WPL 2023: ವಿರಾಟ್ ಕೊಹ್ಲಿ vs ಎಂಎಸ್ ಧೋನಿ ನಡುವಿನ ಆಯ್ಕೆ ಪ್ರಶ್ನೆ; ಎಲ್ಲಿಸ್ ಪೆರ್ರಿ ಜಾಣ್ಮೆಯ ಉತ್ತರ

ಇಂಡಿಯನ್ ಪ್ರೀಮಿಯರ್ ಲೀಗ್ ಆಗಿರಲಿ ಅಥವಾ ಮಹಿಳಾ ಪ್ರೀಮಿಯರ್ ಲೀಗ್ ಆಗಿರಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಕ್ರೇಜ್ ಮಾತ್ರ ಕಡಿಮೆಯಾಗಿರುವುದಿಲ್ಲ. ಕಳೆದ 15 ವರ್ಷಗಳಲ್ಲಿ ಒಂದೂ ಪ್ರಶಸ್ತಿ ಗೆಲ್ಲದಿದ್ದರೂ, ಅದರ ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗಿದೆಯೇ ಹೊರತು, ಕಡಿಮೆಯಾಗಿಲ್ಲ.
ಆರ್‌ಸಿಬಿ ತಂಡ ಹಲವು ವರ್ಷಗಳಿಂದ ವಿಶ್ವ ಕ್ರಿಕೆಟ್‌ನಲ್ಲಿ ಕೆಲವು ಅತ್ಯುತ್ತಮ ಆಟಗಾರರನ್ನು ಹೊಂದಿದೆ ಮತ್ತು ಇದೀಗ ಆರ್‌ಸಿಬಿ ಮಹಿಳಾ ತಂಡವು ಎಲ್ಲಿಸ್ ಪೆರ್ರಿ ರೂಪದಲ್ಲಿ ಸ್ಟಾರ್ ಆಟಗಾರ್ತಿಯನ್ನು ಪಡೆದುಕೊಂಡಿದೆ.
2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡವು ತನ್ನ ಆರಂಭಿಕ ಪಂದ್ಯಗಳಲ್ಲಿಯೇ ಸೋಲಿನ ರುಚಿ ಕಂಡಿದೆ. ಆದರೆ, ಆಟಗಾರ್ತಿಯರ ಉತ್ಸಾಹ ಮಾತ್ರ ಕುಗ್ಗಿಲ್ಲ. ಆಸ್ಟ್ರೇಲಿಯಾದ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಅವರಿಗೆ ಭಾರತೀಯ ಲೆಜೆಂಡ್‌ಗಳಾದ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ನಡುವೆ ಆಯ್ಕೆ ಮಾಡಲು ಒಂದು ಕಠಿಣ ಪ್ರಶ್ನೆಯನ್ನು ಕೇಳಲಾಗಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಈ ಇಬ್ಬರ ನಡುವೆ ಒಬ್ಬರನ್ನು ಆಯ್ಕೆ ಮಾಡುವುದು ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ಕಷ್ಟಕರವಾದ ಕೆಲಸವಾಗಿದೆ.

ಇದೀಗ ಆರ್‌ಸಿಬಿ ತಂಡ ತನ್ನ ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಇಬ್ಬರ ನಡುವೆ ಒಬ್ಬರನ್ನು ತನ್ನ ಆರಂಭಿಕ ಜೊತೆಯಾಟಗಾರನನ್ನಾಗಿ ಆಯ್ಕೆ ಮಾಡಿಕೊಳ್ಳಲು ಎಲ್ಲಿಸ್ ಪೆರ್ರಿಗೆ ಕೇಳಲಾಯಿತು.
ಆದರೆ, ಇದಕ್ಕೆ ಅತ್ಯಂತ ಜಾಣ್ಮೆಯಿಂದ ಉತ್ತರಿಸಿದ ಆರ್‌ಸಿಬಿ ಮಹಿಳಾ ತಂಡದ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ, "ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಇವರಿಬ್ಬರನ್ನೂ ಆರಂಭಿಕರನ್ನಾಗಿ ಆಯ್ಕೆ ಮಾಡಿ, ತಾನು ಹೊರಗೆ ಕುಳಿತು ಅವರ ಆಟ ವೀಕ್ಷಿಸುವುದಾಗಿ," ತಿಳಿಸಿದರು.
2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸತತ ಎರಡು ಸೋಲುಗಳಿಂದ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಆರ್‌ಸಿಬಿ ತಂಡಕ್ಕೆ ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ವಿರುದ್ಧ ಸೋತ ನಂತರ, ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ತಂಡವು ಬುಧವಾರ, ಮಾರ್ಚ್ 9ರಂದು ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಎಲ್ಲಿಸ್ ಪೆರ್ರಿ ಅಡಿದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 31 ಮತ್ತು 13 ರನ್ ಗಳಿಸಿದ್ದು, ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಇನ್ನೂ ಒಂದು ವಿಕೆಟ್ ಪಡೆಯಲು ವಿಫಲರಾಗಿದ್ದಾರೆ. ತಂಡದ ಗೆಲುವಿಗೆ ಎಲ್ಲಿಸ್ ಪೆರ್ರಿ ಪ್ರದರ್ಶನ ಪ್ರಮುಖವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications