Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಆರ್‌ಸಿಬಿ vs ಯುಪಿ ವಾರಿಯರ್ಸ್; ಸೋಲಿನ ಸರಪಳಿ ಕಡಿದುಕೊಳ್ಳುತ್ತಾ ಚಾಲೆಂಜರ್ಸ್: ಸಂಭಾವ್ಯ ತಂಡ

WPL 2023; Royal Challengers Bangalore vs UP Warriorz, match 13, probable XI and pitch report

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತವಾಗಿ ವೈಫಲ್ಯ ಅನುಭವಿಸಿದ್ದು ಮುಖಭಂಗಕ್ಕೆ ಒಳಗಾಗಿದೆ. ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಕನಿಷ್ಠ ಒಂದು ಗೆಲುವು ಸಾಧಿಸಲು ಕೂಡ ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ತಂಡಕ್ಕೆ ಅಸಾಧ್ಯವಾಗಿದೆ. ಮೊದಲ ಗೆಲುವಿನ ಹಂಬಲದಲ್ಲಿರುವ ಆರ್‌ಸಿಬಿ ಪಡೆಗೆ ಇಂದು ಯುಪಿ ವಾರಿಯರ್ಸ್ ಎದುರಾಳಿಯಾಗಿದ್ದು ಈ ಸವಾಲನ್ನು ಯಾವ ರೀತಿಯ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಯುಪಿ ವಾರಿಯರ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಗೆದ್ದು ಎರಡು ಪಂದ್ಯಗಳಲ್ಲಿ ಸೋಲಿನ ರುಚಿ ಕಂಡಿದೆ. ಪ್ಲೇಆಫ್‌ಗೇರುವ ಸ್ಪರ್ಧೆಯಲ್ಲಿ ಮುಂದುವರಿಯುವ ದೃಷ್ಟಿಯಿಂದ ಈ ಪಂದ್ಯದಲ್ಲಿಯೂ ಗೆದ್ದು ಅಂಕ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಲಿದೆ.

ಇನ್ನು ಯುಪಿ ವಾರಿಯರ್ಸ್ ಹಾಗೂ ಆರ್‌ಸಿಬಿ ತಂಡಗಳು ಈ ಹಿಂದೆ ಮೊದಲ ಮುಖಾಮುಖಿಯಲ್ಲಿ ಸೆಣೆಸಾಟ ನಡೆಸಿದ್ದಾಗ ಆರ್‌ಸಿಬಿ ತಮಡದ ವಿರುದ್ಧ 10 ವಿಕೆಟ್‌ಗಳ ಅಂತರದ ಭಾರೀ ಗೆಲುವ ಸಾಧಿಸಿತ್ತು ಯುಪಿ ವಾರಿಯರ್ಸ್. ಆ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡು ವಿಭಾಗ ಕೂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಇದೀಗ ಎರಡನೇ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡದ ಪ್ರದರ್ಶನ ಕುತೂಹಲ ಮೂಡಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಈ ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು ಜಿಯೋ ಸಿನಿಮಾದಲ್ಲಿ ಪಂದ್ಯದ ನೇರಪ್ರಸಾರವಿರಲಿದೆ.

ಪಿಚ್ ರಿಪೋರ್ಟ್, ಹವಾಮಾನ ವರದಿ: ಡಿವೈ ಪಾಟೀಲ್ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಉತ್ತಮವಾಗಿ ನೆರವಾಗಲಿದ್ದು ದೊಡ್ಡ ಮೊತ್ತದ ಹೋರಾಟ ನಡೆಯುವ ಸಾಧ್ಯತೆಯಿದೆ. 170ಕ್ಕಿಂತ ಹೆಚ್ಚಿನ ಸ್ಕೋರ್ ಇಲ್ಲಿ ಉತ್ತಮ ಮೊತ್ತವಾಗಿರಲಿದೆ. ಹೆಚ್ಚಿನ ಪಮದ್ಯಗಳು ನಡೆಯುತ್ತಿರುವ ಕಾರಣ ಟೂರ್ನಿಯ ಆರಂಭಕ್ಕೆ ಹೋಲಿಸಿದರೆ ಪಿಚ್ ವೇಗವನ್ನು ಕಳೆದುಕೊಂಡಿಡ್ಡು ಬ್ಯಾಟಿಂಗ್‌ಗೆ ಈ ಹಿಂದಿನಷ್ಟು ಸರಾಗವಾಗಿ ನೆರವು ದೊರೆಯಲಾರದು. ಇದರ ಲಾಭವನ್ನು ಬೌಲಿಂಗ್ ವಿಭಾಗ ಪಡೆಯಬಹುದು.

ಹವಾಮಾನ ವರದಿ: ಇನ್ನು ಈ ಪಂದ್ಯದ ಸಂದರ್ಭದಲ್ಲಿ ಮಳೆ ಅಡ್ಡಿಯುಂಟು ಮಾಡುವ ಯಾವುದೇ ಸಾಧ್ಯತೆಗಳು ಇಲ್ಲ. ನವಿ ಮುಂಬೈನಲ್ಲಿ ಇಂದು 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಾಗಿದ್ದು 26 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಾಗಿರಲಿದೆ.

ಸತತ ಐದನೇ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್: ಗೆಲುವಿನ ಮಂತ್ರ ವಿವರಿಸಿದ ನಾಯಕಿ ಕೌರ್
ಯುಪಿ ವಾರಿಯರ್ಸ್ ಸಂಭಾವ್ಯ ಆಡುವ ಬಳಗ: ದೇವಿಕಾ ವೈದ್ಯ, ಅಲಿಸ್ಸಾ ಹೀಲಿ (ನಾಯಕಿ & ವಿಕೆಟ್ ಕೀಪರ್), ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್/ಗ್ರೇಸ್ ಹ್ಯಾರಿಸ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

ಆರ್‌ಸಿಬಿ ಸಂಭಾವ್ಯ ಆಡುವ ಬಳಗ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (wk), ಶ್ರೇಯಾಂಕಾ ಪಾಟೀಲ್, ದಿಶಾ ಕಸತ್/ಕನಿಕಾ ಅಹುಜಾ, ಮೇಗನ್ ಶುಟ್, ಆಶಾ ಶೋಬನಾ/ಸಹನಾ ಪವಾರ್/ಪೂನಂ ಖೇಮ್ನಾರ್, ರೇಣುಕಾ ಠಾಕೂರ್, ಪ್ರೀತಿ ಬೋಸ್

Story first published: Wednesday, March 15, 2023, 11:50 [IST]
Other articles published on Mar 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+