WPL2023: ಚೊಚ್ಚಲ ಮಹಿಳಾ ಐಪಿಎಲ್ ಆರಂಭದ ದಿನಾಂಕ, ಸ್ಥಳ ಖಚಿತಪಡಿಸಿದ ಅರುಣ್ ಧುಮಾಲ್

2023ರ ಮಹಿಳಾ ಪ್ರೀಮಿಯರ್ ಲೀಗ್ (WPL 2023)ನ ಬಹುನಿರೀಕ್ಷಿತ ಉದ್ಘಾಟನಾ ಪಂದ್ಯಾವಳಿಯು ಮಾರ್ಚ್ 4ರಿಂದ 26ರವರೆಗೆ ಮುಂಬೈನಲ್ಲಿ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಖಚಿತಪಡಿಸಿದ್ದಾರೆ.
ಮುಂಬೈನ ಬ್ರೆಬೋರ್ನ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ಒಡೆತನದ ಫ್ರಾಂಚೈಸಿಗಳ ನಡುವೆ ಪಂದ್ಯಾವಳಿಯ ಮೊದಲ ಪಂದ್ಯ ನಡೆಯುವುದರೊಂದಿಗೆ ಎಲ್ಲಾ ಪಂದ್ಯಗಳನ್ನು ಈ ಎರಡು ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ ಎಂದಿದ್ದಾರೆ.
ಇನ್ನು ಇದಕ್ಕೂ ಮುನ್ನ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಇದೇ ಫೆಬ್ರವರಿ 13ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ.

""ಮಹಿಳಾ ಪ್ರೀಮಿಯರ್ ಲೀಗ್ ಮಾರ್ಚ್ 4ರಿಂದ 26ರವರೆಗೆ ಮುಂಬೈನಲ್ಲಿ ನಡೆಯಲಿದೆ,'' ಎಂದು ಐಪಿಎಲ್ ಅಧ್ಯಕ್ಷರಾಗಿರುವ ಅರುಣ್ ಧುಮಾಲ್ ಸೋಮವಾರ ಪಿಟಿಐಗೆ ತಿಳಿಸಿದರು.
ಭಾರತ ಮಹಿಳಾ ತಂಡವು ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಟಿ20 ವಿಶ್ವಕಪ್ ಪಂದ್ಯದ ಒಂದು ದಿನದ ನಂತರ ಮುಂಬೈನಲ್ಲಿ ಫೆಬ್ರವರಿ 13ರಂದು ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಅರುಣ್ ಧುಮಾಲ್ ಖಚಿತಪಡಿಸಿದರು.
ಒಟ್ಟು ಐದು ತಂಡಗಳು 4669.99 ಕೋಟಿ ರೂ.ಗಳಿಗೆ ಬಿಡ್ ಹಕ್ಕು ಪಡೆದಿರುವುದು ಮತ್ತು ಬಿಸಿಸಿಐ 951 ಕೋಟಿ ರೂ.ಗೆ ಪಂದ್ಯಾವಳಿ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡುವುದರೊಂದಿಗೆ, ಇಂಡಿಯನ್ ಪ್ರೀಮಿಯರ್ ಲೀಗ್‌ನ ನಂತರ ಮಹಿಳಾ ಪ್ರೀಮಿಯರ್ ಲೀಗ್ (WPL) ವಿಶ್ವದ ಎರಡನೇ ಅತಿದೊಡ್ಡ ಟಿ20 ಲೀಗ್ ಎಂಬ ಹೆಗ್ಗಳಿಕೆ ಪಡೆದಿದೆ.

ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ಈಗಾಗಲೇ ಈ ಮೂರು ಫ್ರಾಂಚೈಸಿಗಳು ಪುರುಷರ ಐಪಿಎಲ್ ತಂಡಗಳನ್ನು ಹೊಂದಿದ್ದಾರೆ. ಈವರನ್ನು ಹೊರತುಪಡಿಸಿ, ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ (ಲಕ್ನೋ ತಂಡ) ಮತ್ತು ಅದಾನಿ ಸ್ಪೋರ್ಟ್ಸ್‌ಲೈನ್ (ಗುಜರಾತ್ ಜೈಂಟ್ಸ್ ತಂಡ) ಹೊಸ ಫ್ರಾಂಚೈಸಿಗಳಾಗಿವೆ.
ಸುಮಾರು 1500 ದೇಶ-ವಿದೇಶದ ಆಟಗಾರ್ತಿಯರು ಮಹಿಳಾ ಪ್ರೀಮಿಯರ್ ಲೀಗ್‌ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಮತ್ತು ಅಂತಿಮ ಪಟ್ಟಿಯನ್ನು ಈ ವಾರದ ಕೊನೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಫೆಬ್ರವರಿ 13ರಂದು ನಡೆಯಲಿರುವ ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ತಂಡವು 12 ಕೋಟಿ ರೂ.ಗಳ ಪರ್ಸ್ ಮೌಲ್ಯವನ್ನು ಹೊಂದಿರುತ್ತದೆ. ಪ್ರತಿ ತಂಡವು ಕನಿಷ್ಠ 15 ಆಟಗಾರರು ಮತ್ತು ಗರಿಷ್ಠ 18 ಆಟಗಾರರನ್ನು ಖರೀದಿಸಬೇಕಾಗುತ್ತದೆ.
ಸಹವರ್ತಿ ಸದಸ್ಯ ರಾಷ್ಟ್ರದಿಂದ ಓರ್ವ ಆಟಗಾರ್ತಿಯನ್ನು ಒಳಗೊಂಡಂತೆ ಐದು ವಿದೇಶಿ ಆಟಗಾರ್ತಿಯರಿಗೆ ಆಡುವ 11ರ ಬಳಗದಲ್ಲಿ ಅವಕಾಶ ನೀಡಬೇಕಾಗುತ್ತದೆ. ಪ್ರತಿ ತಂಡದಲ್ಲಿ ಏಳು ವಿದೇಶಿ ಸ್ಲಾಟ್‌ಗಳಿವೆ.
ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 22 ಪಂದ್ಯಗಳನ್ನು ಆಡಲಾಗುತ್ತದೆ. ಲೀಗ್ ಹಂತದಲ್ಲಿ ಅಗ್ರ ಶ್ರೇಯಾಂಕದ ತಂಡವು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್ ಸ್ಥಾನಕ್ಕಾಗಿ ಸೆಣಸಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications