Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ವಿರಾಟ್ ಕೊಹ್ಲಿಯೊಂದಿಗೆ ಹೋಲಿಕೆ ಬಗ್ಗೆ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಹೇಳಿದ್ದೇನು?

WPL 2023: RCB Womens Skipper Smriti Mandhana Reaction About Being Compared With Virat Kohli

ಬಹುನಿರೀಕ್ಷಿತ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL) ಶನಿವಾರ, ಮಾರ್ಚ್ 4ರಿಂದ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಅಮೋಘ ಗೆಲುವು ಸಾಧಿಸಿದೆ.

ಇನ್ನು ಭಾನುವಾರ, ಮಾರ್ಚ್ 5ರಂದು ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ತನ್ನ ಅಭಿಯಾನ ಪ್ರಾರಂಭಿಸಲಿದೆ.

ಪಂದ್ಯಕ್ಕೂ ಮುನ್ನ ಮಾತನಾಡಿರುವ ಸ್ಮೃತಿ ಮಂಧಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಹೋಲಿಕೆಯ ಕುರಿತು ಮಾತನಾಡಿದ್ದಾರೆ.

ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಹೋಲಿಕೆ ಮಾಡುವುದನ್ನು ನಾನು ಇಷ್ಟಪಡುವುದಿಲ್ಲ ಎಂದಿರುವ ಸ್ಮೃತಿ ಮಂಧಾನಾ, ವಿರಾಟ್ ಕೊಹ್ಲಿ ಸಾಧಿಸಿರುವುದಕ್ಕೆ ನಾನು ಎಲ್ಲಿಯೂ ಹತ್ತಿರದಲ್ಲಿಲ್ಲ ಎಂದು ಹೇಳಿದ್ದಾರೆ.

WPL 2023: RCB Womens Skipper Smriti Mandhana Reaction About Being Compared With Virat Kohli

ಸ್ಮೃತಿ ಮಂಧಾನ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಮ್ಮ ಭಾರತ ಮತ್ತು ಆರ್‌ಸಿಬಿ ತಂಡಗಳ ನಂ.18 ಜರ್ಸಿ ಸಂಖ್ಯೆಯೊಂದಿಗೆ ಆಡುತ್ತಿದ್ದಾರೆ. ಕಳೆದ ವರ್ಷ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ, ಜನಪ್ರಿಯ ಫ್ರಾಂಚೈಸಿಗೆ ಸ್ಮೃತಿ ಮಂಧಾನ ಮೂಲಕ ಹೊಸ ಜೆರ್ಸಿ ನಂ.18 ನಾಯಕಿ ಸಿಕ್ಕಿದ್ದಾಳೆ.

"ನಾನು ವಿರಾಟ್ ಕೊಹ್ಲಿಯೊಂದಿಗೆ ಹೋಲಿಕೆಯನ್ನು ಇಷ್ಟಪಡುವುದಿಲ್ಲ. ಏಕೆಂದರೆ, ಕ್ರಿಕೆಟ್‌ನಲ್ಲಿ ಅವರು ಸಾಧಿಸಿರುವುದು ಅದ್ಭುತವಾಗಿದೆ. ನಾನು ಆ ಮಟ್ಟವನ್ನು ತಲುಪುತ್ತೇನೆ ಎಂದು ನಾನು ಭಾವಿಸುತ್ತೇನೆ. ಆದರೆ ಸದ್ಯ ನಾನು ಎಲ್ಲಿಯೂ ಹತ್ತಿರದಲ್ಲಿಲ್ಲ. ಆರ್‌ಸಿಬಿ ಫ್ರಾಂಚೈಸಿಗಾಗಿ ಅವರು ಏನು ಸಾಧಿಸಿದ್ದಾರೆ, ಅದನ್ನು ನಾನು ಮಾಡಲು ಪ್ರಯತ್ನಿಸುತ್ತೇನೆ," ಎಂದು ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಮುಂಬೈನಲ್ಲಿ ತಿಳಿಸಿದರು.

ಐಪಿಎಲ್‌ನ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಅವರು ಮಹಿಳಾ ಪ್ರೀಮಿಯರ್ ಲೀಗ್‌ನ ಆರ್‌ಸಿಬಿ ಫ್ರಾಂಚೈಸಿ ನಾಯಕಿಯಾಗಿ ಸ್ಮೃತಿ ಮಂಧಾನ ಅವರನ್ನು ಘೋಷಿಸಿದರು. ಸ್ಮೃತಿ ಮಂಧಾನರನ್ನು ಪರಿಚಯಿಸಿದ ವಿರಾಟ್ ಕೊಹ್ಲಿ, ವಿಶ್ವದ ಅತ್ಯುತ್ತಮ ತಂಡ ಮತ್ತು ಅತ್ಯುತ್ತಮ ಅಭಿಮಾನಿಗಳ ಬೆಂಬಲವನ್ನು ಸ್ಮೃತಿ ಮಂಧಾನಾ ಪಡೆಯುತ್ತಾರೆ ಎಂದು ಹೇಳಿದರು.

WPL 2023: RCB Womens Skipper Smriti Mandhana Reaction About Being Compared With Virat Kohli

"ಹಾಯ್.. ಆರ್‌ಸಿಬಿ ಅಭಿಮಾನಿಗಳೇ, ಇಂದು ವಿಶೇಷವಾದ ಘೋಷಣೆಯನ್ನು ಮಾಡಲು ಸಂತೋಷವಾಗಿದ್ದು, ಅದಕ್ಕೆ ಕಾರಣ ನಿಮ್ಮ ನೆಚ್ಚಿನ ಜರ್ಸಿ ನಂ.18 ಆಗಿದೆ. ಕಳೆದ ದಶಕದಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸಿರುವುದು ನನ್ನ ವೃತ್ತಿಜೀವನದ ಅತ್ಯಂತ ಆನಂದದಾಯಕ ಮತ್ತು ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. ನಾಯಕ ಪಾತ್ರ ಕೇವಲ ತಂಡದ ನಾಯಕನಲ್ಲ. ಅದು ಸಂಸ್ಕೃತಿಯನ್ನು ಸೃಷ್ಟಿಸುವ ಮತ್ತು ತನ್ನ ಸುತ್ತಲಿರುವ ಪ್ರತಿಯೊಬ್ಬರ ಗೌರವವನ್ನು ಗಳಿಸುವ ಮೂಲಕ ತಂಡವನ್ನು ಮುಂದಕ್ಕೆ ಸಾಗಿಸುವ ಜವಾಬ್ದಾರಿ," ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದರು.

ಸ್ಮೃತಿ ಮಂಧಾನಗೆ ನಾಯಕತ್ವದ ಜವಾಬ್ದಾರಿ ಇದೇನು ಹೊಸದಲ್ಲ. ಈ ಮೊದಲು ಮಹಾರಾಷ್ಟ್ರ ತಂಡವನ್ನು ದೇಶೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ ಮತ್ತು ಚಾಲೆಂಜರ್ ಟ್ರೋಫಿಯಲ್ಲಿ ನಾಯಕತ್ವ ನಿಭಾಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಉಪನಾಯಕಿಯಾಗಿ ಬೆಂಬಲ ನೀಡಿದ್ದಾರೆ. ಆರ್‌ಸಿಬಿಯಲ್ಲಿ ನನ್ನ ಎಲ್ಲಾ ಅನುಭವಗಳನ್ನು ಬಳಸುತ್ತೇನೆ ಎಂದು ಎಡಗೈ ಆಟಗಾರ್ತಿ ಸ್ಮೃತಿ ಮಂಧಾನ ತಿಳಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಸಂಭಾವ್ಯ ಆಡುವ 11ರ ಬಳಗ
ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀಥರ್ ನೈಟ್, ದಿಶಾ ಕಸತ್, ರಿಚಾ ಘೋಷ್ (ವಿಕೆಟ್ ಕೀಪರ್), ಕನಿಕಾ ಅಹುಜಾ, ಮೇಗನ್ ಶುಟ್, ಪ್ರೀತಿ ಬೋಸ್, ರೇಣುಕಾ ಠಾಕೂರ್, ಆಶಾ ಶೋಬನಾ

Story first published: Sunday, March 5, 2023, 15:08 [IST]
Other articles published on Mar 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+