WPL 2023: ಗುಜರಾತ್ ಜೈಂಟ್ಸ್ ನಾಯಕಿ ಬೆತ್ ಮೂನಿ ಬದಲಿಯಾಗಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ್ತಿ ಆಯ್ಕೆ

2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಬೆತ್ ಮೂನಿ ಗಾಯದಿಂದಾಗಿ ಪಂದ್ಯಗಳಿಂದ ಹೊರಗುಳಿದಿದ್ದು, ಅವರ ಬದಲಿಯಾಗಿ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ ಗುಜರಾತ್ ಜೈಂಟ್ಸ್ ತಂಡವನ್ನು ಸೇರಲಿದ್ದಾರೆ.
ಪಿಸಿಬಿಯ ಮಹಿಳಾ ಲೀಗ್ ಪ್ರದರ್ಶನ ಪಂದ್ಯಗಳಿಗಾಗಿ ಪಾಕಿಸ್ತಾನದಲ್ಲಿದ್ದ ಲಾರಾ ವೊಲ್ವಾರ್ಡ್ ಅವರನ್ನು ಅವರ ತಂಡ ಸೂಪರ್ ವುಮೆನ್ ಬಿಡುಗಡೆ ಮಾಡಿದೆ.
ಲಾರಾ ವೊಲ್ವಾರ್ಡ್ ಅವರ ದೇಶವಾಸಿ ಸುನೆ ಲೂಸ್ ಅವರು ಪಿಸಿಬಿಯ ಮಹಿಳಾ ಲೀಗ್ ಪ್ರದರ್ಶನ ಪಂದ್ಯಗಳಲ್ಲಿ ವೊಲ್ವಾರ್ಡ್‌ರ ಸ್ಥಾನವನ್ನು ಪಡೆದಿದ್ದಾರೆ.
ಲಾರಾ ವೊಲ್ವಾರ್ಡ್ ಮಹಿಳಾ ಲೀಗ್‌ನಲ್ಲಿ ಆಡಿದ ತನ್ನ ಏಕೈಕ ಪಂದ್ಯದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಸೂಪರ್ ವುಮೆನ್ ತಂಡ ಎಂಟು ವಿಕೆಟ್‌ಗಳಿಂದ ಅಮೆಜಾನ್ ತಂಡವನ್ನು ಸೋಲಿಸುವಲ್ಲಿ ವೊಲ್ವಾರ್ಡ್ 36 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿದ್ದರು.
"ಮಹಿಳಾ ಲೀಗ್ ಪ್ರದರ್ಶನ ಪಂದ್ಯಗಳಲ್ಲಿ ಆಡಲು ಅವಕಾಶ ನೀಡಿದ್ದಕ್ಕಾಗಿ ನಾನು ಪಿಸಿಬಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ನಂಬಲಾಗದ ಸಣ್ಣ ಪ್ರಯಾಣವಾಗಿದೆ. ಆದರೆ ನಾನು ಈ ಅನುಭವವನ್ನು ಇಷ್ಟಪಟ್ಟಿದ್ದೇನೆ. ಸೂಪರ್ ವುಮೆನ್ ತಂಡವು ಅದ್ಭುತವಾಗಿದೆ," ಎಂದು ಲಾರಾ ವೊಲ್ವಾರ್ಡ್ ತಿಳಿಸಿದ್ದಾರೆ.

"ಮಹಿಳಾ ಲೀಗ್‌ನ ಉಳಿದ ಪಂದ್ಯಾವಳಿಗೆ ನಾನು ಶುಭ ಹಾರೈಸುತ್ತೇನೆ. ಎರಡೂ ತಂಡಗಳು ಉತ್ತಮವಾಗಿ ಆಡುತ್ತಿವೆ. ಇಲ್ಲಿ ಆಡುವ ಪಂದ್ಯಗಳಿಂದ ಆಟಗಾರ್ತಿಯರು ಪಡೆಯುವ ಅನುಭವದಿಂದ ಬಹಳಷ್ಟು ಕಲಿಯುತ್ತಾರೆ. ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಮಹಿಳಾ ತಂಡದೊಂದಿಗೆ ಆಗಮಿಸಿ, ಈ ಅದ್ಭುತ ದೇಶದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತೇನೆ," ಎಂದು ಲಾರಾ ವೊಲ್ವಾರ್ಡ್ ಹೇಳಿದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗುವ ಮುನ್ನ ಆಸ್ಟ್ರೇಲಿಯಾದ ಬೆತ್ ಮೂನಿ ಗುಜರಾತ್ ಜೈಂಟ್ಸ್ ನಾಯಕಿಯಾಗಿ ಮುನ್ನಡೆಸಿದರು. ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಗುಜರಾತ್ ಜೈಂಟ್ಸ್ ಫ್ರಾಂಚೈಸಿ ಬೆತ್ ಮೂನಿಯನ್ನು 2 ಕೋಟಿ ರೂಪಾಯಿಗೆ ಖರೀದಿಸಿತ್ತು.
ಮುಂಬೈ ಇಂಡಿಯನ್ಸ್ ನೀಡಿದ್ದ ಬೃಹತ್ 207 ರನ್‌ಗಳ ಚೇಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಬೆತ್ ಮೂನಿ ಮೊಣಕಾಲಿನ ಗಾಯಕ್ಕೆ ಒಳಗಾದರು. ಗಾಯಗೊಂಡು ನಿವೃತ್ತಿಯಾದ ನಂತರ ಗುಜರಾತ್ ಜೈಂಟ್ಸ್ ತಂಡ 143 ರನ್‌ಗಳಿಂದ ಸೋತಿತು. ಇನ್ನು ಬೆತ್ ಮೂನಿ ಅನುಪಸ್ಥಿತಿಯಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸ್ನೇಹ್ ರಾಣಾ ಮುನ್ನಡೆಸುತ್ತಿದ್ದಾರೆ.
ಬುಧವಾರ, ಮಾರ್ಚ್ 8ರಂದು ನಡೆದ ಪಂದ್ಯದಲ್ಲಿ ಸೋಫಿಯಾ ಡಂಕ್ಲಿ ಮತ್ತು ಹರ್ಲೀನ್ ಡಿಯೋಲ್ ತಲಾ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 11 ರನ್‌ಗಳ ಜಯದೊಂದಿಗೆ ಗುಜರಾತ್ ಜೈಂಟ್ಸ್ ತಮ್ಮ ಮೊದಲ ಗೆಲುವು ಕಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications