Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: RCB ಮಹಿಳಾ ತಂಡಕ್ಕೆ ಮುಖ್ಯ ಕೋಚ್ ಆಗಿ ಬೆನ್ ಸಾಯರ್ ನೇಮಕ; ಉಳಿದ ಸಿಬ್ಬಂದಿಗಳ ಪಟ್ಟಿ

WPL 2023: Royal Challengers Bangalore Womens Team Coaches And Support Staffs Details

2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ಸೋಮವಾರ, ಫೆಬ್ರವರಿ 13ರಂದು ನಡೆದ ಮಹಿಳಾ ಆಟಗಾರ್ತಿಯರ ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡ ಬಲಿಷ್ಠವಾಗಿ ಕಾಣಿಸುತ್ತಿದೆ.

ಹರಾಜಿನಲ್ಲಿ ಮೊದಲ ಆಟಗಾರ್ತಿಯಾದ ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಅವರನ್ನು 3.40 ಕೋಟಿ ರೂ.ಗೆ ಖರೀದಿಸುವ ಮೂಲಕ ಬಿಡ್ಡಿಂಗ್‌ನಲ್ಲಿ ಮೇಲುಗೈ ಸಾಧಿಸಿತು. ಸ್ಮೃತಿ ಮಂಧಾನ ಜೊತೆಗೆ ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್ ಮತ್ತು ರಿಚಾ ಘೋಷ್ ಅವರನ್ನು ಸಹ ದೊಡ್ಡ ಮೊತ್ತಕ್ಕೆ ಆಯ್ಕೆ ಮಾಡಿಕೊಂಡಿದೆ.

ಇದೀಗ ಹರಾಜು ಪ್ರಕ್ರಿಯೆಯ ಎರಡು ದಿನಗಳ ನಂತರ, ಆರ್‌ಸಿಬಿ ಮಹಿಳಾ ತಂಡವು ತನ್ನ ಕೋಚಿಂಗ್ ಸಿಬ್ಬಂದಿಯನ್ನು ನೇಮಕ ಮಾಡಿದೆ. ಇಲ್ಲಿ ಮಹಿಳಾ ಮತ್ತು ಪುರುಷ ಸಿಬ್ಬಂದಿಯ ಮಿಶ್ರಣ ಹೊಂದಿದೆ.

ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್‌ ತಂಡದ ಕೋಚ್ ಆಗಿರುವ ಬೆನ್ ಸಾಯರ್ ಆರ್‌ಸಿಬಿ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರೆ, ಭಾರತದ ಮಾಜಿ ಕ್ರಿಕೆಟರ್ ವನಿತಾ ವಿಆರ್ ಅವರನ್ನು ಶಿಸ್ತು ಮತ್ತು ಫೀಲ್ಡಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.

ಇನ್ನು ಕರ್ನಾಟಕದ ಜನಪ್ರಿಯ ಕೋಚ್ ಆರ್ ಎಕ್ಸ್ ಮುರಳಿ (RX Muruli) ಅವರನ್ನು ಆರ್‌ಸಿಬಿ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಸದ್ಯ ಮುರಳಿ ಅವರು ಮಯಾಂಕ್ ಅಗರ್ವಾಲ್ ಮತ್ತು ಮನೀಶ್ ಪಾಂಡೆ ಅವರ ಕೋಚ್ ಆಗಿದ್ದಾರೆ. ಈ ಹಿಂದೆ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರೊಂದಿಗೂ ಕೆಲಸ ಮಾಡಿದ ಅನುಭವವಿದೆ.

ವನಿತಾ ವಿಆರ್ ಅವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹರಾಜಿನ ಭಾಗವಾಗಿದ್ದರು. ಹರಾಜಿಗೂ ಮುನ್ನ ಆರ್‌ಸಿಬಿ ಮಹಿಳಾ ತಂಡಕ್ಕಾಗಿ 100 ಆಟಗಾರರ ಕಿರುಪಟ್ಟಿಯನ್ನು ಸಿದ್ಧಪಡಿಸಿದ್ದರು.

ಆರ್‌ಸಿಬಿ ಮಹಿಳಾ ಕೋಚಿಂಗ್ ಸಿಬ್ಬಂದಿ

ಮುಖ್ಯ ಕೋಚ್: ಬೆನ್ ಸಾಯರ್

ತಂಡದ ಮೆಂಟರ್: ಸಾನಿಯಾ ಮಿರ್ಜಾ

ಸಹಾಯಕ ಕೋಚ್ ಮತ್ತು ಸ್ಕೌಟಿಂಗ್ ಮುಖ್ಯಸ್ಥ: ಮಲೋಲನ್ ರಂಗರಾಜನ್

ಸ್ಕೌಟ್ ಮತ್ತು ಫೀಲ್ಡಿಂಗ್ ಕೋಚ್: ವನಿತಾ ವಿ.ಆರ್

ಬ್ಯಾಟಿಂಗ್ ಕೋಚ್: ಆರ್‌ಎಕ್ಸ್ ಮುರಳಿ

ಟೀಂ ಮ್ಯಾನೇಜರ್ ಮತ್ತು ತಂಡದ ವೈದ್ಯೆ: ಡಾ. ಹರಿಣಿ

ಮುಖ್ಯ ಅಥ್ಲೆಟಿಕ್ ಥೆರಪಿಸ್ಟ್: ನವನಿತಾ ಗೌತಮ್

"ಭಾರತದ ಮಾಜಿ ಕ್ರಿಕೆಟರ್ ವನಿತಾ ವಿಆರ್ ಅವರನ್ನು ನಮ್ಮ ತಂಡದ ಸ್ಕೌಟ್ ಆಗಿ ನೇಮಿಸುವುದು ಪ್ರಮುಖವಾಗಿತ್ತು. ಅವರು ದೇಶೀಯ ಟೂರ್ನಿ ಮತ್ತು ವಿಶ್ವದ ಸಮಕಾಲೀನ ಕ್ರಿಕೆಟಿಗರ ಬಗ್ಗೆ ಅಪಾರ ಅನುಭವ ಮತ್ತು ಜ್ಞಾನವನ್ನು ಹೊಂದಿದ್ದಾರೆ. ಆಕೆ ನೀಡುವ ಸಲಹೆ ಮತ್ತು ಮಾಹಿತಿಗಳು ಮಹಿಳಾ ತಂಡಕ್ಕೆ ಮಹತ್ವದ್ದಾಗಿದೆ," ಎಂದು ಆರ್‌ಸಿಬಿ ಅಧ್ಯಕ್ಷ ಪ್ರತ್ಮೇಶ್ ಮಿಶ್ರಾ ತಿಳಿಸಿದ್ದಾರೆ.

WPL 2023: Royal Challengers Bangalore Womens Team Coaches And Support Staffs Details


ಆರ್‌ಸಿಬಿ ಖರೀದಿಸಿದ ಆಟಗಾರ್ತಿಯರ ಸಂಪೂರ್ಣ ಪಟ್ಟಿ
ಸ್ಮೃತಿ ಮಂಧಾನ, ದಿಶಾ ಕಸತ್, ರೇಣುಕಾ ಸಿಂಗ್, ಪ್ರೀತಿ ಬೋಸ್, ಕೋಮಲ್ ಝಂಝಾದ್, ಮೇಗನ್ ಶುಟ್, ಸಹನಾ ಪವಾರ್, ರಿಚಾ ಘೋಷ್, ಇಂದ್ರಾಣಿ ರಾಯ್, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಎರಿನ್ ಬರ್ನ್ಸ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀಥರ್ ನೈಟ್, ಡೇನ್ ವಾನ್ ನೀಕೆರ್ಕ್, ಪೂನಂ ಖೇಮ್ನಾರ್

Story first published: Wednesday, February 15, 2023, 14:55 [IST]
Other articles published on Feb 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+