WPL 2023 Tickets: ಮಹಿಳಾ ಪ್ರೀಮಿಯರ್ ಲೀಗ್ ಟಿಕೆಟ್ ಬೆಲೆ, ಬುಕ್ಕಿಂಗ್ ಎಲ್ಲಿ, ಹೇಗೆ?; ಬಿಸಿಸಿಐನಿಂದ ಬಂಪರ್ ಆಫರ್!

2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್(WPL) ಪಂದ್ಯಾವಳಿಗಾಗಿ ಅಭಿಮಾನಿಗಳ ಕಾತರದಿಂದ ಕಾಯುತ್ತಿದ್ದು, ಶನಿವಾರ, ಮಾರ್ಚ್ 4ರಂದು ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಉದ್ಘಾಟನಾ ಟೂರ್ನಿಯ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.
ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿರುವ ಐದು ತಂಡಗಳೆಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್ ಜೊತೆಗೆ ಹೊಸ ತಂಡಗಳ ಜೊತೆಗೆ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಸೇರ್ಪಡೆಯಾಗಿವೆ.
WPL 2023: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ತಂಡಗಳ ನಾಯಕಿಯರು, ಕೋಚ್‌ಗಳ ಪಟ್ಟಿ
2023ರ ಮಹಿಳಾ ಪ್ರೀಮಿಯರ್ ಲೀಗ್ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಒಟ್ಟು 22 ಪಂದ್ಯಗಳನ್ನು ಆಡಿಸಲಾಗುತ್ತದೆ. ಈಗಾಗಲೇ ಎಲ್ಲಾ ಐದೂ ತಂಡಗಳು ಮುಂಬೈ ತಲುಪಿವೆ.

ಇದೇ ವೇಳೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ಟಿಕೆಟ್‌ಗಳು ಲಭ್ಯವಾಗುವಂತೆ ಮಾಡಿದ್ದು, WPL 2023ರ ಮೊದಲ ಪಂದ್ಯವು ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಆನ್‌ಲೈನ್‌ನಲ್ಲಿ WPL 2023 ಟಿಕೆಟ್‌ಗಳನ್ನು ಎಲ್ಲಿ ಖರೀದಿಸಬೇಕು?
ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ಗೆ ಅಧಿಕೃತ ಟಿಕೆಟ್ ಪಾಲುದಾರರಾಗಿ BookMyShow ಅನ್ನು ನೇಮಿಸಲಾಗಿದೆ. ಎಂದು ಬಿಸಿಸಿಐ ತಿಳಿಸಿದ್ದು, ಎಲ್ಲಾ ಪಂದ್ಯದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು BookMyShow ನಲ್ಲಿ ಭೇಟಿ ನೀಡಬಹುದು. ಇದೇ ವೇಳೆ ಆಪ್‌ಲೈನ್‌ನಲ್ಲಿ WPL ಪಂದ್ಯಗಳ ಟಿಕೆಟ್‌ಗಳನ್ನು ಸ್ಟೇಡಿಯಂನ ಕೌಂಟರ್‌ಗಳಲ್ಲಿ ಆಯಾ ದಿನಾಂಕದಂದು ಖರೀದಿಸಬಹುದು.
WPLನ ಟಿಕೆಟ್‌ಗಳನ್ನು ಯಾವಾಗ ಮಾರಾಟ ಮಾಡಲಾಗುತ್ತದೆ?
ಮಹಿಳಾ ಪ್ರೀಮಿಯರ್ ಲೀಗ್ ಆಫ್‌ಲೈನ್ ಟಿಕೆಟ್‌ಗಳ ಲಭ್ಯತೆಯ ಬಗ್ಗೆ ಇನ್ನೂ ಲಭ್ಯವಿಲ್ಲ. ಪಂದ್ಯದ ಒಂದು ಅಥವಾ ಎರಡು ದಿನಗಳ ಮುನ್ನ ಕೌಂಟರ್ ಓಪನ್ ಮಾಡಲಾಗುತ್ತದೆ. ಆದರೆ, ಮಾರ್ಚ್ 4ರಂದು ನಡೆಯುವ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಆರಂಭಿಕ ಪಂದ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ BookMyShow ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಮಹಿಳಾ ಪ್ರೀಮಿಯರ್ ಲೀಗ್ 2023ರ ಟಿಕೆಟ್ ಬೆಲೆಗಳು; ಮಹಿಳೆಯರಿಗೆ ಉಚಿತ
ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ 2023ರ ಟಿಕೆಟ್‌ಗಳ ಬೆಲೆಯನ್ನು ಎರಡು ಪಟ್ಟಿಗೆ ಇಳಿಸಲಾಗಿದ್ದು, ಪುರುಷ ವೀಕ್ಷಕರಿಗೆ BookMyShow ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಪ್ರಸ್ತುತ ಲಭ್ಯವಿರುವ ವಿವರಗಳ ಪ್ರಕಾರ, ಟಿಕೆಟ್‌ಗಳ ಬೆಲೆಗಳು 100 ರೂ. ಮತ್ತು 400 ರೂ. ಇದೆ. ಬಿಸಿಸಿಐನ ಪ್ರಮುಖ ನಿರ್ಧಾರವಾಗಿ ಮಹಿಳಾ ಪ್ರೇಕ್ಷಕರಿಗೆ ಯಾವುದೇ ಪ್ರವೇಶ ಶುಲ್ಕವನ್ನು ವಿಧಿಸಲಾಗಿಲ್ಲ.
ಮಹಿಳಾ ಪ್ರೀಮಿಯರ್ ಲೀಗ್ 2023ರ ಪಂದ್ಯಗಳಿಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶವು ಸಂಪೂರ್ಣ ಉಚಿತವಾಗಿದೆ. ಮಹಿಳಾ ಕ್ರಿಕೆಟ್ ಅನ್ನು ಪ್ರೋತ್ಸಾಹಿಸಲು ಮತ್ತು ಮಹಿಳಾ ಆಟಗಾರ್ತಿಯರನ್ನು ಹುರಿದುಂಬಿಸಲು ಮಹಿಳಾ ಪ್ರೇಕ್ಷಕರಿಗೆ ಉಚಿತ ಪ್ರವೇಶ ನೀಡಲಾಗಿದೆ.
ಕಳೆದ ಡಿಸೆಂಬರ್ 2022ರಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮಹಿಳಾ ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಲಾಗಿತ್ತು ಮತ್ತು ಈ ವೇಳೆ ಭಾರತೀಯ ಮಹಿಳಾ ತಂಡವನ್ನು ಬೆಂಬಲಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಬಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications