For Quick Alerts
ALLOW NOTIFICATIONS  
For Daily Alerts
 

WPL 2023: RCB vs MI : ಹೈ-ವೋಲ್ಟೇಜ್ ಪಂದ್ಯ; ಸಂಭಾವ್ಯ ಆಡುವ ಬಳಗ, ಲೈವ್ ಸ್ಟ್ರೀಮಿಂಗ್

WPL 2023: RCB vs Mumbai Indians High-Voltage Match; Probable Playing 11 And Live Streaming Details

ಬಹುನಿರೀಕ್ಷಿತ 2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL) ಶನಿವಾರ, ಮಾರ್ಚ್ 4ರಿಂದ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ 143 ರನ್‌ಗಳ ಅಮೋಘ ಗೆಲುವು ಸಾಧಿಸಿತು.

ಇನ್ನು ಭಾನುವಾರ, ಮಾರ್ಚ್ 5ರಂದು ನಡೆದ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 60 ರನ್‌ಗಳ ಹೀನಾಯ ಸೋಲಿನೊಂದಿಗೆ ಅಭಿಯಾನ ಆರಂಭಿಸಿತು.

ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ 30 ಎಸೆತಗಳಲ್ಲಿ 65 ಮತ್ತು ಅಮೆಲಿಯಾ ಕೆರ್ ಅವರ 24 ಎಸೆತಗಳಲ್ಲಿ ಅಜೇಯ 45 ರನ್‌ಗಳ ನೆರವಿನ ಮೂಲಕ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 207 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 224 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್‌ಗಳನ್ನು ಗಳಿಸಲಷ್ಟೆ ಶಕ್ತವಾಗಿ, 60 ರನ್‌ಗಳಿಂದ ಸೋಲು ಕಂಡಿತು. ಸ್ಮೃತಿ ಮಂಧಾನ 23 ಎಸೆತಗಳಲ್ಲಿ 35 ರನ್ ಗಳಿಸಿದರು.

WPL 2023: RCB vs Mumbai Indians High-Voltage Match; Probable Playing 11 And Live Streaming Details

ಇದೀಗ, ಸೋಮವಾರ, ಮಾರ್ಚ್ 6ರಂದು ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಮತ್ತು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಮಹಿಳಾ ತಂಡಗಳು ಹೈ-ವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡಲಿವೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಲು ಎದುರು ನೋಡುತ್ತಿದ್ದರೆ, ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಸೋಲಿನಿಂದ ಪುಟಿದೆದ್ದು, ಗೆಲುವಿನೊಂದಿಗೆ ಮರಳಲು ಕಾತರವಾಗಿದೆ.

WPL 2023: ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ಪಂದ್ಯದ ವಿವರ
ದಿನಾಂಕ ಮತ್ತು ಸಮಯ: ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ಪಂದ್ಯವು ಸೋಮವಾರ, ಮಾರ್ಚ್ 5ರಂದು ಭಾರತೀಯ ಕಾಲಮಾನ ಸಂಜೆ 7.30 ಆರಂಭವಾಗಲಿದೆ.

ಸ್ಥಳ: ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ಪಂದ್ಯವು ಮುಂಬೈನ ಬ್ರೆಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ: ಮಹಿಳಾ ಪ್ರೀಮಿಯರ್ ಲೀಗ್ 2023ರ ಮೊದಲ ಪಂದ್ಯ ಭಾರತದಲ್ಲಿ Sports18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದ್ದರೆ, JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.

WPL 2023: RCB vs Mumbai Indians High-Voltage Match; Probable Playing 11 And Live Streaming Details

ಮುಂಬೈ ಇಂಡಿಯನ್ಸ್ vs ಆರ್‌ಸಿಬಿ ಮಹಿಳಾ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್(ನಾಯಕಿ), ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ(ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್, ಹುಮೈರಾ ಕಾಜಿ, ಇಸ್ಸಿ ವಾಂಗ್, ಜಿಂತಿಮಣಿ ಕಲಿತಾ, ಸೈಕಾ ಇಶಾಕ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ(ನಾಯಕಿ), ಸೋಫಿ ಡಿವೈನ್, ಹೀದರ್ ನೈಟ್, ದಿಶಾ ಕಸತ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಆಶಾ ಶೋಬನಾ, ಪ್ರೀತಿ ಬೋಸ್, ಮೇಗನ್ ಶುಟ್, ರೇಣುಕಾ ಸಿಂಗ್ ಠಾಕೂರ್.

ಮುಂಬೈ ಇಂಡಿಯನ್ಸ್ vs ಆರ್‌ಸಿಬಿ ಪೂರ್ಣ ತಂಡಗಳು
ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ನ್ಯಾಟ್ ಸಿವರ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸ್ಸಿ ವಾಂಗ್, ಅಮನ್‌ಜೋತ್ ಕೌರ್, ಧಾರಾ ಗುಜ್ಜರ್, ಸೈಕಾ ಇಶಾಕ್, ಹೇಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯಾನ್, ಹುಮೈರಾ ಕಾಜಿ, ಕೋಮಲ್ ಝಂಝಾದ್, ಪ್ರಿಯಾಂಕಾ ಬಾಲಾ, ಸೋನಮ್ ಯಾದವ್, ನೀಲಂ ಬಿಶ್ತ್, ಜಿಂತಾಮಣಿ ಕಲಿತಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ರೇಣುಕಾ ಸಿಂಗ್, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶಿಬಾನಾ, ಹೀದರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪ್ರೀತಿ ಬೋಸ್, ಪೂನಂ ಖೇಮ್ನಾರ್, ಮೇಗನ್ ಶುಟ್, ಸಹನಾ ಪವಾರ್.

Story first published: Monday, March 6, 2023, 2:55 [IST]
Other articles published on Mar 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+