
ಸ್ಮೃತಿ ಮಂಧಾನ- ಆರ್‌ಸಿಬಿ ನಾಯಕಿ
ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕಿ ಸ್ಮೃತಿ ಮಂಧಾನ ಅವರು 3.4 ಕೋಟಿ ರೂ. ಪಡೆದಿದ್ದಾರೆ. ಆದರೆ, ಬ್ಯಾಟ್‌ನೊಂದಿಗೆ ಮತ್ತು ನಾಯಕಿಯಾಗಿ ಪಂದ್ಯಾವಳಿಯಲ್ಲಿ ಅವರ ಇದುವರೆಗಿನ ಪ್ರದರ್ಶನಗಳು ಅತ್ಯಂತ ಕಳಪೆಯಾಗಿದೆ.
ಚುಟುಕು ಕ್ರಿಕೆಟ್‌ನ ಸ್ವರೂಪದಲ್ಲಿ ಅಪಾರ ಅನುಭವ ಹೊಂದಿದ ಹೊರತಾಗಿಯೂ ಸ್ಮೃತಿ ಮಂಧಾನ ಆಡಿದ ಐದು ಪಂದ್ಯಗಳಲ್ಲಿ ಕೇವಲ 88 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ಸ್ಪಿನ್ ಬೌಲರ್‌ಗಳ ವಿರುದ್ಧ ರನ್ ಗಳಿಸಲು ವಿಫಲರಾಗಿ ವಿಕೆಟ್ ಒಪ್ಪಿಸಿದ್ದಾರೆ. ಆರ್‌ಸಿಬಿ ತಂಡದ ಇನ್ನಿಂಗ್ಸ್‌ಗೆ ಉತ್ತಮ ಆರಂಭವನ್ನು ನೀಡಲು ಸ್ಮೃತಿ ಮಂಧಾನ ವಿಫಲರಾಗಿರುವುದು, ಸತತ ಸೋಲಿಗೆ ಕಾರಣಗಳಲ್ಲಿ ಒಂದಾಗಿದೆ. ಹೀಗಾಗಿ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.
ಸ್ಮೃತಿ ಮಂಧಾನ ನಾಯಕತ್ವದಲ್ಲಿ ಆರ್‌ಸಿಬಿ ತಂಡ ಪಂದ್ಯಾವಳಿಯಲ್ಲಿ ಇನ್ನೂ ಒಂದು ಪಂದ್ಯವನ್ನು ಗೆದ್ದಿಲ್ಲ. ಆರ್‌ಸಿಬಿ ತಂಡದ ಪ್ಲೇಆಫ್ ಬಾಗಿಲು ಬಹುತೇಕ ಮುಚ್ಚಿದೆ. ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ವಿರಳ ಅವಕಾಶವಿದ್ದು, ಉಳಿದ ಮೂರು ಪಂದ್ಯಗಳನ್ನು ಗೆದ್ದು, ಬೇರೆ ತಂಡಗಳ ಫಲಿತಾಂಶಗಳನ್ನು ಅವಲಂಭಿಸಬೇಕಿದೆ. ಮುಂದಿನ ಪಂದ್ಯಗಳಲ್ಲಾದರೂ ಸ್ಮೃತಿ ಮಂಧಾನ ಕಳಪೆ ಬ್ಯಾಟಿಂಗ್ ಫಾರ್ಮ್‌ನಿಂದ ಹೊರಬರಬೇಕಿದೆ.

ರಿಚಾ ಘೋಷ್ - ಆರ್‌ಸಿಬಿ ವಿಕೆಟ್ ಕೀಪರ್- ಬ್ಯಾಟರ್
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ರಿಚಾ ಘೋಷ್ 68ರ ಸರಾಸರಿಯಲ್ಲಿ 136 ರನ್‌ಗಳ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ, ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ತಮ್ಮ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ಅವರ ವಿಕೆಟ್ ಕೀಪಿಂಗ್ ವಿಶ್ವಾಸಾರ್ಹವಾಗಿದ್ದರೂ, ಬ್ಯಾಟಿಂಗ್‌ನಲ್ಲಿ ಸ್ಫೋಟಿಸಲು ವಿಫಲರಾಗಿದ್ದಾರೆ. ಇದರಿಂದಾಗಿ ಆರ್‌ಸಿಬಿ ತಂಡವು ಅವರಿಂದ ಉತ್ತಮ ಪ್ರದರ್ಶನ ಬಯಸುತ್ತಿದೆ.
ಆಡಿದ ಐದು ಪಂದ್ಯಗಳಲ್ಲಿ ರಿಚಾ ಘೋಷ್ ಕೇವಲ 78 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಇದು ಅವರ ಸಾಮರ್ಥ್ಯಕ್ಕಿಂತ ಕಡಿಮೆಯಾಗಿದೆ. 1.9 ಕೋಟಿ ರೂ.ಗೆ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಆರ್‌ಸಿಬಿ ತಂಡವು ಪ್ಲೇಆಫ್‌ನಲ್ಲಿ ಸ್ಥಾನವನ್ನು ಪಡೆಯಲು ಉಳಿದಿರುವ ಪಂದ್ಯಗಳಲ್ಲಿ ರಿಚಾ ಘೋಷ್ ಅವರಿಂದ ರನ್ ಹೊಳೆ ಹರಿಯಬೇಕಿದೆ. ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ರಿಚಾ ಘೋಷ್ ಎದುರಾಳಿ ತಂಡದ ವಿರುದ್ಧ ಸಿಡಿಯಬೇಕಿದೆ.

ಅಂಜಲಿ ಸರ್ವಾಣಿ- ಯುಪಿ ವಾರಿಯರ್ಸ್
ಆಂಧ್ರಪ್ರದೇಶದ ಎಡಗೈ ವೇಗಿ ಅಂಜಲಿ ಸರ್ವಾಣಿ ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯಾವಳಿಯಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ಯುಪಿ ವಾರಿಯರ್ಸ್ ತಂಡದ ಪರ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದಿರುವುದು ಅವರ ಬೌಲಿಂಗ್ ವೈಫಲ್ಯ ಎತ್ತಿ ತೋರಿಸುತ್ತಿದೆ.
ಇಲ್ಲಿಯವರೆಗೆ ಪಂದ್ಯಾವಳಿಯಲ್ಲಿ ಅವರ ಕಡೆಯಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ. ಎದುರಾಳಿಯ ಬ್ಯಾಟರ್‌ಗಳಿಗೆ ಸುಲಭವಾದ ಗುರಿಯಾಗಿ, ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದಾರೆ.
ಭಾರತ ಮಹಿಳಾ ತಂಡದ ಆಡುವ ಹನ್ನೊಂದರ ಬಳಗದಿಂದ ಹೊರಗಿಡಲಾಗಿದ್ದರೂ, ಅಂಜಲಿ ಸರ್ವಾಣಿ ಟಿ20 ತಂಡದ ಪ್ರಮುಖ ಸದಸ್ಯೆಯಾಗಿದ್ದಾಳೆ. 25 ವರ್ಷದ ಅಂಜಲಿ ಸರ್ವಾಣಿ ತನ್ನ ಬೌಲಿಂಗ್ ಕೌಶಲ್ಯವನ್ನು ಪ್ರದರ್ಶಿಸಲು ಮತ್ತು ರಾಷ್ಟ್ರೀಯ ತಂಡಕ್ಕೆ ಮರಳಲು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸಿಕ್ಕಿರುವ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.


Click it and Unblock the Notifications
