For Quick Alerts
ALLOW NOTIFICATIONS  
For Daily Alerts
 

WPL 2023: ಸಂಪೂರ್ಣ ತಂಡಗಳು, ನಾಯಕಿಯರು, ಟಿವಿ & ಲೈವ್ ಸ್ಟ್ರೀಮಿಂಗ್ ವಿವರ

WPL 2023: Complete Team Squads, All 5 Captains, TV & Live Streaming Details

2023ರ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಇದೇ ಶನಿವಾರ ಮಾರ್ಚ್ 4ರಂದು ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಬಹುನಿರೀಕ್ಷಿತ ಮಹಿಳಾ ಟಿ20 ಪಂದ್ಯಾವಳಿಗಾಗಿ ಪ್ರಪಂಚದ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.

ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ಮಹಿಳಾ ತಂಡಗಳು ಸೆಣಸಾಡುವುದರೊಂದಿಗೆ ಪ್ರಶಸ್ತಿಗೆ ಪೈಪೋಟಿ ಏರ್ಪಡಲಿದೆ.

2023ರ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಐದು ತಂಡಗಳು ಕಣಕ್ಕಿಳಿಯಲಿದ್ದು, ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿವೆ.

ಪ್ರತಿ ತಂಡದಲ್ಲಿಯೂ ದೇಶ-ವಿದೇಶದ ದೊಡ್ಡ ದೊಡ್ಡ ಸ್ಟಾರ್ ಆಟಗಾರ್ತಿಯರು ಇದ್ದು, ಹರ್ಮನ್‌ಪ್ರೀತ್ ಕೌರ್, ಬೆತ್ ಮೂನಿ, ಅಲಿಸ್ಸಾ ಹೀಲಿ, ಮೆಗ್ ಲ್ಯಾನಿಂಗ್ ಮತ್ತು ಸ್ಮೃತಿ ಮಂಧಾನ ಅವರಂತಹ ಆಟಗಾರ್ತಿಯರು ತಮ್ಮ ಫ್ರಾಂಚೈಸಿ ತಂಡಗಳ ಪರ ಚೊಚ್ಚಲ ಪ್ರಶಸ್ತಿಗಾಗಿ ಮುಖಾಮುಖಿಯಾಗಲಿದ್ದಾರೆ.

WPL 2023: Complete Team Squads, All 5 Captains, TV & Live Streaming Details

ಪ್ರಥಮ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 20 ಲೀಗ್ ಪಂದ್ಯಗಳು ಮತ್ತು 2 ಪ್ಲೇಆಫ್ ಪಂದ್ಯಗಳನ್ನು ಆಡಲಾಗುತ್ತಿದ್ದು, ಮಾರ್ಚ್ 26ರಂದು ಫೈನಲ್ ಪಂದ್ಯವನ್ನು ನಿಗದಿಪಡಿಸಲಾಗಿದೆ.

ಹರ್ಮನ್‌ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ಮಹಿಳಾ ತಂಡವನ್ನು ಮುನ್ನಡೆಸಲಿದ್ದರೆ, ಸ್ಮೃತಿ ಮಂಧಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿದ್ದಾರೆ. ಇನ್ನು ಮೆಗ್ ಲ್ಯಾನ್ನಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೇತೃತ್ವ ವಹಿಸಿದ್ದಾರೆ. ಗುಜರಾತ್ ಜೈಂಟ್ಸ್ ತಂಡದ ನಾಯಕಿಯಾಗಿ ಬೆತ್ ಮೂನಿ ಇದ್ದರೆ, ಯುಪಿ ವಾರಿಯರ್ಸ್ ನಾಯಕಿಯಾಗಿ ಅಲಿಸ್ಸಾ ಹೀಲಿ ನೇಮಕಗೊಂಡಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನ ಸಂಪೂರ್ಣ ತಂಡಗಳು
ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸೀವರ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಹೀಥರ್ ಗ್ರಹಾಂ, ಇಸಾಬೆಲ್ಲೆ ವಾಂಗ್, ಅಮನ್‌ಜೋತ್ ಕೌರ್, ಧಾರಾ ಗುಜ್ಜರ್, ಸೈಕಾ ಇಶಾಕ್, ಹೇಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯಾನ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲಾ, ಜೆ ಸೋನಮ್ ಯಾದವ್, ಜಿಂತಿಮಣಿ ಕಲಿತಾ, ನೀಲಂ ಬಿಷ್ಟ್.

ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ) ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ರಾಧಾ ಯಾದವ್, ಶಿಖಾ ಪಾಂಡೆ, ಮರಿಜಾನ್ನೆ ಕಾಪ್, ಟಿಟಾಸ್ ಸಾಧು, ಆಲಿಸ್ ಕ್ಯಾಪ್ಸೆ, ತಾರಾ ನಾರ್ರಿಸ್, ಲಾರಾ ಹ್ಯಾರಿಸ್, ಜಸಿಯಾ ಅಖ್ತರ್, ಮಿನ್ನು ಮಾನ್, ತಾನಿಯಾ ಭಾಟಿಯಾ, ಪೂನಂ ಯಾದವ್, ಜೆಸ್ ಜೊನಾಸ್, ಸ್ನೇಹಾ ದೀಪ್ತಿ, ಅರುಂಧತಿ ರೆಡ್ಡಿ, ಅಪರ್ಣಾ ಮಂಡಲ್.

ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ನಾಯಕಿ), ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ, ತಹ್ಲಿಯಾ ಮೆಗ್ರಾತ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್, ಪಾರ್ಶವಿ ಚೋಪ್ರಾ, ಶ್ವೇತಾ ಸೆಹ್ರಾವತ್, ಎಸ್ ಯಶಸ್ರಿ, ಕಿರಣ್ ನವಗಿರೆ, ಗ್ರೇಸ್ ಹ್ಯಾರಿಸ್, ದೇವಿಕಾ ವೈದ್ಯ, ಲಾರೆನ್ ಬೆಲ್, ಲಕ್ಷ್ಮಿ ಯಾದವ್, ಸಿಮ್ರಾನ್ ಶೇಖ್.

ಗುಜರಾತ್ ಜೈಂಟ್ಸ್: ಬೆತ್ ಮೂನಿ (ನಾಯಕಿ), ಆಶ್ಲೀಗ್ ಗಾರ್ಡ್ನರ್, ಸೋಫಿ ಡಂಕ್ಲೆ, ಅನ್ನಾ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಡಿಯಾಂಡ್ರಾ ಡಾಟಿನ್, ಸ್ನೇಹ ರಾಣಾ, ಸಬ್ಬಿನೇನಿ ಮೇಘನಾ, ಜಾರ್ಜಿಯಾ ವೇರ್ಹ್ಯಾಮ್, ಮಾನ್ಸಿ ಜೋಶಿ, ಡಿ ಹೇಮಲತಾ, ಮೋನಿಕಾ ಪಟೇಲ್, ತನುಜಾ ಕನ್ವರ್, ಸುಷ್ಮಾ ವರ್ಮಾ, ಹರ್ಲಿ ಗಾಲಾ, ಅಶ್ವನಿ ಕುಮಾರಿ, ಪರುಣಿಕಾ ಸಿಸೋಡಿಯಾ, ಶಬ್ನಮ್ ಶಕಿಲ್.

WPL 2023: Complete Team Squads, All 5 Captains, TV & Live Streaming Details

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್ ಠಾಕೂರ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀಥರ್ ನೈಟ್, ಡೇನ್ ವ್ಯಾನ್ ನೀಕೆರ್ಕ್, ಪ್ರೀತಿ ಬೋಸ್, ಪೂನಂ ಖೇಮ್ನಾರ್, ಕೋಮಲ್ ಝಂಝಾದ್, ಮೇಘನ್ ಶುಟ್, ಸಹನಾ ಪವಾರ್.

ಮಹಿಳಾ ಪ್ರೀಮಿಯರ್ ಲೀಗ್ 2023ರ ಟಿವಿ ಮತ್ತು ಲೈವ್ ಸ್ಟ್ರೀಮಿಂಗ್

ಮಹಿಳಾ ಪ್ರೀಮಿಯರ್ ಲೀಗ್ 2023ರ ಪಂದ್ಯಗಳು ಭಾರತದಲ್ಲಿ Sports18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದ್ದರೆ, ಇನ್ನು JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.

Story first published: Friday, March 3, 2023, 6:45 [IST]
Other articles published on Mar 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+