For Quick Alerts
ALLOW NOTIFICATIONS  
For Daily Alerts
 

WPL 2023: ಯುಪಿ ವಾರಿಯರ್ಸ್ ತಂಡಕ್ಕೆ ಭಾರತದ ಸ್ಟಾರ್ ಆಲ್‌ರೌಂಡರ್ ಉಪನಾಯಕಿ

WPL 2023: Deepti Sharma Named As Vice-Captain For The Up Warriorz In The WPL 2023

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ ಆವೃತ್ತಿಗಾಗಿ ಯುಪಿ ವಾರಿಯರ್ಸ್ ತಂಡ ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾರನ್ನು ಉಪನಾಯಕಿಯನ್ನಾಗಿ ಆಯ್ಕೆ ಮಾಡಿದೆ.

ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅಲಿಸ್ಸಾ ಹೀಲಿಯವರನ್ನು ಈ ಮೊದಲು ನಾಯಕಿಯನ್ನಾಗಿ ಘೋಷಣೆ ಮಾಡಿತ್ತು. ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳ ಮುನ್ನ ಉಪನಾಯಕಿಯ ಹೆಸರನ್ನು ಘೋಷಿಸಿದೆ.

ಉತ್ತರ ಪ್ರದೇಶದವರೆ ಆದ ದೀಪ್ತಿ ಶರ್ಮಾರನ್ನು ಯಪಿ ವಾರಿಯರ್ಸ್ ನಾಯಕಿಯನ್ನಾಗಿ ಆಯ್ಕೆ ಮಾಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಲಿಸ್ಸಾ ಹೀಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವುದನ್ನು ಪರಿಗಣಿಸಿ ಅವರಿಗೆ ನಾಯಕಿ ಸ್ಥಾನ ನೀಡಲಾಗಿದೆ ಎಂದು ಫ್ರಾಂಚೈಸಿ ತಿಳಿಸಿತ್ತು.

ಈಗ ದೀಪ್ತಿ ಶರ್ಮಾರನ್ನು ಉಪನಾಯಕಿಯಾಗಿ ಆಯ್ಕೆ ಮಾಡುವ ಮೂಲಕ ಭವಿಷ್ಯದಲ್ಲಿ ದೀಪ್ತಿ ಶರ್ಮಾ ಯುಪಿ ವಾರಿಯರ್ಸ್ ತಂಡವನ್ನು ಮುನ್ನಡೆಸಲು ಮೊದಲ ಆಯ್ಕೆಯಾಗಲಿದ್ದಾರೆ ಎನ್ನುವ ಸಂದೇಶವನ್ನು ರವಾನಿಸಿದೆ.

ಭಾರತ ತಂಡದ ಪ್ರಮುಖ ಆಲ್‌ರೌಂಡರ್ ಆಗಿರುವ ದೀಪ್ತಿ ಶರ್ಮಾ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಭಾರತ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದೇ ಪ್ರದರ್ಶನವನ್ನು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂದುರವರೆಸುವ ಭರವಸೆಯಲ್ಲಿದ್ದಾರೆ.

WPL 2023: Deepti Sharma Named As Vice-Captain For The Up Warriorz In The WPL 2023

ಸಂತಸ ಹಂಚಿಕೊಂಡ ದೀಪ್ತಿ ಶರ್ಮಾ

"ಅಲಿಸ್ಸಾ ಹೀಲಿ ಮತ್ತು ಹಿರಿಯ ಆಟಗಾರರು ಇದ್ದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಅಲಿಸ್ಸಾ ಹೀಲಿ ನಾಯಕತ್ವದಲ್ಲಿ ಯುಪಿ ವಾರಿಯರ್ಸ್ ಅದ್ಭುತ ಕ್ರಿಕೆಟ್ ಆಡಬಹುದು ಎಂದು ಭಾವಿಸುವುದಾಗಿ" ದೀಪ್ತಿ ಶರ್ಮಾ ಹೇಳಿದ್ದಾರೆ.

"ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ನಾವು ನೀಡುವ ಪ್ರದರ್ಶನಗಳು ಉತ್ತರ ಪ್ರದೇಶದಲ್ಲಿರುವ ಯುವ ಮಹಿಳಾ ಕ್ರೀಡಾಪಟುಗಳಿಗೆ ಸ್ಪೂರ್ತಿಯ ಮೂಲವಾಗಬಹುದು ಎಂದು ಭಾವಿಸುತ್ತೇವೆ, ಪಂದ್ಯಾವಳಿ ಆರಂಭಕ್ಕಾಗಿ ಉತ್ಸಾಹದಿಂದ ಕಾಯುತ್ತಿದ್ದೇನೆ" ಎಂದು ಹೇಳಿದ್ದಾರೆ.

WPL 2023: Deepti Sharma Named As Vice-Captain For The Up Warriorz In The WPL 2023

2.6 ಕೋಟಿ ರುಪಾಯಿ ನೀಡಿ ಖರೀದಿ

25 ವರ್ಷದ ಆಲ್‌ರೌಂಡರ್ ದೀಪ್ತಿ ಶರ್ಮಾರನ್ನು ಯುಪಿ ವಾರಿಯರ್ಸ್ 2.6 ಕೋಟಿ ರುಪಾಯಿ ನೀಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ದೀಪ್ತಿ ಭಾರತ ಮಹಿಳಾ ತಂಡದ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ. ವಿದೇಶದಲ್ಲಿ ನಡೆದ ಪಂದ್ಯಗಳಲ್ಲಿ ಕೂಡ ದೀಪ್ತಿ ಶರ್ಮಾ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಯುಪಿ ವಾರಿಯರ್ಜ್ ತಂಡಕ್ಕೆ ಇಂಗ್ಲೆಂಡ್‌ನ ಜಾನ್ ಲೂಯಿಸ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಅಂಜು ಜೈನ್ ಸಹಾಯಕ ಕೋಚ್ ಆಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಆಶ್ಲೇ ನೋಫ್ಕೆ ಬೌಲಿಂಗ್ ಕೋಚ್ ಆಗಿದ್ದಾರೆ ಮತ್ತು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಲಿಸಾ ಸ್ಥಾಲೇಕರ್ ತಂಡದ ಮೆಂಟರ್ ಆಗಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್ ಮಾರ್ಚ್ 4 ರಿಂದ 26 ರವರೆಗೆ ಮುಂಬೈನ ಬ್ರಬೋರ್ನ್ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

Story first published: Saturday, February 25, 2023, 23:45 [IST]
Other articles published on Feb 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+