧಾನ ಆರ್‌ಸಿಬಿ ತಂಡವನ್ನು ಯಾವಾಗ ಕೂಡಿಕೊಳ್ಳಲಿದ್ದಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿತ್ತು. ಆರ್‌ಸಿಬಿಯ ಸಾಮಾಜಿಕ ಮಾಧ್ಯಮದಲ್ಲಿ ಸ್ಮೃತಿ ಮಂಧಾನ ಇರುವಿಕೆಯ ಕುರಿತು ಕೋಚ್ ಸೇರಿದಂತೆ ಸಹ ಆಟಗಾರ್ತಿಯರು ಸುಳಿವು ಬಿಟ್ಟುಕೊಡಲಿಲ್ಲ.

ನಂತರ, ಮಂದಹಾಸ ಬೀರುತ್ತಾ ಬಂದ ಸ್ಮೃತಿ ಮಂಧಾನ, ನಮಸ್ಕಾರ ಆರ್‌ಸಿಬಿ ಫ್ಯಾನ್ಸ್, ನಾನು ಸ್ಮೃತಿ ಮಂಧಾನ.. ಎನ್ನುತ್ತಾ ತಂಡವನ್ನು ಕೂಡಿಕೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ನಂತರ ತಮ್ಮ ಸಹ ಆಟಗಾರ್ತಿಯರನ್ನು ಭೇಟಿಯಾದಳು.

ಆರ್‌ಸಿಬಿ ಮಹಿಳಾ ತಂಡ ತನ್ನ ಮೊದಲ ಪಂದ್ಯವನ್ನು ಭಾನುವಾರ, ಮಾರ್ಚ್ 5ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಡಲಿದೆ. ಈ ಪಂದ್ಯ ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:30ಕ್ಕೆ ನಡೆಯಲಿದೆ.

ಆರ್‌ಸಿಬಿ ಮಹಿಳಾ ತಂಡದ ಬಲಾಬಲ
ಬ್ಯಾಟರ್ಸ್: ಸ್ಮೃತಿ ಮಂಧಾನ, ದಿಶಾ ಕಸತ್

ಬೌಲರ್‌ಗಳು: ರೇಣುಕಾ ಸಿಂಗ್, ಪ್ರೀತಿ ಬೋಸ್, ಕೋಮಲ್ ಜಂಜಾದ್, ಮೇಗನ್ ಶುಟ್, ಸಹನಾ ಪವಾರ್

ವಿಕೆಟ್ ಕೀಪರ್‌ಗಳು: ರಿಚಾ ಘೋಷ್, ಇಂದ್ರಾಣಿ ರಾಯ್

ಆಲ್‌ರೌಂಡರ್‌ಗಳು: ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಎರಿನ್ ಬರ್ನ್ಸ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀಥರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪೂನಂ ಖೇಮ್ನಾರ್.

Story first published: Thursday, March 2, 2023, 11:07 [IST]
Other articles published on Mar 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+