Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಗುಜರಾತ್ ಜೈಂಟ್ಸ್‌ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್; ಸತತ 5 ಗೆಲುವು ಪಡೆದು ಪ್ಲೇಆಫ್ ತಲುಪಿದ ಕೌರ್ ಪಡೆ

WPL 2023: Mumbai Indians Beat Gujarat Giants By 55 Runs In WPL

ಮಂಗಳವಾರ, ಮಾರ್ಚ್ 14ರಂದು ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡವು ಗುಜರಾತ್ ಜೈಂಟ್ಸ್ ತಂಡದ ವಿರುದ್ಧ 55 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಮುಂಬೈ ಇಂಡಿಯನ್ಸ್ ಮಹಿಳಾ ತಂಡ ನೀಡಿದ್ದ 163 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 107 ರನ್ ಕಲೆಹಾಕಲಷ್ಟೇ ಶಕ್ತವಾಗಿ, 55 ರನ್‌ಗಳ ಅಂತರದಿಂದ ಸೋತಿತು.

ಈ ಮೂಲಕ ಸತತ 5 ಗೆಲುವು ದಾಖಲಿಸಿದ ಹರ್ಮನ್‌ಪ್ರೀತ್ ಕೌರ್ ಬಳಗ 2023ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಪ್ಲೇಆಫ್ ತಲುಪಿದ ಮೊದಲ ತಂಡವಾಯಿತು. ಗುಜರಾತ್ ಜೈಂಟ್ಸ್ ಆಡಿದ 5 ಪಂದ್ಯಗಳಲ್ಲಿ ನಾಲ್ಕು ಸೋಲು ಮತ್ತು ಒಂದು ಗೆಲುವು ಕಂಡಿದೆ.

ಬ್ಯಾಟಿಂಗ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಯಾರೊಬ್ಬರೂ ಮುಂಬೈ ಇಂಡಿಯನ್ಸ್ ಬೌಲಿಂಗ್‌ಗೆ ಪ್ರತಿರೋಧ ಒಟ್ಟಲು ವಿಫಲರಾದರು. ಇನ್ನಿಂಗ್ಸ್ ಆರಂಭಿಸಿದ ಸೋಫಿಯಾ ಡಂಕ್ಲೆ ಮೊದ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದರು.

WPL 2023: Mumbai Indians Beat Gujarat Giants By 55 Runs In WPL

ಸಬ್ಬಿನೇನಿ ಮೇಘನಾ 16 ರನ್ ಗಳಿಸಿ ಔಟಾದರೆ, ಹರ್ಲೀನ್ ಡಿಯೋಲ್ 22 ರನ್ ಗಳಿಸಿ ವಿಕೆಟ್ ನೀಡಿದರು. ಅನ್ನಾಬೆಲ್ ಸದರ್ಲ್ಯಾಂಡ್ ಸೊನ್ನೆ ಸುತ್ತಿದರೆ, ಆಶ್ಲೀಗ್ ಗಾರ್ಡ್ನರ್ 8 ರನ್ ಗಳಿಸಿದರು. ದಯಾಳನ್ ಹೇಮಲತಾ 6 ರನ್ ಗಳಿಸಿ ಪೆವಿಲಿಯನ್ ಸೇರಿದರು.

ಇನ್ನು ನಾಯಕಿ ಸ್ನೇಹ್ ರಾಣಾ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕಿಮ್ ಗಾರ್ಥ್ 8 ಗಳಿಸಿ ಔಟಾದರು. ತನುಜಾ ಕನ್ವರ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ದಾರಿ ಹಿಡಿದರು. ಕೊನೆಯಲ್ಲಿ ಸುಷ್ಮಾ ವರ್ಮಾ 18 ರನ್ ಮತ್ತು ಮಾನ್ಸಿ ಜೋಶಿ 7 ರನ್ ಗಳಿಸಿದರು.

WPL 2023: Mumbai Indians Beat Gujarat Giants By 55 Runs In WPL

ಬೌಲಿಂಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ನ್ಯಾಟ್ ಸೀವರ್-ಬ್ರಂಟ್ 4 ಓವರ್‌ಗಳಲ್ಲಿ 27 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರೆ, ಹೇಲಿ ಮ್ಯಾಥ್ಯೂಸ್ 4 ಓವರ್‌ಗಳಲ್ಲಿ 23 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಅಮೇಲಿಯಾ ಕೆರ್ 4 ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್ ಕಿತ್ತರೆ, ಉಳಿದ ಒಂದು ವಿಕೆಟ್ ಇಸ್ಸಿ ವಾಂಗ್ ಪಾಲಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿತ್ತು.

ಮುಂಬೈ ಇಂಡಿಯನ್ಸ್ ತಂಡದ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್ ಸ್ಫೋಟಕ ಅರ್ಧಶತಕ ಬಾರಿಸಿದರು. 30 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 51 ರನ್ ಬಾರಿಸಿದರು. ಆರಂಭಿಕ ಬ್ಯಾಟರ್ ಯಾಸ್ತಿಕಾ ಭಾಟಿಯಾ 37 ಎಸೆತಗಳಲ್ಲಿ 44 ರನ್ ಗಳಿಸಿದರು.

ಉಳಿದಂತೆ ನ್ಯಾಟ್ ಸೀವರ್-ಬ್ರಂಟ್ 36 ರನ್, ಅಮೇಲಿಯಾ ಕೆರ್ 19 ರನ್ ಗಳಿಸಿ ತಂಡದ ಮೊತ್ತ 160 ರನ್‌ಗಳ ಗಡಿ ದಾಟಲು ನೆರವಾದರು.

ಬೌಲಿಂಗ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಪರ ಆಶ್ಲೀಗ್ ಗಾರ್ಡ್ನರ್ 4 ಓವರ್‌ಗಳಲ್ಲಿ 32 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಉಳಿದಂತೆ ಕಿಮ್ ಗಾರ್ಥ್, ಸ್ನೇಹ್ ರಾಣಾ ಮತ್ತು ತನುಜಾ ಕನ್ವರ್ ತಲಾ ಒಂದೊಂದು ವಿಕೆಟ್ ಪಡೆದರು.

Story first published: Tuesday, March 14, 2023, 23:18 [IST]
Other articles published on Mar 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+