Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಲೀಗ್‌ನಿಂದ ಹೊರಬಿದ್ದ ಗುಜರಾತ್ ಜೈಂಟ್ಸ್ ಸ್ಟಾರ್ ಆಲ್‌ರೌಂಡರ್; ಬದಲಿ ಆಟಗಾರ್ತಿ ಆಯ್ಕೆ

WPL 2023: Gujarat Giants Star All-rounder Deandra Dottin Ruled out From league; Kim Garth As Replacement

ಬಹುನಿರೀಕ್ಷಿತ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL) ಶನಿವಾರ, ಮಾರ್ಚ್ 4ರಿಂದ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ 143 ರನ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿ ದಾಖಲೆ ಬರೆದಿದೆ.

ಇದೀಗ ವೆಸ್ಟ್ ಇಂಡೀಸ್ ಮಹಿಳಾ ತಂಡದ ಸ್ಟಾರ್ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಅವರು 2023ರ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಹೊರಬಿದ್ದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಆರಂಭಿಕ ಪಂದ್ಯಕ್ಕೂ ಮುನ್ನವೇ ಗುಜರಾತ್ ಜೈಂಟ್ಸ್ ದೊಡ್ಡ ಹಿನ್ನಡೆ ಅನುಭವಿಸಿತು.

ಡಿಯಾಂಡ್ರಾ ಡಾಟಿನ್ ಅವರು ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ತಮ್ಮ ಫಿಟ್‌ನೆಸ್ ಅನ್ನು ಮರಳಿ ಪಡೆದಿಲ್ಲ. ಮಹಿಳಾ ಪ್ರೀಮಿಯರ್ ಲೀಗ್‌ನ ಹರಾಜು ಪ್ರಕ್ರಿಯೆಯಲ್ಲಿ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಬಿಡ್ಡಿಂಗ್ ಪ್ರಾರಂಭವಾಗಿ ಗುಜರಾತ್ ಜೈಂಟ್ಸ್ 60 ಲಕ್ಷ ರೂಪಾಯಿಗೆ ಡಿಯಾಂಡ್ರಾ ಡಾಟಿನ್ ಅವರನ್ನು ಖರೀದಿಸಿತು.

WPL 2023: Gujarat Giants Star All-rounder Deandra Dottin Ruled out From league; Kim Garth As Replacement

ಡಿಯಾಂಡ್ರಾ ಡಾಟಿನ್ ಅವರ ಬದಲಿಯಾಗಿ ಆಸ್ಟ್ರೇಲಿಯಾದ ಕಿಮ್ ಗಾರ್ತ್ ಅವರನ್ನು ಗುಜರಾತ್ ಜೈಂಟ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಕಳೆದ ತಿಂಗಳು ನಡೆದ ಹರಾಜಿನಲ್ಲಿ ಬಲಗೈ ಬ್ಯಾಟರ್ ಕಿಮ್ ಗಾರ್ತ್ ಅನ್‌ಸೋಲ್ಡ್ ಆಗಿದ್ದರು. ಇನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು.

ಕಿಮ್ ಗಾರ್ತ್ ವಿಶ್ವಕಪ್‌ಗೆ ಮೊದಲು ಕೇವಲ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ್ದಾರೆ. ಮೊದಲು ಐರ್ಲೆಂಡ್ ತಂಡದ ಆಟಗಾರ್ತಿಯಾಗಿದ್ದ ಅವರು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಆಸ್ಟ್ರೇಲಿಯಾ ತಂಡಕ್ಕೆ ಸೇರ್ಪಡೆಗೊಂಡರು.

ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL) ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದೊಂದಿಗೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಕಿಮ್ ಗಾರ್ತ್ ಶುಕ್ರವಾರವೇ ಗುಜರಾತ್ ಜೈಂಟ್ಸ್ ಅಭ್ಯಾಸ ತಂಡವನ್ನು ಸೇರಿಕೊಂಡಿದ್ದಾರೆ.

22 ಪಂದ್ಯಗಳ ಲೀಗ್‌ನಲ್ಲಿ ಮಾರ್ಚ್ 26ರಂದು ನಡೆಯುವ ಫೈನಲ್ ಪಂದ್ಯಕ್ಕೂ ಮುನ್ನ ಒಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ. ಲೀಗ್‌ನಲ್ಲಿ ಐದು ತಂಡಗಳು ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿವೆ.

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಐದು ತಂಡಗಳು- ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ತಂಡಗಳು ಆಡುತ್ತಿವೆ.

ಗುಜರಾತ್ ಜೈಂಟ್ಸ್ ಪೂರ್ಣ ತಂಡ
ಬೆತ್ ಮೂನಿ (ನಾಯಕಿ), ಆಶ್ಲೀಗ್ ಗಾರ್ಡ್ನರ್, ಸೋಫಿಯಾ ಡಂಕ್ಲಿ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಕಿಮ್ ಗಾರ್ತ್, ಸ್ನೇಹ್ ರಾಣಾ, ಸಬ್ಬಿನೇನಿ ಮೇಘನಾ, ಜಾರ್ಜಿಯಾ ವೇರ್ಹ್ಯಾಮ್, ಮಾನ್ಸಿ ಜೋಶಿ, ದಯಾಳನ್ ಹೇಮಲತಾ, ಮೋನಿಕಾ ಪಟೇಲ್, ತನುಜಾ ಕನ್ವರ್, ಸುಷ್ಮಾ ವರ್ಮಾ, ಹರ್ಲಿ ಗಾಲಾ, ಅಶ್ವನಿ ಕುಮಾರಿ, ಪರುಣಿಕಾ ಸಿಸೋಡಿಯಾ, ಶಬ್ನಮ್ ಶಕಿಲ್.

Story first published: Sunday, March 5, 2023, 16:09 [IST]
Other articles published on Mar 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+