Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2023: ಹರ್ಲೀನ್ ಸ್ಫೋಟಕ ಬ್ಯಾಟಿಂಗ್; ಯುಪಿ ವಾರಿಯರ್ಸ್‌ಗೆ ಸವಾಲಿನ ಗುರಿ ನೀಡಿದ ಗುಜರಾತ್ ಜೈಂಟ್ಸ್

WPL 2023: UP Warriorz Need 170 Runs To Win Against Gujarat Giants Womens

ಭಾನುವಾರ, ಮಾರ್ಚ್ 5ರಂದು ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ 2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನ 3ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಮಹಿಳಾ ತಂಡದ ವಿರುದ್ಧ ಗುಜರಾತ್ ಜೈಂಟ್ಸ್ ಮಹಿಳಾ ತಂಡ ಉತ್ತಮ ಮೊತ್ತ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸ್ನೇಹ್ ರಾಣಾ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿದ್ದು, ಯುಪಿ ವಾರಿಯರ್ಸ್‌ಗೆ 170 ರನ್‌ಗಳ ಗುರಿ ನೀಡಿದೆ.

ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಸಬ್ಬಿನೇನಿ ಮೇಘನಾ ಮತ್ತು ಸೋಫಿಯಾ ಡಂಕ್ಲಿ ಮೊದಲ ವಿಕೆಟ್‌ಗೆ 3.5 ಓವರ್‌ಗಳಲ್ಲಿ 34 ರನ್ ಜೊತೆಯಾಟ ನೀಡಿದರು. ಈ ವೇಳೆ 13 ರನ್ ಗಳಿಸಿದ್ದ ಸೋಫಿಯಾ ಡಂಕ್ಲಿ ಔಟಾದರು. ಸಬ್ಬಿನೇನಿ ಮೇಘನಾ 24 ಬಾರಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಹರ್ಲೀನ್ ಡಿಯೋಲ್ 32 ಎಸೆತಗಳಲ್ಲಿ 7 ಬೌಂಡರಿಗಳ ಸಮೇತ 46 ರನ್ ಚಚ್ಚಿದರು.

WPL 2023: UP Warriorz Need 170 Runs To Win Against Gujarat Giants Womens

ಅನ್ನಾಬೆಲ್ ಸದರ್ಲ್ಯಾಂಡ್ 8 ರನ್, ಸುಷ್ಮಾ ವರ್ಮಾ 9 ರನ್, ಆಶ್ಲೀಗ್ ಗಾರ್ಡ್ನರ್ 25 ರನ್ ಗಳಿಸಿ ಔಟಾದರೆ, ದಯಾಳನ್ ಹೇಮಲತಾ 13 ಎಸೆತಗಳಲ್ಲಿ ಅಜೇಯ 21 ರನ್ ಮತ್ತು ಸ್ನೇಹ್ ರಾಣಾ ಅಜೇಯ 9 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಯುಪಿ ವಾರಿಯರ್ಸ್ ಪರ ದೀಪ್ತಿ ಶರ್ಮಾ 4 ಓವರ್‌ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರೆ, ಸೋಫಿ ಎಕ್ಲೆಸ್ಟೋನ್ 4 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಅಂಜಲಿ ಶರ್ವಾಣಿ ಮತ್ತು ತಹ್ಲಿಯಾ ಮೆಗ್ರಾತ್ ತಲಾ ಒಂದೊಂದು ವಿಕೆಟ್ ಪಡೆದರು.

ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ ಆಡುವ 11ರ ಬಳಗ
ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ಕಿರಣ್ ನವಗಿರೆ, ದೇವಿಕಾ ವೈದ್ಯ, ರಾಜೇಶ್ವರಿ ಗಾಯಕ್ವಾಡ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಶರ್ವಾಣಿ.

ಗುಜರಾತ್ ಜೈಂಟ್ಸ್: ಸ್ನೇಹ್ ರಾಣಾ (ನಾಯಕಿ), ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಳನ್ ಹೇಮಲತಾ, ಕಿಮ್ ಗಾರ್ತ್, ಅನ್ನಾಬೆಲ್ ಸದರ್ಲ್ಯಾಂಡ್, ಮಾನ್ಸಿ ಜೋಶಿ, ತನುಜಾ ಕನ್ವರ್.

Story first published: Sunday, March 5, 2023, 21:12 [IST]
Other articles published on Mar 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+