For Quick Alerts
ALLOW NOTIFICATIONS  
For Daily Alerts
 

WPL 2023: ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ ಸಂಭಾವ್ಯ ಆಡುವ ಬಳಗ, ಪಿಚ್, ಲೈವ್ ಸ್ಟ್ರೀಮಿಂಗ್ ವರದಿ

WPL 2023: UP Warriorz vs Gujarat Giants Probable Playing 11, Pitch Report, TV And Live Streaming Details

2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನ ಮೂರನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವು ತಮ್ಮ ಮೊದಲ ಪಂದ್ಯವನ್ನು ಗುಜರಾತ್ ಜೈಂಟ್ಸ್ ಮಹಿಳಾ ತಂಡದ ವಿರುದ್ಧ ಭಾನುವಾರ, ಮಾರ್ಚ್ 5ರಂದು ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಸೆಣಸಾಡಲಿದೆ.

ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಶನಿವಾರದಂದು ಮುಂಬೈ ಇಂಡಿಯನ್ಸ್ ವಿರುದ್ಧ 143 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬೆತ್ ಮೂನಿ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಗೆಲ್ಲಲು ಅಲಿಸ್ಸಾ ಹೀಲಿ ನಾಯಕತ್ವದ ಯುಪಿ ವಾರಿಯರ್ಸ್ ಎದುರು ನೋಡುತ್ತಿದೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ 30 ಎಸೆತಗಳಲ್ಲಿ 65 ಮತ್ತು ಅಮೆಲಿಯಾ ಕೆರ್ ಅವರ 24 ಎಸೆತಗಳಲ್ಲಿ ಅಜೇಯ 45 ರನ್‌ಗಳ ನೆರವಿನ ಮೂಲಕ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 207 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಕಠಿಣ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ ತಂಡವು ನಾಯಕಿ ಬೆತ್ ಮೂನಿ ಗಾಯದಿಂದ ನಿವೃತ್ತಿ ಮತ್ತು ಉಳಿದ ಬ್ಯಾಟರ್‌ಗಳ ವೈಫಲ್ಯದಿಂದ ಅಂತಿಮವಾಗಿ 15.1 ಓವರ್‌ಗಳಲ್ಲಿ 64 ರನ್‌ಗಳಿಗೆ 9 ವಿಕೆಟ್ ಮಾತ್ರ ಗಳಿಸಿತು.

ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ ಪಂದ್ಯದ ವಿವರ

ಸಮಯ ಮತ್ತು ಸ್ಥಳ: ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ ಪಂದ್ಯವು ಭಾನುವಾರ, ಮಾರ್ಚ್ 5ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿದೆ.

ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ: ಮಹಿಳಾ ಪ್ರೀಮಿಯರ್ ಲೀಗ್ 2023ರ ಮೊದಲ ಪಂದ್ಯ ಭಾರತದಲ್ಲಿ Sports18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದ್ದರೆ, JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.

ಡಿವೈ ಪಾಟೀಲ್ ಪಿಚ್ ವರದಿ
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನ ಪಿಚ್ ದೊಡ್ಡ ಸ್ಕೋರ್ ಗಳಿಸಲು ಬ್ಯಾಟಿಂಗ್‌ಗೆ ನೆರವಾಗಲಿದೆ. ಇಲ್ಲಿ ಬೌಲರ್ಸ್ ವಿಕೆಟ್ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಸರಾಸರಿ ರನ್ 160 ಆಗಿರುತ್ತದೆ.

ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ ಸಂಭಾವ್ಯ ಆಡುವ 11ರ ಬಳಗ
ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ನಾಯಕಿ), ಕಿರಣ್ ನವಗಿರೆ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಪಾರ್ಶವಿ ಚೋಪ್ರಾ, ಗ್ರೇಸ್ ಹ್ಯಾರಿಸ್, ರಾಜೇಶ್ವರಿ ಗಾಯಕ್ವಾಡ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್.

ಗುಜರಾತ್ ಜೈಂಟ್ಸ್: ಸ್ನೇಹ್ ರಾಣಾ (ನಾಯಕಿ), ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಳನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್, ಮಾನ್ಸಿ ಜೋಶಿ, ಮೋನಿಕಾ ಪಟೇಲ್.

Story first published: Sunday, March 5, 2023, 17:16 [IST]
Other articles published on Mar 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+