Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ ಉದ್ಘಾಟನಾ ಪಂದ್ಯದ ಸಂಭಾವ್ಯ 11ರ ಬಳಗ, ಪಂದ್ಯದ ವಿವರ

WPL 2023: Gujarat Giants vs Mumbai Indians Inaugural Match Probable Playing 11 And Match Details

2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್(WPL) ಪಂದ್ಯಾವಳಿಗಾಗಿ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದ್ದು, ಶನಿವಾರ, ಮಾರ್ಚ್ 4ರಂದು ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಚೊಚ್ಚಲ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.

2023ರ ಮಹಿಳಾ ಪ್ರೀಮಿಯರ್ ಲೀಗ್ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಒಟ್ಟು 22 ಪಂದ್ಯಗಳನ್ನು ಆಡಲಾಗುತ್ತದೆ. ಈಗಾಗಲೇ ಎಲ್ಲಾ ಐದೂ ತಂಡಗಳು ಮುಂಬೈ ತಲುಪಿವೆ.

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಅದಾನಿ ಸ್ಪೋರ್ಟ್ಸ್‌ಲೈನ್ ಮಾಲೀಕತ್ವದ ಗುಜರಾತ್ ಜೈಂಟ್ಸ್ ಮಹಿಳಾ ತಂಡವು ಮುಖೇಶ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಸವಾಲು ಹಾಕಲಿದೆ. ಈ ಮೂಲಕ ಪಂದ್ಯಾವಳಿಗೆ ಅಧಿಕೃತ ಚಾಲನೆ ಸಿಗಲಿದೆ.

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ಕೃತಿ ಸನೋನ್ ಮತ್ತು ಎಪಿ ಧಿಲ್ಲೋನ್‌ಂತಹ ಸೆಲೆಬ್ರಿಟಿಗಳು ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ನಿಡಲಿದ್ದಾರೆ. ನಂತರ, ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಗಯಜರಾತ್ ಜೈಂಟ್ಸ್ ತಂಡದ ನಾಯಕಿ ಬೆತ್ ಮೂನಿ ಟಾಸ್‌ಗೆ ಮೈದಾನಕ್ಕಿಳಿಯಲಿದ್ದಾರೆ.

WPL 2023: Gujarat Giants vs Mumbai Indians Inaugural Match Probable Playing 11 And Match Details

ನಾಯಕಿ ಹರ್ಮನ್‌ಪ್ರೀತ್ ಹೊರತಾಗಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ಆಲ್‌ರೌಂಡರ್ ನ್ಯಾಟ್ ಸ್ಕಿವರ್-ಬ್ರಂಟ್, ನ್ಯೂಜಿಲೆಂಡ್ ಆಲ್‌ರೌಂಡರ್ ಅಮೆಲಿ ಕೆರ್, ಭಾರತದ ಪೂಜಾ ವಸ್ತ್ರಾಕರ್ ಮತ್ತು ಯಾಸ್ತಿಕಾ ಭಾಟಿಯಾ ಅವರಂತಹ ಬಲಿಷ್ಠ ಆಟಗಾರ್ತಿಯರ ಬಳಗವನ್ನು ಹೊಂದಿದೆ.

ಮತ್ತೊಂದೆಡೆ, ಬೆತ್ ಮೂನಿ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡದಲ್ಲಿ ವೆಸ್ಟ್ ಇಂಡೀಸ್‌ನ ಡಿಯಾಂಡ್ರಾ ಡಾಟಿನ್, ಆಸ್ಟ್ರೇಲಿಯಾದ ಆಶ್ಲೀಗ್ ಗಾರ್ಡ್ನರ್, ಭಾರತದ ಆಲ್‌ರೌಂಡರ್ ಸ್ನೇಹ್ ರಾಣಾ ಮತ್ತು ಹರ್ಲೀನ್ ಡಿಯೋಲ್ ಅವರಂತಹ ಆಟಗಾರ್ತಿಯರನ್ನು ಒಳಗೊಂಡಿದೆ.

WPL 2023: Gujarat Giants vs Mumbai Indians Inaugural Match Probable Playing 11 And Match Details

WPL 2023: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ ಪಂದ್ಯದ ವಿವರ

ಸ್ಥಳ ಮತ್ತು ಸಮಯ: ಡಿವೈ ಪಾಟೀಲ್ ಕ್ರೀಡಾಂಗಣ, ನವಿ ಮುಂಬೈ. ಪಂದ್ಯವು ಶನಿವಾರ, ಮಾರ್ಚ್ 4ರಂದು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ: ಮಹಿಳಾ ಪ್ರೀಮಿಯರ್ ಲೀಗ್ 2023ರ ಮೊದಲ ಪಂದ್ಯ ಭಾರತದಲ್ಲಿ Sports18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದ್ದರೆ, JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.

ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ ಸಂಭಾವ್ಯ ಆಡುವ 11ರ ಬಳಗ

ಮುಂಬೈ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮನ್‌ಜೋತ್ ಕೌರ್, ಹೇಲಿ ಮ್ಯಾಥ್ಯೂಸ್, ಯಾಸ್ತಕಾ ಭಾಟಿಯಾ, ನ್ಯಾಟ್ ಸಿವರ್ ಬ್ರಂಟ್, ಕ್ಲೋಯ್ ಟ್ರಯಾನ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಸೋನಮ್ ಯಾದವ್, ಸೈಕಾ ಇಶಾಕ್.

ಗುಜರಾತ್ ಜೈಂಟ್ಸ್ ಮಹಿಳಾ ತಂಡ: ಬೆತ್ ಮೂನಿ (ನಾಯಕಿ), ಸಬ್ಬಿನೇನಿ ಮೇಘನಾ, ಡಿಯಾಂಡ್ರಾ ಡಾಟಿನ್, ಸೋಫಿ ಡಂಕ್ಲೆ, ಆಶ್ಲೀಗ್ ಗಾರ್ಡ್ನರ್, ಹರ್ಲೀನ್ ಡಿಯೋಲ್, ಸುಷ್ಮಾ ವರ್ಮಾ, ಸ್ನೇಹ್ ರಾಣಾ, ಮಾನ್ಸಿ ಜೋಶಿ, ತನುಜಾ ಕನ್ವರ್, ಮೋನಿಕಾ ಪಟೇಲ್.

Story first published: Friday, March 3, 2023, 18:00 [IST]
Other articles published on Mar 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+