For Quick Alerts
ALLOW NOTIFICATIONS  
For Daily Alerts
 

WPL 2023: ಹೇಮಲತಾ, ಗಾರ್ಡ್ನರ್ ಮಿಂಚಿನ ಅರ್ಧಶತಕ; ಯುಪಿ ವಾರಿಯರ್ಸ್‌ಗೆ ಬೃಹತ್ ಗುರಿ ನೀಡಿದ ಗುಜರಾತ್ ಜೈಂಟ್ಸ್

WPL 2023: UP Warriorz Need 179 Runs To Win Against Gujarat Giants In WPL

ಸೋಮವಾರ, ಮಾರ್ಚ್ 20ರಂದು ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು ಯುಪಿ ವಾರಿಯರ್ಸ್ ತಂಡದ ವಿರುದ್ಧ ಸವಾಲಿನ ಮೊತ್ತ ಕಲೆಹಾಕಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಪೇರಿಸಿದ್ದು, ಯುಪಿ ವಾರಿಯರ್ಸ್ ತಂಡಕ್ಕೆ 179 ರನ್‌ಗಳ ಗೆಲುವಿನ ಗುರಿ ನೀಡಿದೆ.

ಗುಜರಾತ್ ಜೈಂಟ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಅರಂಭಿಸಿದ ಸೋಫಿಯಾ ಡಂಕ್ಲೆ ಮತ್ತು ಲಾರಾ ವೊಲ್ವಾರ್ಡ್ಟ್ ಉತ್ತಮ ಅರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 4.1 ಓವರ್‌ಗಳಲ್ಲಿ 41 ರನ್‌ಗಳ ಜೊತೆಯಾಟ ನೀಡಿದರು. ಸೋಫಿಯಾ ಡಂಕ್ಲೆ 13 ಎಸೆತಗಳಲ್ಲಿ 23 ರನ್ ಗಳಿಸಿದರೆ, ಲಾರಾ ವೊಲ್ವಾರ್ಡ್ಟ್ 13 ಎಸೆತಗಳಲ್ಲಿ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

WPL 2023: UP Warriorz Need 179 Runs To Win Against Gujarat Giants In WPL

ನಂತರ ಬಂದ ಹರ್ಲೀನ್ ಡಿಯೋಲ್ 4 ಗಳಿಸಿ ಔಟಾದರೆ, ಹೇಮಲತಾ ದಯಾಳನ್ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 57 ರನ್ ಬಾರಿಸಿದರು. ಇವರಿಗೆ ಸಾಥ್ ನೀಡಿದ ಆಶ್ಲೀಗ್ ಗಾರ್ಡ್ನರ್ ಸಹ 39 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಮೇತ 60 ರನ್ ಬಾರಿಸಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 93 ರನ್‌ಗಳ ಜೊತೆಯಾಟ ನೀಡಿದರು.

ಯುಪಿ ವಾರಿಯರ್ಸ್ ಪರ ಬೌಲಿಂಗ್‌ನಲ್ಲಿ ಪಾರ್ಶವಿ ಚೋಪ್ರಾ ಎರಡು ವಿಕೆಟ್, ರಾಜೇಶ್ವರಿ ಗಾಯಕ್ವಾಡ್ ಎರಡು ವಿಕೆಟ್ ಮತ್ತು ಅಂಜಲಿ ಸರ್ವಾಣಿ ಹಾಗೂ ಸೋಫಿ ಎಕ್ಲೆಸ್ಟೋನ್ ತಲಾ ಒಂದೊಂದು ವಿಕೆಟ್ ಪಡೆದರು.

WPL 2023: UP Warriorz Need 179 Runs To Win Against Gujarat Giants In WPL

ಗುಜರಾತ್ ಜೈಂಟ್ಸ್ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಮುಖಾಮುಖಿಯಲ್ಲಿ ರೋಚಕ ಎಂಟು ವಿಕೆಟ್‌ಗಳ ಸೋಲಿನ ನಂತರ ಈ ಪಂದ್ಯವನ್ನು ಆಡುತ್ತಿದೆ.

ಮತ್ತೊಂದೆಡೆ, ಯುಪಿ ವಾರಿಯರ್ಸ್ ತಂಡವು ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್‌ಗಳಿಂದ ಗೆಲುವು ದಾಖಲಿಸಿ ಈ ಪಂದ್ಯದಲ್ಲಿ ಆಡುತ್ತಿದೆ. ಇಂದಿನ ಯುಪಿ ವಾರಿಯರ್ಸ್ ತಂಡದ ಗೆಲುವು ಆರ್‌ಸಿಬಿ ತಂಡದ ಪ್ಲೇಆಫ್ ಕನಸನ್ನು ಚಿವುಟಿ ಹಾಕಲಿದೆ.

ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್ ಆಡುವ 11ರ ಬಳಗ
ಗುಜರಾತ್ ಜೈಂಟ್ಸ್ ತಂಡ: ಸೋಫಿಯಾ ಡಂಕ್ಲೆ, ಲಾರಾ ವೊಲ್ವಾರ್ಡ್ಟ್, ಆಶ್ಲೀಗ್ ಗಾರ್ಡ್ನರ್, ದಯಾಳನ್ ಹೇಮಲತಾ, ಹರ್ಲೀನ್ ಡಿಯೋಲ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಸ್ನೇಹ್ ರಾಣಾ(ನಾಯಕಿ), ಕಿಮ್ ಗಾರ್ತ್, ಮೋನಿಕಾ ಪಟೇಲ್, ತನುಜಾ ಕನ್ವರ್, ಅಶ್ವನಿ ಕುಮಾರಿ .

ಯುಪಿ ವಾರಿಯರ್ಜ್ ತಂಡ: ದೇವಿಕಾ ವೈದ್ಯ, ಅಲಿಸ್ಸಾ ಹೀಲಿ (ವಿಕೆಟ್ ಕೀಪರ್/ ನಾಯಕಿ), ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಸಿಮ್ರಾನ್ ಶೇಖ್, ಪಾರ್ಶವಿ ಚೋಪ್ರಾ, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

Story first published: Monday, March 20, 2023, 17:06 [IST]
Other articles published on Mar 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+